2021ರಲ್ಲಿ ಹೊಸ ಹೊಸ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್

2021ರ ಮೊದಲಾರ್ಧದಲ್ಲಿ ಕನ್ನಡ ಸಿನಿಮಾಗಳು ರಿಲೀಸ್ ಆಗಿದ್ದು ಕೇವಲ ಬೆರಳೆಣಿಕೆ. ಧಾರಾವಾಹಿ ಹಾಗೂ ಸಿನಿಮಾಗಳ ಶೂಟಿಂಗ್ ನಡೆದಿದ್ದು ಬಹಳ ಕಡಿಮೆ. ರಿಯಾಲಿಟಿ ಶೋಗಳು ಕುಂಟುತ್ತಾ ಕುಂಟುತ್ತಾ ಸಾಗಿದವು. ಸೆಕೆಂಡ್ ಹಾಫ್‌ನಲ್ಲಿ ಸ್ವಲ್ಪ ಸಮಾಧಾನವಾಗಿದ್ದರೂ ಕೋವಿಡ್ ಮೂರನೇ ಅಲೆ ಭೀತಿ ಪ್ರತಿಯೊಬ್ಬರನ್ನು ಕಾಡ್ತಿದೆ. ಈ ಭೀತಿಯ ನಡುವೆಯೂ ಈ ವರ್ಷ ಹಲವು ಸೆಲೆಬ್ರಿಟಿಗಳು ತಮ್ಮ ಮನೆಗಳಿಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡರು. ಹಲವು ಸೆಲೆಬ್ರಿಟಿಗಳು ತಮ್ಮ ಕನಸಿನ ಕಾರುಗಳನ್ನು ಇದೇ ವರ್ಷ ಖರೀದಿಸಿದರು.

Recommended Video

ಸಂತೋಷ ಆನಂದ್ ರಾಮ್ ಮನೆಗೆ ಬಂದ ಹೊಸ ಅಥಿತಿ

ಸಿನಿಮಾ ನಿರ್ದೇಶಕರು, ಧಾರಾವಾಹಿ ನಟರು, ಸಿನಿಮಾ ನಿರ್ದೇಶಕರು ಹೀಗೆ ಕಳೆದ ಎಂಟು ತಿಂಗಳಲ್ಲಿ ಎಂಟಕ್ಕೂ ಹೆಚ್ಚು ಮಂದಿ ದುಬಾರಿಗಳನ್ನು ಖರೀದಿ ಮಾಡಿದ್ದಾರೆ. ಲೇಟೆಸ್ಟ್ ಆಗಿ ಯುವರತ್ನ, ರಾಜಕುಮಾರ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬಿಎಂಡಬ್ಲ್ಯೂ ಕಾರು ಖರೀದಿ ಮಾಡಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ...

ಬಿಎಂಡಬ್ಲ್ಯೂ 520ಡಿ

ಬಿಎಂಡಬ್ಲ್ಯೂ 520ಡಿ

ರಾಜಕುಮಾರ, ಯುವರತ್ನ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿ ಡೈರೆಕ್ಟರ್ ಎನಿಸಿಕೊಂಡಿರುವ ಸಂತೋಷ್ ಆನಂದ್ ರಾಮ್ ಇತ್ತೀಚಿಗಷ್ಟೆ ದುಬಾರಿ ಬಿಎಂಡಬ್ಲ್ಯೂ 520ಡಿ ಕಾರು ಖರೀದಿ ಮಾಡಿದ್ದಾರೆ. ಬಿಳಿ ಬಣ್ಣದ ಬಿಎಂಡಬ್ಲ್ಯೂ 520ಡಿ ಕಾರಿನ ಫೋಟೋವನ್ನು ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಡೀ ಕುಟುಂಬ ಈ ಖುಷಿಯಲ್ಲಿ ಭಾಗಿಯಾಗಿದೆ. ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ಆನಂದ್ ರಾಮ್ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಆಡಿ ಕ್ಯೂ 8 ಖರೀದಿಸಿದ ಶೈನ್ ಶೆಟ್ಟಿ

ಆಡಿ ಕ್ಯೂ 8 ಖರೀದಿಸಿದ ಶೈನ್ ಶೆಟ್ಟಿ

ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ವಿನ್ನರ್ ಶೈನ್ ಶೆಟ್ಟಿ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡ್ತಿದ್ದಾರೆ. ಆ ಕಡೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ಶೈನ್ ಶೆಟ್ಟಿ ಆಡಿ ಕ್ಯೂ 8 ಕಾರನ್ನು ಖರೀದಿ ಮಾಡಿದ್ದರು.

ರಕ್ಷಿತ್ ಶೆಟ್ಟಿ ಕಾರು

ರಕ್ಷಿತ್ ಶೆಟ್ಟಿ ಕಾರು

ನಟ-ನಿರ್ದೇಶಕ-ನಿರ್ಮಾಪಕ ರಕ್ಷಿತ್ ಶೆಟ್ಟಿ ಸಹ ಹೊಸ ಕಾರು ಖರೀದಿ ಮಾಡಿದರು. ವರಮಹಾಲಕ್ಷ್ಮಿ ಹಬ್ಬದ ದಿನ ನಟ ರಕ್ಷಿತ್ ಶೆಟ್ಟಿ ಆಡಿ ಕ್ಯೂ8 (Audi Q8) ಕಾರು ಖರೀದಿ ಮಾಡಿದರು. ರಕ್ಷಿತ್ ಕಾರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವರದಿಗಳು ಪ್ರಕಾರ, ಈ ಕಾರಿನ ಬೆಲೆ 98 ಲಕ್ಷದಿಂದ 1.27 ಕೋಟಿಯವರೆಗೂ ಇದೆ.

