For Quick Alerts
  ALLOW NOTIFICATIONS  
  For Daily Alerts

  ಡ್ರಗ್ ಪೆಡ್ಲರ್ ರಾಹುಲ್ ಜೊತೆ 'ದೇಶಭಕ್ತ' ಪ್ರಶಾಂತ್ ಸಂಬರ್ಗಿ ಫೋಟೋ!

  |

  ''ನಾನೊಬ್ಬ ದೇಶಭಕ್ತ, ನಾನು ಮಾಹಿತಿ ಅಷ್ಟೇ ನೀಡುತ್ತೇನೆ''........ಎಂದು ಮಾಧ್ಯಮಗಳ ಮುಂದೆ ಹೀರೋ ಆಗಿದ್ದ ಪ್ರಶಾಂತ್ ಸಂಬರ್ಗಿ ಈಗ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ಕಾಡುತ್ತಿದೆ.

  Recommended Video

  ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Filmibeat Kannada

  'ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಜಾಲ ಇದೆ, ಕನ್ನಡದ ತಾರೆಯರು ಡ್ರಗ್ ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ, ಬಾಲಿವುಡ್‌ಗೆ ಡ್ರಗ್ಸ್ ಸಪ್ಲೈ ಮಾಡುವ ಇಮ್ತಿಯಾಜ್ ಖಾತ್ರಿ ಜೊತೆ ಸ್ಯಾಂಡಲ್‌ವುಡ್‌ಗೆ ನಂಟಿದೆ' ಮಾಧ್ಯಮಗಳ ಬೊಬ್ಬೆ ಹೊಡೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಈಗ ಡ್ರಗ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಅತಿಥಿಯಾಗಿರುವ ರಾಹುಲ್ ಜೊತೆ ನಂಟು ಹೊಂದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

  ಬಾಲಿವುಡ್ ಡ್ರಗ್ಸ್ ಕಿಂಗ್‌ಪಿನ್ ಜೊತೆ ಸ್ಯಾಂಡಲ್‌ವುಡ್‌ಗೆ ನಂಟು! ಪ್ರಶಾಂತ್ ಸಂಬರ್ಗಿ ಸ್ಫೋಟಕ ಆರೋಪಬಾಲಿವುಡ್ ಡ್ರಗ್ಸ್ ಕಿಂಗ್‌ಪಿನ್ ಜೊತೆ ಸ್ಯಾಂಡಲ್‌ವುಡ್‌ಗೆ ನಂಟು! ಪ್ರಶಾಂತ್ ಸಂಬರ್ಗಿ ಸ್ಫೋಟಕ ಆರೋಪ

  ಇಂಡಸ್ಟ್ರಿಯಲ್ಲಿ ಡ್ರಗ್ ಬಳಕೆಯಾಗುತ್ತಿದೆ ಎಂದು ಆರೋಪಿಸಿ, ಯಾವುದೇ ದಾಖಲೆ ಅಥವಾ ಸಾಕ್ಷ್ಯಗಳನ್ನು ಬಹಿರಂಗಪಡಿಸದೆ, 'ನಾನೊಬ್ಬ ದೇಶಭಕ್ತ, ನಾನು ಮಾಹಿತಿ ಅಷ್ಟೇ ನೀಡುತ್ತೇನೆ' ಎಂದು ನಟಿ ರಾಗಿಣಿ, ಸಂಜನಾ ಹಾಗೂ ಇನ್ನಿತರರ ಬಗ್ಗೆ ಬಹಿರಂಗವಾಗಿ ಟೀಕಿಸಿದ್ದ ಪ್ರಶಾಂತ್ ಸಂಬರ್ಗಿ, ಡ್ರಗ್ ಪೆಡ್ಲರ್ ರಾಹುಲ್ ಜೊತೆಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನುವುದು ಬಹಿರಂಗವಾಗಿದೆ.

  ರಾಹುಲ್ ಜೊತೆ ಸಂಬರ್ಗಿ ಪಾರ್ಟಿ!

  ರಾಹುಲ್ ಜೊತೆ ಸಂಬರ್ಗಿ ಪಾರ್ಟಿ!

