For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧನಂಜಯ್ ಗೆ ತಾರೆಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

  |

  ಸ್ಯಾಂಡಲ್ ವುಡ್ ನ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ ಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಪ್ಲಾನ್ ಪ್ರಕಾರವೇ ಆಗಿದ್ದರೆ ಈಗಾಗಲೆ ಧನಂಜಯ್ ಮನೆ ಮುಂದೆ ಅಭಿಮಾನಿಗಳ ದಂಡೇ ನೆರೆದಿರುತ್ತಿತ್ತು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಈ ಬಾರಿಯ ಅದ್ದೂರಿ ಜನ್ಮದಿನಾಚರಣೆಗೆ ಬ್ರೇಕ್ ಬಿದ್ದಿದೆ.

  ಹೌದು, ಧನಂಜಯ್ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಮೊದಲೇ ಡಾಲಿ ಅಭಿಮಾನಿಗಳಲ್ಲಿ ಅದ್ದೂರಿತನ ಮತ್ತು ಮನೆಯ ಮುಂದೆ ಬಂದು ಸಂಭ್ರಮಾಚರಣೆ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರು. ಅದರಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಇನ್ನೂ ಧನಂಜಯ್ ಹುಟ್ಟುಹಬ್ಬದ ವಿಶೇಷವಾಗಿ ಬಹು ನಿರೀಕ್ಷೆಯ 'ಯುವರತ್ನ' ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಮುಂದೆ ಓದಿ...

  ಧನಂಜಯ್ ಗೆ ಶುಭಕೋರಿದ ನಟ ದರ್ಶನ್

  ಧನಂಜಯ್ ಗೆ ಶುಭಕೋರಿದ ನಟ ದರ್ಶನ್

  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಧನಂಜಯ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಡಾಲಿ' ಎಂದು ವಿಶ್ ಮಾಡಿ ಧನಂಜಯ್ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ದರ್ಶನ್ ಪ್ರೀತಿಯ ಶುಭಾಶಯಕ್ಕೆ ಧನಂಜಯ್ 'ಅಣ್ಣ ಮತ್ತೊಬ್ಬ ತಾಯಿ ಇದ್ದ ಹಾಗೆ. ಧನ್ಯವಾದಗಳು ದರ್ಶನ್' ಎಂದು ಹೇಳಿದ್ದಾರೆ. ಇಬ್ಬರು 'ಯಜಮಾನ' ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು.

  ನಟ ಸತೀಶ್ ನೀನಾಸಂ

  ನಟ ಸತೀಶ್ ನೀನಾಸಂ

  ಸತೀಶ್ ನೀನಾಸಂ ಮತ್ತು ಧನಂಜಯ್ ಇಬ್ಬರು ಉತ್ತಮ ಗೆಳೆಯರು. ಗೆಳೆಯನ ಹುಟ್ಟುಹಬ್ಬಕ್ಕೆ ನಟ ಸತೀಶ್, "ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ. ಸವಾಲು, ಸಕ್ಸಸ್, ಸಂತೋಷ, ಯಾವಾಗಲು ನಿನ್ನ ಜೊತೆಗಿರಲಿ" ಎಂದು ಟ್ವೀಟ್ ಮಾಡಿದ್ದಾರೆ. ಇಬ್ಬರು ಒಬ್ಬರಿಗೊಬ್ಬರು ತಬ್ಬಿಕೊಂಡು ನಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

  ನಿರ್ದೇಶಕ ಸಂತೋಷ್ ಆನಂದ್ ರಾಮ್

  ನಿರ್ದೇಶಕ ಸಂತೋಷ್ ಆನಂದ್ ರಾಮ್

  "ಕಲಾದೇವಿ ಹರಸಿದ ಅರಸೀಕೆರೆಯ ಶೋಭೆ ಕರುನಾಡ ಪ್ರತಿಭೆ ಧನಂಜಯ್ ನೀವು ನೂರಾರು ಪಾತ್ರಗಳನ್ನು ಮಾಡಿ ಕನ್ನಡ ಬೆಳ್ಳಿ ಪರದೆಯಲ್ಲಿ ಧ್ರುವತಾರೆಯಾಗಿ ಸದಾ ಜಯ, ದಿಗ್ವಿಜಯ ನಿಮ್ಮದಾಗಲಿ. ನಟರಾಕ್ಷಸನಿಗೆ ಜನ್ಮದಿನದ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ. ಧನಂಜಯ್ ಸದ್ಯ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಯುವರತ್ನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

