»   » ಸ್ಯಾಂಡಲ್ ವುಡ್ ನಲ್ಲೂ ಶುರುವಾಯ್ತು 'ಲವ್ ಜಿಹಾದ್'

ಸ್ಯಾಂಡಲ್ ವುಡ್ ನಲ್ಲೂ ಶುರುವಾಯ್ತು 'ಲವ್ ಜಿಹಾದ್'

Posted By:
Subscribe to Filmibeat Kannada

ಪ್ರೀತಿ, ಪ್ರೇಮ, ಪ್ರಣಯದ ಕಥಾಧಾರಿತ ಚಿತ್ರಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಸದಾ ಬೇಡಿಕೆ ಇದ್ದೇ ಇದೆ. ಇದೀಗ 'ಲವ್ ಜಿಹಾದ್' ಹೆಸರಿನ ಚಿತ್ರ ಪ್ರಕಟವಾಗಿದೆ. ಹೊಸಬರು ಸೇರಿಕೊಂಡು ಮಾಡುತ್ತಿರುವ ಚಿತ್ರವಿದು. ಕೆ ಪ್ರವೀಣ್ ನಾಯಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕರ ನಡುವಿನ ಪ್ರೇಮ ಪ್ರಸಂಗಗಳೇ 'ಲವ್ ಜಿಹಾದ್' ಎಂಬ ಹೊಸ ಪದ ಹುಟ್ಟಲು ಕಾರಣವಾಗಿದೆ. ಇದನ್ನೇ ಇನ್ನೊಂದು ತರಹ ಅರ್ಥೈಸುವವರೂ ಇದ್ದಾರೆ.

Sandalwood movie titled as Love Jihad

ಹಿಂದೂ ಸಂಪ್ರದಾಯವಾದಿಗಳು ಹೇಳುವಂತೆ ಲವ್‌ ಜಿಹಾದ್‌ ಎಂದರೆ ಪರೋಕ್ಷವಾಗಿ ಮತಾಂತರ ಮಾಡುವ ಪ್ರಕ್ರಿಯೆ. ಹಿಂದು ಅಥವಾ ಮುಸ್ಲಿಮೇತರ ಯುವತಿಯರನ್ನು ನಂಬಿಸಿ ಮದುವೆಯಾಗುವ ಮುಸ್ಲಿಂ ಯುವಕರು ನಂತರ ಅವರನ್ನು ಬಲವಂತದಿಂದ ಮುಸ್ಲಿಂ ಆಗಿ ಮತಾಂತರ ಮಾಡುತ್ತಾರೆ ಎಂಬುದು ಒಂದು.

ಕರಾವಳಿ ಕರ್ನಾಟಕದಲ್ಲಿ ಲವ್ ಜಿಹಾದ್ ಎಂಬುದು ಬಹಳ ವಿವಾದಾತ್ಮಕ ಹಾಗೂ ಗಂಭೀರ ವಿಚಾರ. ಇದೀಗ ಇದೇ ಸಬ್ಜೆಕ್ಟನ್ನು ಇಟ್ಟುಕೊಂಡು ಪ್ರವೀಣ್ ನಾಯಕ್ ಸಿನಿಮಾ ಮಾಡುತ್ತಿರುವುದು ಹಲವರ ಹುಬ್ಬೇಸಿದೆ. ಈ ಹಿಂದೆ ಅವರು 'ಝಡ್' ಹಾಗೂ 'ಮೀಸೆ ಚಿಗುರಿದಾಗ' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು.

ಇಷ್ಟಕ್ಕೂ 'ಲವ್ ಜಿಹಾದ್' ಎಂದರೆ ಏನು ಎಂಬ ಬಗ್ಗೆ ತಾವು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನೇ ಚಿತ್ರದಲ್ಲಿ ಹೇಳಲು ಹೊರಟಿದ್ದೇನೆ. ಶುದ್ಧವಾದ ಪ್ರೇಮಕ್ಕೆ ನಾನು ಗೌರವಿಸುತ್ತೇನೆ. ನಿಮ್ಮ ಎಲ್ಲಾ ಪ್ರಶ್ನೆಗಳು, ಅನುಮಾನಗಳಿಗೆ ಈ ಚಿತ್ರ ಉತ್ತರ ನೀಡಲಿದೆ ಎನ್ನುತ್ತಾರೆ ನಿರ್ದೇಶಕರು.

ಮನೋಜ್ ಚಿತ್ರದ ನಾಯಕ ನಟನಾಗಿದ್ದು, "ಈಶ್ವರ ಅಲ್ಲಾ ತೇರೆ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್" ಎಂಬ ಅಡಿಬರಹವನ್ನು ಚಿತ್ರಕ್ಕೆ ನೀಡಲಾಗಿದೆ. ಬೆಸ್ಟ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಮೇ ತಿಂಗಳಲ್ಲಿ ಸೆಟ್ಟೇರುತ್ತಿದೆ. (ಏಜೆನ್ಸೀಸ್)

English summary
Sandalwood movie titled as 'Love Jihad', all set to going on floors in May. The movie is being directed by Praveen Naik under the banner Best Movies. Newcomer Manoj is playing lead role in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada