»   » ಚಂದನವನದ ನಟಿಯರ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ

ಚಂದನವನದ ನಟಿಯರ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ

Posted By:
Subscribe to Filmibeat Kannada

ಇಂದು ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ನೀವು ಕೂಡ ನಿಮ್ಮ ಕುಟುಂಬದ ಜೊತೆ ಸೇರಿ ಹಬ್ಬವನ್ನು ಜೋರಾಗಿ ಆಚರಿಸುತ್ತಾ ಇರುತ್ತೀರಾ. ಅದೇ ರೀತಿ ಸ್ಯಾಂಡಲ್ ವುಡ್ ನಟಿಯರು ಸಹ ಈ ವರ್ಷದ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ದಿನ ಹಾಡಿನ ಮೂಲಕ ಮಹಾಲಕ್ಷ್ಮಿ ಬರಮಾಡಿಕೊಳ್ಳಿ...

ಕನ್ನಡದ ನಟಿಯರಾದ ಪ್ರಿಯಾಂಕ ಉಪೇಂದ್ರ, ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ, ಸಂಜನಾ ಸೇರಿದಂತೆ ಅನೇಕ ನಟಿಯರು ತಮ್ಮ ಮನೆಯಲ್ಲಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಯಾವಾಗಲೂ ಸಿನಿಮಾದ ಕೆಲಸಗಳಲ್ಲಿ ಬಿಜಿ ಇರುವ ಈ ನಟಿಯರು ಇಂದು ಹಬ್ಬದ ಮೂಡ್ ನಲ್ಲಿ ಇದ್ದಾರೆ. ಮುಂದೆ ಓದಿ..

ಪ್ರಿಯಾಂಕ ಉಪೇಂದ್ರ

ಯಾವುದೇ ಹಬ್ಬ ಬಂದರೂ ನಟಿ ಪ್ರಿಯಾಂಕ ಉಪೇಂದ್ರ ಮನೆಯಲ್ಲಿ ಪೂಜೆ ಪುನಸ್ಕಾರ ಜೋರಾಗಿಯೇ ಇರುತ್ತದೆ. ಇಂದು ಕೂಡ ಅವರ ಮನೆಯಲ್ಲಿ ತಮ್ಮ ಪತಿ ಉಪೇಂದ್ರ ಮತ್ತು ಮಕ್ಕಳೊಂದಿಗೆ ಪ್ರಿಯಾಂಕ 'ವರಮಹಾಲಕ್ಷ್ಮಿ' ಹಬ್ಬವನ್ನು ಆಚರಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಎಲ್ಲ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಜೊತೆಗೆ ಹಬ್ಬದ ವಿಶೇಷವಾಗಿ ರಶ್ಮಿಕಾ ಒಂದು ಚೆಂದದ ಫೋಟೋ ಹಾಕಿದ್ದಾರೆ.

ರಾಧಿಕಾ ಪಂಡಿತ್

ನಟಿ ರಾಧಿಕ ಪಂಡಿತ್ ಅವರಿಗೆ ವರಮಹಾಲಕ್ಷ್ಮಿ ಹಬ್ಬ ಬಹಳ ವಿಶೇಷವಾಗಿದೆ. ಯಾಕಂದ್ರೆ ಯಶ್ ಮೊದಲು ರಾಧಿಕಾ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು ಇದೇ ದಿನ ಅಂತೆ. ಅದ್ದರಿಂದ ಅವರ ಪಾಲಿಗೆ ಇದು ತುಂಬ ಸ್ಪೆಷಲ್ ಹಬ್ಬವಾಗಿದೆ.

ರಕ್ಷಿತಾ ಪ್ರೇಮ್

ನಟಿ ರಕ್ಷಿತಾ ಪ್ರೇಮ್ ಮನೆಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ದಿನ ದೇವಿಗೆ ಪೂಜೆ ಮಾಡಿರುವ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ರಕ್ಷಿತಾ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಹರ್ಷಿಕಾ ಪೂಣಚ್ಚ

ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ನಟಿ ಹರ್ಷಿಕಾ ಪೂಣಚ್ಚ 'ಸರಯೂ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರ್ಷಿಕಾ ಪೂಣಚ್ಚ ಅವರ ವಿಶೇಷ ಸಂಚಿಕೆ ಇಂದು ರಾತ್ರಿ 7.00 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸಂಜನಾ

ನಟಿ ಸಂಜನಾ ಕೂಡ ವರಮಹಾಲಕ್ಷ್ಮಿ ಹಬ್ಬದ ಮೂಡ್ ನಲ್ಲಿ ಇದ್ದಾರೆ. ಸಿನಿಮಾದ ಕೆಲಸ ಇದ್ದರೂ ಸಹ ಬಿಡುವು ಮಾಡಿಕೊಂಡು ತಮ್ಮ ಕುಟುಂಬದೊಂದಿಗೆ ಸಂಜನಾ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

English summary
Check out the pictures of Sandalwood Actresses Varamahalakshmi Festival Celebration
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada