For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ವಿಷ್ಣುದಾದಾನನ್ನು ನೆನೆದು ಇಷ್ಟದ 5 ಹಾಡುಗಳನ್ನು ಪಟ್ಟಿ ಮಾಡಿದ ನಟಿ ರಮ್ಯಾ

  |

  ಸ್ಯಾಂಡಲ್ ವುಡ್ ನಟಿ ರಮ್ಯಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಗಳ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿರುವ ರಮ್ಯಾ ನೆಚ್ಚಿನ ನಟರ ಹುಟ್ಟುಹಬ್ಬಕ್ಕೂ ಶುಭಕೋರುತ್ತಿದ್ದಾರೆ.ಇಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದ ಪ್ರಯುಕ್ತ ವಿಷ್ಣುದಾದಾನನ್ನು ನೆನಪಿಸಿಕೊಂಡಿದ್ದಾರೆ.

  ವಿಷ್ಣುವರ್ಧನ್ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸುಮಧುರ ನೆನಪನ್ನು ಮೆಲುಕು ಹಾಕಿದ್ದಾರೆ. ರಮ್ಯಾ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ 'ಅರಸು' ಸಿನಿಮಾದ 100ನೇ ದಿನದ ಸಂಭ್ರಮಾಚರಣೆ ಸಮಯದ ಫೋಟೋವನ್ನು ರಮ್ಯಾ ಹಂಚಿಕೊಂಡಿದ್ದಾರೆ. ಡಾ.ವಿಷ್ಣುವರ್ಧನ್ ಅವರಿಂದ ರಮ್ಯಾ ಪ್ರಶಸ್ತಿ ಸ್ವೀಕರಿಸುತ್ತಿರುವ ಸುಂದರ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ವಿಷ್ಣುವರ್ಧನ್ ಅವರ 5 ಹಾಡುಗಳ ಬಗ್ಗೆ ವಿವರಿಸಿದ್ದಾರೆ. ಮುಂದೆ ಓದಿ..

  ವಿಷ್ಣುದಾದಾ ಹುಟ್ಟುಹಬ್ಬಕ್ಕೆ ಸಿಎಂ ಸೇರಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಶುಭಾಶಯ

  ವಿಷ್ಣುವರ್ಧನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸಮಯ

  ವಿಷ್ಣುವರ್ಧನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಸಮಯ

  "ಇವತ್ತು ವಿಷ್ಣುದಾದಾನನ್ನು ಪ್ರೀತಿಯಿಂದ ನೆನಪಿಸಿಕೊಳ್ಳೋಣ. ಅವರು ಮನಸ್ಸು ಮತ್ತು ಕೆಲಸದಲ್ಲಿ ಮಹಾನ್ ವ್ಯಕ್ತಿ. ಅರಸು ಸಿನಿಮಾದ 100 ದಿನಗಳ ಸಂಭ್ರಮಾಚರಣೆಯಲ್ಲಿ ವಿಷ್ಣುವರ್ಧನ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಕ್ಷಣ." ಎಂದು ಬರೆದುಕೊಂಡು ಸಾಹಸಸಿಂಹನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

  ರಮ್ಯಾ ಇಷ್ಟದ 5 ಹಾಡುಗಳು

  ರಮ್ಯಾ ಇಷ್ಟದ 5 ಹಾಡುಗಳು

  ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ 5 ಇಷ್ಟದ ಹಾಡುಗಳನ್ನು ರಮ್ಯಾ ಪಟ್ಟಿ ಮಾಡಿದ್ದಾರೆ. 1. 'ನೂರೊಂದು ನೆನಪು.. ಈ ಹಾಡು ಅಮ್ಮನಿಂದ ನನಗೆ ತುಂಬಾ ಇಷ್ಟವಾಗಿದೆ' ಎಂದಿದ್ದಾರೆ. 2. 'ಬಾರೆ ಸಂತೆಗೆ ಹೋಗೋಣ ಬಾ...' ಈ ಹಾಡಿನ ಬಗ್ಗೆ ಬರೆದು ಕೊಂಡಿರುವ ರಮ್ಯಾ "ನಾನು ಚಿಕ್ಕವಳಾಗಿದ್ದಾಗ ಈ ಹಾಡನ್ನು ಕೇಳಿ ತುಂಬಾ ಎಂಜಾಯ್ ಮಾಡುತ್ತಿದ್ದೆ" ಎಂದಿದ್ದಾರೆ. 3. 'ಪ್ರೀತಿಯೇ ನನ್ನುಸಿರು... ಡ್ಯಾನ್ಸ್ ಮಾಡಲು ಅದ್ಭುತವಾದ ಹಾಡಾಗಿದೆ'. 4. 'ಚೆಲುವೆ ನೀನು ನಕ್ಕರೇ.. ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಅವರ ಸಿನಿಮಾ ನೋಡಿದ ನೆನಪು'. 5. 'ಪ್ರೇಮ ಚಂದ್ರಮ... ಉದಯ ಟಿವಿಯಲ್ಲಿ ಈ ಸಿನಿಮಾವನ್ನು ಅತೀ ಹೆಚ್ಚು ಬಾರಿ ನೋಡಿದ ನೆನಪು ಎಂದು ಇಷ್ಟದ ಹಾಡುಗಳನ್ನು ಪಟ್ಟಿಮಾಡಿ ಯಾಕೆ ಇಷ್ಟ ಎಂದು ವಿವರಿಸಿದ್ದಾರೆ.

  'ವಿಷ್ಣು ಸಹೋದರ ರವಿ ಹೇಳಿದ 'ಆ ಮಾತು' ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ'

  ನಿಮ್ಮ ಇಷ್ಟದ ಹಾಡು ಯಾವುದು?

  ನಿಮ್ಮ ಇಷ್ಟದ ಹಾಡು ಯಾವುದು?

  5 ಹಾಡುಗಳು ಮತ್ತು ಆ ಹಾಡಿನ ನೆನಪನ್ನು ಹಂಚಿಕೊಂಡಿರುವ ರಮ್ಯಾ 'ನಿಮ್ಮ ಇಷ್ಟದ ಹಾಡು ಯಾವುದು?' ಎಂದು ಅಭಿಮಾನಿಗಳಿಗೆ ಪ್ರಶ್ನೆ ಮಾಡಿದ್ದಾರೆ. ರಮ್ಯಾ ಪ್ರಶ್ನೆಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ಇಷ್ಟದ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಮ್ಯಾ ಪೋಸ್ಟ್ ನ ಕಾಮೆಂಟ್ ಬಾಕ್ಸ್ ನಲ್ಲಿ ವಿಷ್ಣುದಾದಾ ಅವರ ಹಾಡುಗಳೇ ತುಂಬಿದೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  'ಕೋಟಿಗೊಬ್ಬ'ನನ್ನು ಸ್ಮರಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

  'ಕೋಟಿಗೊಬ್ಬ'ನನ್ನು ಸ್ಮರಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್

  ವಿಷ್ಣುದಾದಾರ ಹುಟ್ಟುಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್ ಕಾಮನ್ ಡಿಪಿ ಸಹ ಬಿಡುಗಡೆ ಮಾಡಿದ್ದಾರೆ. ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ಜಗ್ಗೇಶ್, ಧನಂಜಯ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಸಿಂಪಲ್ ಸುನಿ, ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವು ಕಲಾವಿದರು ಕೋಟಿಗೊಬ್ಬನನ್ನು ಸ್ಮರಿಸಿದ್ದಾರೆ.

  English summary
  Sandalwood Actress Ramya Remembers Dr Vishnuvardhan on His Birthay. She picked some her favorite songs of Vishnuvardhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X