»   » ದೆಹಲಿಯ ಸುಂದರ ತಾಣದಲ್ಲಿ 'ರಕ್ಷಿತ್-ರಶ್ಮಿಕಾ' ಜೋಡಿಯ ಮೋಜು-ಮಸ್ತಿ

ದೆಹಲಿಯ ಸುಂದರ ತಾಣದಲ್ಲಿ 'ರಕ್ಷಿತ್-ರಶ್ಮಿಕಾ' ಜೋಡಿಯ ಮೋಜು-ಮಸ್ತಿ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದಿಂದ ರಾಜ್ಯಾದ್ಯಂತ ಖ್ಯಾತಿ ಪಡೆದುಕೊಂಡು, ನಂತರ ರಿಯಲ್ ಲೈಫ್ ನಲ್ಲೂ ಒಂದಾಗಿರುವ 'ಕಿರಿಕ್' ಜೋಡಿ ಇದೀಗ ದೆಹಲಿಯಲ್ಲಿ ಸಖತ್ ಮಜಾ ಮಾಡ್ತಿದೆ.

ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಸದ್ಯ ಇಬ್ಬರೂ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಲಾವಿದರು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ದೆಹಲಿ ಸುತ್ತಾ ಮತ್ತಾ ಓಡಾಡ್ತಿದ್ದಾರಂತೆ. ಅಷ್ಟಕ್ಕೂ, ಇವ್ರಿಬ್ಬರೂ ದೆಹಲಿಯಲ್ಲಿ ಏನ್ ಮಾಡ್ತಿದ್ದಾರೆ ಅಂದ್ರಾ? ಮುಂದೆ ಓದಿ....

ದೆಹಲಿಯಲ್ಲಿ ಮದುವೆ ಸಂಭ್ರಮ

ರಶ್ಮಿಕಾ ಮತ್ತು ರಕ್ಷಿತ್ ಮದುವೆ ಸಂಭ್ರಮದಲ್ಲಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದ ಕರ್ಮ್ ಚಾವ್ಲಾ ರ ಮದುವೆ ಇತ್ತೀಚೆಗಷ್ಟೇ ನಡೆದಿದ್ದು ರಕ್ಷಿತ್-ರಶ್ಮಿಕಾ ಮಾತ್ರವಲ್ಲದೆ ಇನ್ನೂ ಅನೇಕ ಕಲಾವಿದರು ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಡ್ಯಾನ್ಸ್ ಮಾಡಿದ ಸಂಯುಕ್ತ ಹೆಗ್ಡೆ

ಕಿರಿಕ್ ಪಾರ್ಟಿ ಸಿನಿಮಾತಂಡ ಜೊತೆಯಲ್ಲಿ ವಿನಯ್ ರಾಜ್ ಕುಮಾರ್, ಶೃತಿ ಹರಿಹರನ್, ಸಂಯುಕ್ತ ಹೆಗ್ಡೆ, ರುಕ್ಸಾರ್ ಸೇರಿದಂತೆ ಅನೇಕರು ಮೂರು ದಿನಗಳ ಮದುವೆಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಕೈ ತುಂಬಾ ಮೆಹೆಂದಿ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದಾರೆ.

ಸ್ಯಾಂಡಲ್ ವುಡ್ ಕಲಾವಿದರು ಭಾಗಿ

ಕಿರಿಕ್ ಪಾರ್ಟಿ, ರನ್ ಆಂಟನಿ, ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿರೋ ಕರ್ಮ್ ಚಾವ್ಲಾರ ಮದುವೆಯಲ್ಲಿ ಜೈ ಜಗದೀಶ್ ಫ್ಯಾಮಿಲಿ ಕೂಡ ಕಾಣಿಸಿಕೊಂಡಿದೆ. ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ 'ಯಾನಾ' ಸಿನಿಮಾಗೂ ಕರ್ಮ್ ಅವ್ರೇ ಕ್ಯಾಮೆರಾ ವರ್ಕ್ ಮಾಡ್ತಿದ್ದಾರೆ.

ಮೋಜು-ಮಸ್ತಿ ಮಾಡ್ತಿರೋ ರಶ್ಮಿಕಾ-ರಕ್ಷಿತ್

ರಶ್ಮಿಕಾ ಹಾಗೂ ರಕ್ಷಿತ್ ಎಂಗೇಜ್ ಮೆಂಟ್ ಆದ ನಂತ್ರ ಖಾಸಗಿ ಕಾರ್ಯಕ್ರಮಗಳನ್ನ ಒಟ್ಟಿಗೆ ಅಟೆಂಡ್ ಮಾಡ್ತಿದ್ದಾರೆ. ಇನ್ನೆರಡು ವರ್ಷಗಳ ನಂತ್ರ ಮದುವೆ ಪ್ಲಾನ್ ಮಾಡಿಕೊಂಡಿರುವ ಈ ತಾರಾ ಜೋಡಿ ಇನ್ನು ಮುಂದೆ ಎಲ್ಲಿ ಹೋದರೂ ಕಪಲ್ ಆಗಿಯೇ ಹೋಗ್ತಾರೆ.

English summary
Rakshith Shetty and Rashmika Mandanna attend Karm Chawla Wedding at Delhi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada