»   » 'ಕರ್ವ' ನೋಡಿ 'ಉಘೇ' ಎಂದ ಸ್ಯಾಂಡಲ್ ವುಡ್ ಸ್ಟಾರ್ಸ್

'ಕರ್ವ' ನೋಡಿ 'ಉಘೇ' ಎಂದ ಸ್ಯಾಂಡಲ್ ವುಡ್ ಸ್ಟಾರ್ಸ್

Posted By:
Subscribe to Filmibeat Kannada

'6-5=2' ಎಂಬ ಹಾರರ್ ಥ್ರಿಲ್ಲರ್ ಸಿನಿಮಾ ಮಾಡಿದ್ದ ಚಿತ್ರತಂಡ ಈ ಬಾರಿ 'ಕರ್ವ' ಎಂಬ ವಿಭಿನ್ನ ಕಥೆ ಇರುವ ಹಾರರ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ನಿರ್ದೇಶಕ ನವನೀತ್ ಅವರು ಫುಲ್ ಖುಷ್ ಆಗಿದ್ದಾರೆ.

ನಟ ತಿಲಕ್ ಹಾಗೂ ಆರ್ ಜೆ ರೋಹಿತ್ ಹಾಗೂ ವಿಜಯ್ ಚೆಂಡೂರ್ ಅವರ ಜೊತೆಗೆ ಹೊಸ ನಟಿಯರನ್ನು ಹಾಕಿಕೊಂಡು ಮಾಡಿದ್ದ 'ಕರ್ವ' ಎಂಬ ಹಾರರ್ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿ ಇದೀಗ ಸ್ಯಾಂಡಲ್ ವುಡ್ ಸ್ಟಾರ್ ನಟರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ.['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]


Sandalwood stars praises Kannada Movie 'Karva'

ಹೌದು ಕನ್ನಡ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು 'ಕರ್ವ' ಸಿನಿಮಾ ನೋಡಿದ ಬೆನ್ನಲ್ಲೇ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಿನಿಮಾ ನೋಡಿ ಇಡೀ ಚಿತ್ರತಂಡವನ್ನು ಬಾಯ್ತುಂಬ ಹೊಗಳಿದ್ದಾರೆ.['ಕರ್ವ' ಮರ್ಮ ಕಂಡು ಕನ್ನಡ ಸಿನಿ ವಿಮರ್ಶಕರು ಬೆಚ್ಚಿಬಿದ್ರಾ.?]


'ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಟ್ರೆಂಡ್ ಹುಟ್ಟು ಹಾಕುವಲ್ಲಿ ನಿರ್ದೇಶಕ ನವನೀತ್ ಯಶಸ್ವಿಯಾಗಿದ್ದಾರೆ. ಹಾಗೂ ಚಿತ್ರದಲ್ಲಿ ಎಲ್ಲರೂ ಅದ್ಭುತವಾಗಿ ನಟನೆ ಮಾಡಿದ್ದಾರೆ' ಎಂದು ಪುನೀತ್ ಅವರು 'ಕರ್ವ' ಚಿತ್ರವನ್ನು ಮನಸಾರೆ ಅಭಿನಂದಿಸಿದ್ದಾರೆ.


"ನನಗೆ ಹಾರರ್-ಥ್ರಿಲ್ಲರ್ ಸಿನಿಮಾ ಅಂದರೆ ತುಂಬಾ ಇಷ್ಟ. ಈ ಹಿಂದೆ 6-5=2 ನೋಡಿದ್ದೆ. ಇದೀಗ ಅದೇ ನಿರ್ಮಾಪಕ ಕೃಷ್ಣ ಚೈತನ್ಯ ಅವರು 'ಕರ್ವ' ಸಿನಿಮಾ ಮಾಡಿದ್ದಾರೆ. ಇದು ಮತ್ತೊಂದು ಬಗೆಯ ಸಿನಿಮಾ. ಕಥೆ ಹೇಳೋಕೆ ಸಾಧ್ಯವಿಲ್ಲ. ನೋಡಿಯೇ ಸವಿಯಬೇಕು. ಡೈರೆಕ್ಟರ್ ನವನೀತ್ ಚಿತ್ರವನ್ನು ನೀಟಾಗಿ ಪ್ರೆಸೆಂಟ್ ಮಾಡಿದ್ದಾರೆ".


"ತಿಲಕ್, ರೋಹಿತ್, ವಿಜಯ್ ಎಲ್ಲರ ಅಭಿನಯ ಸಹಜವಾಗಿ ಮೂಡಿ ಬಂದಿದೆ. ಇತ್ತೀಚೆಗೆ ಸಾಕಷ್ಟು ಒಳ್ಳೊಳ್ಳೆ ಸಿನಿಮಾಗಳು ಕನ್ನಡದಲ್ಲಿ ಬಂದಿದೆ ಎಂಬುದು ಖುಷಿಯ ವಿಚಾರ. ಅದರಲ್ಲೂ ಕಮರ್ಷಿಯಲ್ ಆಗಿ ಗೆದ್ದಿದೆ ಎಂಬುದು ದೊಡ್ಡ ಖುಷಿ". ಅಂತ ಪುನೀತ್ ರಾಜ್ ಕುಮಾರ್ ಬಾಯ್ತುಂಬ ಹೊಗಳಿದ್ದಾರೆ.


ಇನ್ನು ನಟ ಯಶ್ ಮತ್ತು ಶ್ರೀಮುರಳಿ ಅವರು ಕೂಡ ನಿರ್ಮಾಪಕ ಕೃಷ್ಣ ಚೈತನ್ಯ ನಿರ್ಮಾಣದ 'ಕರ್ವ' ಚಿತ್ರವನ್ನು ಹೊಗಳಿದ್ದಾರೆ. ಯಶ್ ಮತ್ತು ರೋರಿಂಗ್ ಸ್ಟಾರ್ ಏನಂದಿದ್ದಾರೆ ಎಂಬುದನ್ನು ಅವರ ಬಾಯಲ್ಲೇ ಕೇಳಿ ಈ ವಿಡಿಯೋದಲ್ಲಿ...-
-
-
-
-
-
English summary
Sandalwood stars Puneeth Rajkumar, Kannada actor Yash and Kannada actor Srimurali has praised Navaneeth directorial Kannada suspense horror-thriller movie 'Karva'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada