For Quick Alerts
  ALLOW NOTIFICATIONS  
  For Daily Alerts

  ಪಾರ್ವತಮ್ಮ ರಾಜ್ ಕುಮಾರ್ ಅಗಲಿಕೆಗೆ ಕಂಬನಿ ಮಿಡಿದ ತಾರೆಯರು

  By Suneel
  |

  ವರನಟ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇಂದು(ಮೇ31) ನಿಧನರಾಗಿದ್ದಾರೆ.

  ಬಹು ಅಂಗಾಂಗ ವೈಫಲ್ಯದಿಂದ ಬಳಲುದಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದು ಬೆಳಗ್ಗೆ 4.40 ಗಂಟೆ ಸುಮಾರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್ ಮತ್ತು ಇಬ್ಬರು ಪುತ್ರಿಯರಾದ ಪೂರ್ಣಿಮಾ, ಲಕ್ಷ್ಮೀ, ಸೋದರರಾದ ಎಸ್ ಎ ಚಿನ್ನೇಗೌಡ, ಗೋವಿಂದರಾಜ್ ಹಾಗೂ ಶ್ರೀನಿವಾಸ್ ಸೇರಿದಂತೆ ಮೊಮ್ಮಕ್ಕಳು ಮತ್ತು ಅಪಾರ ಅಭಿಮಾನಿ ವರ್ಗವನ್ನು ಪಾರ್ವತಮ್ಮ ರಾಜ್ ಕುಮಾರ್ ಅವರು ಅಗಲಿದ್ದಾರೆ. ಅವರ ಅಗಲಿಕೆಗೆ ನೊಂದು ಕನ್ನಡ ಚಿತ್ರರಂಗದ ತಾರೆಯರು ಕಂಬನಿ ಮಿಡಿದು ನುಡಿನಮನ ಸಲ್ಲಿಸಿದ್ದಾರೆ.

  ಪಾರ್ವತಮ್ಮ ರಾಜ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಪ್ರಸ್ತುತ ರಾಘವೇಂದ್ರ ರಾಜ್ ಕುಮಾರ್ ಅವರ ಮನೆಯಲ್ಲಿ ಗಣ್ಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 10 ಗಂಟೆ ವೇಳೆಗೆ ಸದಾಶಿವನಗರದ ಪೂರ್ಣಪ್ರಜ್ಞ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಸಂಜೆ 6 ಗಂಟೆ ವೇಳೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು.

  ಮಂಜುಳಾ ಗುರುರಾಜ್, ಹಿನ್ನೆಲೆ ಗಾಯಕಿ

  ಬೆಳಿಗ್ಗೆನೇ ಈ ಸುದ್ದಿ ಕೇಳಿ ದುಃಖ ಆಯ್ತು. ಇಂತ ಸ್ತ್ರೀ ಶಕ್ತಿ, ದೀಮಂತ ಶಕ್ತಿಯನ್ನು ನಾನು ನನ್ನ ಕ್ಲಿಷ್ಟಕರ ಪರಿಸ್ಥಿತಿಗೆ ಆದರ್ಶವಾಗಿ ಇಟ್ಟುಕೊಂಡಿದ್ದೆ. ನನ್ನ ಸಾಧನೆ ಅಂತ ಏನಾದ್ರು ಇದ್ರೆ ಅದು ಅವರು ನೀಡಿದ ಅವಕಾಶಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ನನ್ನ ಮಾನಸಿಕ ಗುರು.

  ಶ್ರೀನಾಥ್, ನಟ.