  ಸಿಸಿಬಿ ಮಾಹಿತಿ ಪ್ರಕಾರ ರಾಹುಲ್ 2016ರಿಂದಲೂ ಡ್ರಗ್ ಪೆಡ್ಲರ್ ಆಗಿದ್ದ ಎಂದು ತಿಳಿದು ಬಂದಿದೆ. ಆದರೆ, 2017ರಲ್ಲಿ ಯುಬಿ ಸಿಟಿಯಲ್ಲಿ ನಡೆದಿದ್ದ ಪಾರ್ಟಿಯೊಂದರಲ್ಲಿ ರಾಹುಲ್ ಜೊತೆ ಸಂಬರ್ಗಿ ಕಾಣಿಸಿಕೊಂಡಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಹಾಗಾದರೆ, ರಾಹುಲ್ ಡ್ರಗ್ ಪೆಡ್ಲರ್ ಎಂಬ ಮಾಹಿತಿ ಸಂಬರ್ಗಿಗೆ ಗೊತ್ತಿರಲಿಲ್ಲವೇ? ಅಥವಾ ಗೊತ್ತಿದ್ದರೂ ಗೊತ್ತಿಲ್ಲದ ರೀತಿ ಸುಮ್ಮನಿದ್ದಾರಾ? ಎಂಬ ಅನುಮಾನವೂ ಇದೆ.

  ಸಂಬರ್ಗಿ ಪ್ರಚಾರ ಪ್ರಿಯ ಅಷ್ಟೇ

  ಸಂಬರ್ಗಿ ಪ್ರಚಾರ ಪ್ರಿಯ ಅಷ್ಟೇ

  ''ಕನ್ನಡ ಚಿತ್ರರಂಗಕ್ಕೆ ಪ್ರಶಾಂತ್ ಸಂಬರ್ಗಿ ಕೊಡುಗೆ ಏನು? ಯಾವುದೇ ಸಂಬಂಧವಿಲ್ಲದೆ ಚಿತ್ರರಂಗದ ಹೆಸರು ಹಾಳು ಮಾಡುತ್ತಿದ್ದಾರೆ, ಸನ್ನಿವೇಶಗಳನ್ನು ಬಳಸಿಕೊಂಡು ಪ್ರಚಾರ ಪಡೆಯುವುದಷ್ಟೇ ಅವರ ಕೆಲಸ'' ಎಂದು ಸಾರಾ ಗೋವಿಂದು ಡ್ರಗ್ಸ್ ವಿರುದ್ಧ ಹೋರಾಟಗಾರನಂತೆ ಬಿಂಬಿತನಾಗಿರುವ ಸಂಬರ್ಗಿ ವಿರುದ್ಧ ಕಿಡಿಕಾರಿದ್ದರು.

  ಮಾತನಾಡುವಾಗ ಎಚ್ಚರಿಕೆಯಿರಲಿ: ಪ್ರಶಾಂತ್ ಸಂಬರಗಿಗೆ ಸಾ.ರಾ.ಗೋವಿಂದು ಎಚ್ಚರಿಕೆಮಾತನಾಡುವಾಗ ಎಚ್ಚರಿಕೆಯಿರಲಿ: ಪ್ರಶಾಂತ್ ಸಂಬರಗಿಗೆ ಸಾ.ರಾ.ಗೋವಿಂದು ಎಚ್ಚರಿಕೆ

  ಸಿಸಿಬಿಗೆ ದಾಖಲೆ ನೀಡಬಹುದಿತ್ತು ಅಲ್ಲವೇ?

  ಸಿಸಿಬಿಗೆ ದಾಖಲೆ ನೀಡಬಹುದಿತ್ತು ಅಲ್ಲವೇ?

  ನಾನು ದೇಶಭಕ್ತ, ಹೋರಾಟಗಾರ ಎಂದು ಮಾಧ್ಯಮಗಳ ಮುಂದೆ ಹೇಳುವ ಸಂಬರ್ಗಿ, ಇಂದ್ರಜಿತ್ ಅವರಂತೆ ಸಿಸಿಬಿ ಅಥವಾ ಎನ್‌ಸಿಬಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿ, ಸಾಕ್ಷ್ಯಗಳನ್ನು ಏಕೆ ಕೊಟ್ಟಿಲ್ಲ. ಸಿನಿಮಾರಂಗದ ಹೆಸರು ಹೇಳಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದೀರಾ ಅಷ್ಟೇ ಎಂದು ನಿರ್ದೇಶಕ ಚಂದ್ರಚೂಡ್ ಪ್ರಶ್ನಿಸಿದ್ದಾರೆ.

