For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಜನ್ಮದಿನದ ಸಂಭ್ರಮ: ಯಾರ್ಯಾರ ಶುಭಾಶಯ ಹೇಗಿದೆ?

  |

  ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬದಂದು ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರೆಲ್ಲರೂ ಶುಭಕೋರುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಇರಬೇಕಿತ್ತು ಎಂಬ ನೋವಿನ ಜತೆಗೆ ಅವರ ಸವಿ ನೆನಪನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನದಂದು ಯಾರ್ಯಾರು ಹೇಗೆ ಶುಭ ಕೋರಿದ್ದಾರೆ?

  ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ| Ambareesh

  ಮಾಜಿ ಸಚಿವ, ಜನಪ್ರಿಯ ಕಲಾವಿದ ಮತ್ತು ನನ್ನ ಆತ್ಮೀಯರಾಗಿದ್ದ ಶ್ರೀ ಅಂಬರೀಶ್ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಅವರ ನೆನಪು, ಅವರ ವ್ಯಕ್ತಿತ್ವ, ಅವರು ಮಾಡಿದ್ದ ಪಾತ್ರಗಳ ಮೂಲಕ ಅಂಬರೀಶ್ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

  ಅಂಬರೀಶ್ ಅತ್ಯಾಪ್ತ ಮಿತ್ರ ರಾಜೇಂದ್ರ ಸಿಂಗ್ ಬಾಬು ತೆರೆದ ನೆನಪಿನ ಪುಸ್ತಕಅಂಬರೀಶ್ ಅತ್ಯಾಪ್ತ ಮಿತ್ರ ರಾಜೇಂದ್ರ ಸಿಂಗ್ ಬಾಬು ತೆರೆದ ನೆನಪಿನ ಪುಸ್ತಕ

  ಕನ್ನಡ ಚಿತ್ರರಂಗದ ಮೇರು ನಟ, ಮಂಡ್ಯದ ಗಂಡು, ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರಾದ, ರೆಬೆಲ್ ಸ್ಟಾರ್ ದಿವಂಗತ ಅಂಬರೀಷ್ ಅವರ ಹುಟ್ಟುಹಬ್ಬದಂದು ನನ್ನ ಅನಂತ ಕೋಟಿ ನಮನಗಳು ಎಂದು ನಟ, ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಮುಂದೆ ಓದಿ...

  ದರ್ಶನ್ ಶುಭಾಶಯ

  ದರ್ಶನ್ ಶುಭಾಶಯ

  ನಮ್ ಮನಸಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿರುವ ನಮ್ಮೆಲ್ಲರ ಪ್ರೀತಿಯ ಸೀನಿಯರ್ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಜನುಮದಿನದ ಪ್ರಯುಕ್ತ 'ರಾಬರ್ಟ್' ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ದರ್ಶನ್ ತಮ್ಮ 'ರಾಬರ್ಟ್' ಚಿತ್ರದ ಪೋಸ್ಟರ್‌ನಲ್ಲಿ ಅಂಬರೀಷ್ ಅವರನ್ನು ತೋರಿಸಿದ್ದಾರೆ.

  ಮಿಸ್ ಯೂ ಮಾಮಾ- ಸುದೀಪ್

  ಮಿಸ್ ಯೂ ಮಾಮಾ- ಸುದೀಪ್

  ನಟ ಕಿಚ್ಚ ಸುದೀಪ್, ಅಂಬರೀಶ್ ಅವರಿಗೆ ಆತ್ಮೀಯರಾಗಿದ್ದ ನಟರಲ್ಲಿ ಒಬ್ಬರು. ಅಂಬರೀಶ್ ನಟನೆಯ ಕೊನೆಯ ಚಿತ್ರ 'ಅಂಬಿ ನಿಂಗೆ ವಯಸ್ಸಾಯ್ತೋ'ದಲ್ಲಿ ಸುದೀಪ್ ನಟಿಸಿದ್ದರು. ಅಂಬರೀಷ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಸುದೀಪ್, 'ಮಿಸ್ ಯೂ ಮಾಮಾ' ಎಂದು ಹೃದಯದ ಸಂಕೇತಗಳನ್ನು ಹಾಕಿದ್ದಾರೆ.