ಎರಡು ದುಬಾರಿ ಕಾರು

ಎರಡು ದುಬಾರಿ ಕಾರು

ಜೊತೆ ಜೊತೆಯಲಿ ಧಾರಾವಾಹಿಯ ಅನು ಸರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಒಂದೇ ದಿನ ಎರಡು ದುಬಾರಿ ಕಾರು ಖರೀದಿಸಿದ್ದರು. ಬಿಎಂಬ್ಲ್ಯೂ ಮತ್ತು ಎಂಜಿ ಹೆಕ್ಟರ್ ಎರಡು ಕಾರು ಕೊಂಡುಕೊಂಡರು. ಈ ಫೋಟೋವನ್ನು ಸ್ವತಃ ನಟಿ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮಿನಿ ಕೂಪರ್ ಖರೀದಿ ಮಾಡಿದ ಶಶಿ

ಮಿನಿ ಕೂಪರ್ ಖರೀದಿ ಮಾಡಿದ ಶಶಿ

ಬಿಗ್ ಬಾಸ್ ಸೀಸನ್ 6ರಲ್ಲಿ ಗೆಲುವು ಸಾಧಿಸಿದ್ದ ಶಶಿ ಕುಮಾರ್ ಮಿನಿ ಕೂಪರ್ ಕಾರನ್ನು ಖರೀದಿಸಿದ್ದರು. ಏಪ್ರಿಲ್ ತಿಂಗಳಲ್ಲಿ ಕಾರು ಖರೀದಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು. 'ನನ್ನ ಕನಸಿನ ಕಾರುಗಳಲ್ಲಿ ಒಂದಿರುವ ಮಿನಿ ಕೂಪರ್ ನನ್ನ ಪಾರ್ಕಿಂಗ್ ಸೇರಿದೆ. ನನ್ನ ಮೊದಲ ಕಾರು ಓಮಿನಿ. ಆದರೀಗ ಕೇವಲ ಮಿನಿ' ಎಂದು ಬರೆದುಕೊಂಡಿದ್ದರು.

ಕನ್ನಡತಿ ಕಿರಣ್ ರಾಜ್

ಕನ್ನಡತಿ ಕಿರಣ್ ರಾಜ್

'ಕನ್ನಡತಿ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟ ಎನಿಸಿಕೊಂಡಿರುವ ಕಿರಣ್ ರಾಜ್ ಮಾರ್ಚ್ ತಿಂಗಳಲ್ಲಿ ಹೊಸ ಕಾರು ಖರೀದಿ ಮಾಡಿದ್ದಾರೆ. ಕಪ್ಪು ಬಣ್ಣ ಮರ್ಸಿಡಿಸ್ ಬೆಂಜ್ ಕಾರು ಖರೀದಿ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದರು.

ಚಂದು ಗೌಡ ಮನೆಗೆ ಹೊಸ ಕಾರು

ಚಂದು ಗೌಡ ಮನೆಗೆ ಹೊಸ ಕಾರು

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಚಂದು ಗೌಡ ಮಾರ್ಚ್ ಅಂತ್ಯದಲ್ಲಿ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದರು. ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಚಂದು ಗೌಡ ಖರೀದಿ ಮಾಡಿರುವ ಆಡಿ ಕ್ಯೂ 7 ಕಾರಿನ ಆರಂಭಿಕ ಬೆಲೆ 69.27 ಲಕ್ಷದಿಂದ 81.18 ಲಕ್ಷದವರೆಗೂ ಇದೆ.

ಜನವರಿಯಲ್ಲಿ ರಶ್ಮಿಕಾ ಕಾರು

ಜನವರಿಯಲ್ಲಿ ರಶ್ಮಿಕಾ ಕಾರು

ಕನ್ನಡ, ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ, ವರ್ಷದ ಆರಂಭದಲ್ಲೇ ಹೊಸ ಕಾರು ಖರೀದಿ ಮಾಡಿದ್ದರು. ರೇಂಜ್ ರೋವರ್ ಸ್ಪೋರ್ಟ್ಸ್ ಮ್ಯಾಟ್ ಬ್ಲಾಕ್ ಕಲರ್ ಕಾರು ಖರೀದಿ ಮಾಡಿ ಸಂತಸ ಹಂಚಿಕೊಂಡಿದ್ದರು. ಇದರ ಬೆಲೆ ಭಾರತದ ಮಾರುಕಟ್ಟೆಯಲ್ಲಿ 85 ಲಕ್ಷದಿಂದ 1 ಕೋಟಿ ಕೋಟಿವರೆಗೂ ಇದೆ.

More from Filmibeat

English summary
Shine Shetty, Rakshit shetty, Megha Shetty, Kiran raj, Bigg boss Shashi kumar, chandu gowda and Rashmika Madannada Purchased New Cars in 2021.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X