  ಅಮ್ಮನನ್ನ ಯಾವ ರೀತಿ ನೆನೆಸಿಕೊಳ್ಳುತ್ತಾರೆ. ರಾಜ್ ಕುಮಾರ್ ಅವರಿಗೆ ಪತ್ನಿಯಾಗಿ ಬಂದ ಪಾರ್ವತಮ್ಮ ನನಗೆ ಅತ್ತಿಗೆಯಾಗಿ, ಅಮ್ಮನಾಗಿ 50 ವರ್ಷಗಳ ಕಾಲ ನಮ್ಮನ್ನು ಸಲಹಿದ್ದಾರೆ. ಅಮ್ಮನ ಪ್ರೀತಿ ಗಳಿಸಿದ್ವಿ. ಇಂದು ಅಮ್ಮ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತೇನೆ. ಇಡೀ ಸಿನಿಮಾ ರಂಗ ಹೇಗಿರಬೇಕು ಅಂತ ಮಾರ್ಗದರ್ಶನ ಮಾಡಿದರು. ಅಷ್ಟೊಂದು ಅಪರೂಪದ ವಯಕ್ತಿತ್ವದವರು.

  ಮುಖ್ಯ ಮಂತ್ರಿ ಚಂದ್ರು

  ಬಹಳ ದುಖಃ ಆಗುತ್ತಿದೆ. ರಾಜ್ ಕುಮಾರ್ ಅಂತ ಒಬ್ಬ ವ್ಯಕ್ತಿಯ ಹಿಂದಿನ ಶಕ್ತಿ ಅವರು. ಇಡೀ ಸಿನಿಮಾ ಇಂಡಸ್ಟ್ರಿಗೆ ತಾಯಿಯಾಗಿದ್ದರು. ನಾವೆಲ್ಲ ಎಷ್ಟೋ ಬಾರಿ ಜೊತೆಗೆ ಊಟ ಮಾಡುತ್ತಿದ್ವಿ. ಅವರ ಎಲ್ಲ ಮಕ್ಕಳಿಗೂ ದೇವರು ಧೈರ್ಯ ಕೊಡಲಿ.

  ಪ್ರೇಮಾ, ನಟಿ

  ನಾನು ಅವರ ವಜ್ರೇಶ್ವರಿ ಬ್ಯಾನರ್ ನ ಮೂಲಕ ಚಿತ್ರರಂಗಕ್ಕೆ ಬಂದೆ. ನನನ್ನು ಕಲಾವಿದೆ ಮಾಡಿದ್ದು ಅವರೇ. ನನ್ನಲ್ಲಿ ಒಂದು ಧೈರ್ಯ ತುಂಬಿದ್ದು ಅವರೇ. ನಾನು ಅವರಿಂದ ಬಹಳ ವಿಷಯಗಳನ್ನು ಕಲಿತುಕೊಂಡಿದ್ದೇನೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಾಗ ಬಹಳ ಸಂತೋಷವಾಗಿತ್ತು. ಆದರೆ ಇಂದು ನಮ್ಮನ್ನು ಅಗಲಿರುವುದು ಮನಸ್ಸಿಗೆ ನೋವುಂಟು ಮಾಡಿದೆ.

  ಸಾ.ರಾ.ಗೋವಿಂದ್, ಕೆಎಫ್‌ಸಿಸಿ ಅಧ್ಯಕ್ಷ

  ಬಹಳ ನೋವಿನ ಸಂಗತಿ. ಆಸ್ಟತ್ರೆಯಲ್ಲಿ ಸಾವು ಬದುಕಿನ ಹೋರಾಟ ನೆಡೆಸಿ ಇಂದು ಅಮ್ಮ ವಿಧಿವಶರಾಗಿದ್ದಾರೆ. ಅವರ ಜೊತೆ ನನ್ನ 35 ವರ್ಷಗಳ ಒಡನಾಟ ಇತ್ತು. ಅವರಿಂದನೇ ನಾನು ಈ ಹೆಸರು ಮಾಡಿದ್ದೇನೆ. ಅವರ ನಿಧನದ ಹಿನ್ನಲೆಯಲ್ಲಿ ಇವತ್ತು ಯಾವುದೇ ಸಿನಿಮಾದ ಚಿತ್ರೀಕರಣ ಇಲ್ಲ. ಮತ್ತು ಚಿತ್ರ ಪ್ರದರ್ಶನವನ್ನು ಸಹ ಮಾಡದಿರಲು ಪ್ರದರ್ಶಕರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

  English summary
  Sandalwood celebrities condolence to Parvathamma Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X