  'ಯುವರತ್ನ' ಸಿನಿಮಾದ ಧನಂಜಯ್ ಲುಕ್ ರಿಲೀಸ್

  'ಯುವರತ್ನ' ಸಿನಿಮಾದ ಧನಂಜಯ್ ಲುಕ್ ರಿಲೀಸ್

  ಹುಟ್ಟುಹಬ್ಬದ ವಿಶೇಷವಾಗಿ ಬಹು ನಿರೀಕ್ಷೆಯ 'ಯುವರತ್ನ' ಸಿನಿಮಾದ ಲುಕ್ ರಿಲೀಸ್ ಮಾಡಲಾಗಿದೆ. ಚಿತ್ರದಲ್ಲಿ ಧನಂಜಯ್ ಆಂಟೋನಿ ಜೋಸೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ ಪೋಸ್ಟರ್ ರಿಲೀಸ್ ಮಾಡಿ ನಟರಾಕ್ಷಸನಿಗೆ ವಿಶ್ ಮಾಡಿದ್ದಾರೆ.

  ನಟ ದುನಿಯಾ ವಿಜಯ್

  ನಟ ದುನಿಯಾ ವಿಜಯ್

  ನಟ ದುನಿಯಾ ವಿಜಯ್ ಮತ್ತು ಧನಂಜಯ್ ಇಬ್ಬರು ಸಲಗ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. 'ಸಲಗ' ಸಿನಿಮಾ ಟೀಂ ಕಡೆಯಿಂದ ಧನಂಜಯ್ ಪೋಸ್ಟರ್ ರಿಲೀಸ್ ಮಾಡಿ ವಿಶ್ ಮಾಡುವ ಜೊತೆಗೆ, ನಟ ದುನಿಯಾ ವಿಜಯ್ ಶುಭಹಾರೈಸಿದ್ದಾರೆ. "ನಗುತಾ ನಗುತಾ ಬಾಳು ನೀನು ನೂರು ವರುಷ" ಎಂದು ವಿಜಿ ವಿಶ್ ಮಾಡಿದ್ದಾರೆ. 'ಸಲಗ' ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

  ನಿರೂಪ್ ಭಂಡಾರಿ ಮತ್ತು ಕಾರ್ತಿಕ್ ಗೌಡ

  ನಿರೂಪ್ ಭಂಡಾರಿ ಮತ್ತು ಕಾರ್ತಿಕ್ ಗೌಡ

  ನಟ ನಿರೂಪ್ ಭಂಡಾರಿ ಸಹ ಇದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಧನಂಜಯ್ ಗೆ ವಿಶ್ ಮಾಡಿದ್ದಾರೆ. ಇನ್ನೂ ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಶುಭಹಾರೈಸಿ 'ರತ್ನನ್ ಪ್ರಪಂಚ' ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ಗೌಡ ಅವರೆ ನಿರ್ಮಾಣ ಮಾಡುತ್ತಿದ್ದಾರೆ.

  ಧನಂಜಯ್ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಧನಂಜಯ್ ಇತ್ತೀಚಿಗೆ ಡಾನ್ ಜಯರಾಜ್ ಜೀವನ ಆಧಾರಿತ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಸಿನಿಮಾಗೆ 'ಹೆಡ್ ಬುಷ್' ಎಂದು ಟೈಟಲ್ ಇಡಲಾಗಿದೆ. ಅಗ್ನಿ ಶ್ರೀಧರ್ ಚಿತ್ರಕಥೆ ರಚಿಸಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ಧನಂಜಯ್ ತೆಲುಗಿನ ಬಹುನಿರೀಕ್ಷೆಯ 'ಪುಷ್ಪ' ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.

  English summary
  Actor Dhananjay celebrating his birthday on August 23rd. Sandalwood stars birthday wish to Actor Dhananjay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X