  ಸಂಜನಾ ವಿರುದ್ಧ ಮಾತನಾಡಿದ್ದ ಸಂಬರ್ಗಿ

  ಸಂಜನಾ ವಿರುದ್ಧ ಮಾತನಾಡಿದ್ದ ಸಂಬರ್ಗಿ

  ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಹೆಸರು ಸಹ ತಳುಕು ಹಾಕಿಕೊಂಡಿದೆ. ಈ ಕುರಿತು ಮಾತನಾಡಿದ್ದ ಸಂಬರ್ಗಿ ''ಸಂಜನಾ ಏನೂ ಎನ್ನುವುದು ಇಡೀ ಇಂಡಸ್ಟ್ರಿಗೆ ಗೊತ್ತು, ಅವಳ ಬಗ್ಗೆ ಮಾತಾಡಿ ಬಾಯಿ ಗಲೀಜು ಮಾಡಿಕೊಳ್ಳುವುದು ಬೇಡ'' ಎಂದು ಹೀನಾಯವಾಗಿ ಪ್ರತಿಕ್ರಿಯಿಸಿದ್ದರು. ಆದರೆ, ಅದೇ ಸಂಜನಾ ಅವರ ಆಪ್ತ ಎನಿಸಿಕೊಂಡಿರುವ ರಾಹುಲ್ ಜೊತೆ ಸಂಬರ್ಗಿ ಕಾಣಿಸಿಕೊಂಡಿರುವ ಬಗ್ಗೆ ಏಕೆ ಮುಚ್ಚಿಟ್ಟರು?

  ಸಿಸಿಬಿ ಗಂಭೀರವಾಗಿ ಪರಿಗಣಿಸಿದರೆ?

  ಸಿಸಿಬಿ ಗಂಭೀರವಾಗಿ ಪರಿಗಣಿಸಿದರೆ?

  ಡ್ರಗ್ಸ್ ಪ್ರಕರಣದಲ್ಲಿ ತನಿಖೆ ಮಾಡುತ್ತಿದ್ದ ಸಿಸಿಬಿ ಪೊಲೀಸರು ನಟಿ ಸಂಜನಾ ಅವರ ಆಪ್ತ ಎನ್ನಲಾಗುತ್ತಿರುವ ರಾಹುಲ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಈ ಹಿನ್ನೆಲೆ ನಟಿ ಸಂಜನಾಗೂ ಡ್ರಗ್ ಉರುಳು ಅಂಟಿಕೊಳ್ಳಬಹುದು ಎಂಬ ಚರ್ಚೆ ನಡೆದಿತ್ತು. ಇದೀಗ, ಪ್ರಶಾಂತ್ ಸಂಬರ್ಗಿ ಸಹ ರಾಹುಲ್ ಜೊತೆ ಸಂಪರ್ಕದಲ್ಲಿದ್ದರು ಎನ್ನುವ ಫೋಟೋ ಆಧಾರಿಸಿ ಸಿಸಿಬಿ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬಹುದೇ ಎಂಬ ಲೆಕ್ಕಾಚಾರವೂ ಇದೆ.

  ನೊಟೀಸ್ ಕೊಟ್ಟರೆ ಹಾಜರಾಗ್ತೀನಿ

  ನೊಟೀಸ್ ಕೊಟ್ಟರೆ ಹಾಜರಾಗ್ತೀನಿ

  ಈ ಫೋಟೋ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಶಾಂತ್ ಸಂಬರ್ಗಿ ''ಇದು 2017ರಲ್ಲಿ ಕ್ಲಿಕ್ಕಿಸಿದ ಫೋಟೋ, ನನಗೂ ರಾಹುಲ್ ಗೂ ಯಾವುದೇ ಸಂಪರ್ಕವಿಲ್ಲ. ಯುಬಿಸಿಟಿಯಲ್ಲಿ ನಡೆದ ಪಾರ್ಟಿಯಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಆಗ ತೆಗೆದಿರುವ ಫೋಟೋ. ಸಿಸಿಬಿ ಪೊಲೀಸರು ಸಮನ್ಸ್ ನೀಡಿದ್ರೆ ವಿಚಾರಣೆಗೆ ಹಾಜರಾಗ್ತೀನಿ'' ಎಂದು ತಿಳಿಸಿದ್ದಾರೆ.

  English summary
  Drug Mafia: Is Prashant Sambargi having any connection with drug peddler and sanjjana's aide Rahul? Know more.
  Saturday, September 5, 2020, 13:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X