  ಪುನೀತ್ ರಾಜ್ ಕುಮಾರ್ ವಿಡಿಯೋ

  ಪುನೀತ್ ರಾಜ್ ಕುಮಾರ್ ವಿಶಿಷ್ಟವಾಗಿ ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ. 'ನಿಮ್ಮ ಜನ್ಮದಿನದಂದು ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದೇನೆ' ಎಂದು ಬರೆದಿರುವ ಅಪ್ಪು, ಫೋಟೊಗಳ ಜೋಡಣೆಯ ವಿಡಿಯೋ ಹಂಚಿಕೊಂಡಿದ್ದಾರೆ. ಅಂಬರೀಶ್ ಅವರ ಚಿತ್ರಕ್ಕೆ ರಾಜ್ ಕುಮಾರ್ ಹಾಡಿರುವ 'ನಲಿಯುತಾ ಹೃದಯ ಹಾಡನು ಹಾಡಿದೆ' ಹಾಡಿನ ಹಿನ್ನೆಲೆಯಲ್ಲಿ ಅಂಬರೀಶ್ ಅವರೊಂದಿಗೆ ತಮ್ಮ ಮತ್ತು ರಾಜ್ ಕುಮಾರ್ ಇರುವ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

  ಶಿವರಾಜ್ ಕುಮಾರ್ ಶುಭಾಶಯ

  ಶಿವರಾಜ್ ಕುಮಾರ್ ಶುಭಾಶಯ

  ಅಂಬರೀಷ್ ಸ್ನೇಹಕ್ಕೆ ಇನ್ನೊಂದು ಹೆಸರು... ಹುಟ್ಟು ಹಬ್ಬದ ಶುಭಾಶಯಗಳು ಅಂಬರೀಷ್ ಮಾಮ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಂಬರೀಶ್ ತಮ್ಮನ್ನು ಅಪ್ಪಿಕೊಂಡಿರುವ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.

  ನೆನಪಿರಲಿ ಪ್ರೇಮ್

  ನೆನಪಿರಲಿ ಪ್ರೇಮ್

  ನನ್ನಂತಹ ಸಾಕಷ್ಟು ಜನರಿಗೆ ಅಣ್ಣನ ಸ್ಥಾನ ತುಂಬಿದವರು ನೀವು. ಭೌತಿಕವಾಗಿ ನೀವು ನಮ್ಮೊಂದಿಗಿಲ್ಲ , ಆದರೆ ನೀವು ನಮಗೆ ಕೊಟ್ಟ ಆ ಪ್ರೀತಿ ಎಂದೆಂದಿಗೂ ಅಜರಾಮರ. ಅಂಬಿ ಅಣ್ಣ ಎಂದೆಂದಿಗೂ ಅಮರ. LOVE U ಅಣ್ಣ ಎಂದು ನಟ ನೆನಪಿರಲಿ ಪ್ರೇಮ್ ಹೇಳಿದ್ದಾರೆ.

  ಎಂದಿಗೂ ಅಮರ- ಪ್ರೇಮ್

  ಎಂದಿಗೂ ಅಮರ- ಪ್ರೇಮ್

  ಆಸೆಗಳು ಮಹಾಪೂರ... ನಿನ್ನಂತೆ ಮತ್ತೊಬ್ಬ ಹುಟ್ಟಲಾರ ನೀ ಎಂದಿಗೂ ಅಮರ... ಹೇ ಜಲೀಲ ನೀ ಎಂದೆಂದಿಗೂ ಅಮರ ಎಂದು ನಿರ್ದೇಶಕ 'ಜೋಗಿ' ಪ್ರೇಮ್, ಅಂಬರೀಶ್ ಅವರ ಜತೆ ತಾವು ಮತ್ತು ರಕ್ಷಿತಾ ಇರುವ ಫೋಟೊ ಹಾಕಿದ್ದಾರೆ.

  ದೊಡ್ಡ ಗಣೇಶ್ ನೆನಪು

  ದೊಡ್ಡ ಗಣೇಶ್ ನೆನಪು

  ನಮ್ಮೆಲ್ಲರ ಮೆಚ್ಚಿನ ಕಲಿಯುಗದ ಕರ್ಣ ಅಂಬರೀಷ್ ರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಕೆಲವು ವರ್ಷಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರೊಂದಿಗೆ ಕೂತು IPL ಪಂದ್ಯ ನೋಡಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ. ಅಂದು ಮ್ಯಾಚ್ ಗಿಂತ ಅವರ ತಮಾಷೆಯ ಮಾತುಗಳೇ ಹೆಚ್ಚು ಮನೊರಂಜನೆ ನೀಡಿತ್ತು ಎಂದು ಕ್ರಿಕೆಟಿಗ, ಬಿಗ್ ಬಾಸ್ ಸ್ಪರ್ಧಿ ದೊಡ್ಡ ಗಣೇಶ್ ಹೇಳಿದ್ದಾರೆ.

  English summary
  Rebel Star Ambareesh 68th Birthday Celebration: Kannada film stars, directors, politicians and many others have wished Ambareesh on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X