Don't Miss!
- News
ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯಕ್ಕೆ ಅನುಕೂಲ: ಹೆಚ್.ಡಿ. ಕುಮಾರಸ್ವಾಮಿ
- Automobiles
ಭಾರತದಲ್ಲಿ ಯಮಹಾ ಸ್ಕೂಟರ್, ಬೈಕ್ಗಳ ದರ ಹೆಚ್ಚಳ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಊಹಾಪೋಹಗಳನ್ನು ಬಿಡಿ : ದರ್ಶನ್ ರನ್ನ ಕಣ್ಣಾರೆ ಕಂಡ ಸಂದೇಶ್ ನಾಗರಾಜ್ ಹೇಳಿದಿಷ್ಟು!
Recommended Video

ಚಾಲೆಂಜಿಗ್ ಸ್ಟಾರ್ ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ಒಂದೊಂದು ಮಾಹಿತಿಗಳು ಸಿಗುತ್ತಿವೆ. ಇದೀಗ 'ಒಡೆಯ' ಸಿನಿಮಾದ ನಿರ್ಮಾಪಕ ಹಾಗೂ ದರ್ಶನ್ ಆಪ್ತರಾದ ಸಂದೇಶ್ ನಾಗರಾಜ್ ಅಪಘಾತದ ಬಗ್ಗೆ ಮಾತನಾಡಿದ್ದಾರೆ.
ನಟ ದರ್ಶನ್ ಕಾರು ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯದಲ್ಲಿ ಅಪಘಾತವಾಗಿದೆ. ಈ ವಿಷಯ ತಿಳಿದ ನಂತರ ಸಂದೇಶ್ ನಾಗರಾಜ್ ಆಸ್ಪತ್ರೆಗೆ ತೆರಳಿದ್ದು, ದರ್ಶನ್ ಜೊತೆಗೆ ಮಾತನಾಡಿದ್ದಾರೆ ಹಾಗೂ ವೈದ್ಯರ ಜೊತೆಗೆ ಚರ್ಚೆ ನಡೆಸಿದ್ದಾರೆ.
ದರ್ಶನ್
ಸ್ಥಿತಿ
ಹೇಗಿದೆ?
ವಿನೋದ್
ಪ್ರಭಾಕರ್
ನೀಡಿದ
ಮಾಹಿತಿ
ದರ್ಶನ್ ರನ್ನ ನೋಡಿರುವ ಅವರು ಘಟನೆಯ ಬಗ್ಗೆ ಹಾಗೂ ದರ್ಶನ್ ಚಿಕಿತ್ಸೆಯ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಮುಂದೆ ಓದಿ...

ಜೋರಾಗಿ ಮಳೆ ಬರುತ್ತಿದ್ದರಿಂದ ಅಪಘಾತ
''ದರ್ಶನ್ ಅಪಘಾತದ ಬಗ್ಗೆ ಮಾಧ್ಯಮಗಳಲ್ಲಿ ಏನೇನೋ ಬರುತ್ತಿದೆ. ರಿಯಲ್ ಆಗಿ ನಡೆದ ಘಟನೆಯನ್ನು ನಾನು ಹೇಳುತ್ತೇನೆ. ನನಗೆ ನಾಲ್ಕು ಗಂಟೆಗೆ ಈ ವಿಷಯ ತಿಳಿಯಿತು. ಬೆಳಗ್ಗೆ ದರ್ಶನ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಜೋರಾಗಿ ಮಳೆ ಬರುತ್ತಿತ್ತು. ಆ ಕಾರಣ ಕಾರಿನ ಚಕ್ರಗಳು ಸ್ಕಿಡ್ ಆಗಿದೆ.'' - ಸಂದೇಶ್ ನಾಗರಾಜ್, ನಿರ್ಮಾಪಕ
ನಟ
ದರ್ಶನ್
ಅಪಘಾತದ
ಬಗ್ಗೆ
ಜಗ್ಗೇಶ್
ಟ್ವೀಟ್

ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು
''ಅಪಘಾತವಾದ ಆಡಿ ಕ್ಯೂ 7 ಕಾರು ದರ್ಶನ್ ಅವರದ್ದು. ಕಾರಿನಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ದರ್ಶನ್ ಸ್ನೇಹಿತ ಈ ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು. ದರ್ಶನ್ ಫ್ರೆಂಡ್ ಕಾರ್ ಡೈವಿಂಗ್ ಮಾಡುತ್ತಿದ್ದು, ದರ್ಶನ್ ಮುಂದು ಕುಳಿತಿದ್ದರು.'' - ಸಂದೇಶ್ ನಾಗರಾಜ್, ನಿರ್ಮಾಪಕ
ಮೈಸೂರಿನಲ್ಲಿ
ಕಾರು
ಅಪಘಾತ,
'ದಾಸ'
ದರ್ಶನ್
ಗೆ
ಕೈ
ಮುರಿತ

ದರ್ಶನ್ ಮೂಳೆ ಫ್ರಾಕ್ಚರ್ ಆಗಿದೆ
''ದರ್ಶನ್ ಗೆ ಮೈನರ್ ಆಗಿ ಗಾಯ ಆಗಿದೆ. ಬಲಗೈ ನ ಮೂಳೆ ಫ್ರಾಕ್ಚರ್ ಆಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ದರ್ಶನ್ ಚೆನ್ನಾಗಿ ಇದ್ದಾರೆ. ಕೈಗೆ ಪ್ಲೇಟ್ ಹಾಕಿದ್ದು, ಎರಡು ವಾರದ ನಂತರ ಅದನ್ನು ತೆಗೆಯುತ್ತಾರೆ. ದೇವರಾಜ್ ಬೆರಳಿಗೆ ಪೆಟ್ಟು ಬಿದಿದೆ. ಪ್ರಜ್ವಲ್ ದೇವರಾಜ್ ಹಣೆಗೆ ಸಣ್ಣ ಪೆಟ್ಟಾಗಿದೆ. ಡೈವರ್ ಗೆ ಬಲಗೈ ಹೊಡೆತ ಬಿದ್ದಿದೆ.'' - ಸಂದೇಶ್ ನಾಗರಾಜ್, ನಿರ್ಮಾಪಕ

ಇಂದಿನಿಂದ ಬೆಂಗಳೂರಿನಲ್ಲಿ ಶೂಟಿಂಗ್ ಇತ್ತು
''ಓಡೆಯ' ಸಿನಿಮಾದ ಶೂಟಿಂಗ್ ನಿನ್ನೆ ಮೈಸೂರಿನಲ್ಲಿ ಮುಗಿದಿತ್ತು. ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ರಾತ್ರಿ ಒಬ್ಬರ ಮನೆಯಲ್ಲಿ ಊಟ ಮಾಡಿ ಬರುತ್ತಿದ್ದ ವೇಳೆ ಈ ಘಟನೆ ನೆಡೆದಿದೆ. ಸದ್ಯ ಡಾಕ್ಟರ್ ಶಣೈ ಅಜಯ್ ಹೆಗ್ಡೆ ಚಿಕಿತ್ಸೆ ನೀಡುತ್ತಿದ್ದಾರೆ.'' - ಸಂದೇಶ್ ನಾಗರಾಜ್, ನಿರ್ಮಾಪಕ

ಅಳುತ್ತಿದ್ದಾನೆ ಮಗ ವಿನೀಶ್
''ನಾನು ಆಸ್ಪತ್ರೆಗೆ ಹೋದಾಗ ನನ್ನ ಜೊತೆಗೆ ದರ್ಶನ್ ಮಾತನಾಡಿದರು. ಧ್ರುವ ಸರ್ಜಾ, ಸೃಜನ್ ಲೋಕೇಶ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಸ್ಪತ್ರೆಗೆ ಬಂದಿದ್ದಾರೆ. ದರ್ಶನ್ ಮಗ ವಿನೀಶ್ ಅಪ್ಪನನ್ನು ನೋಡದೆ ಅಳುತ್ತಿದ್ದ. ಬಳಿಕ ಫೋನ್ ನಲ್ಲಿ ಅವರ ಜೊತೆಗೆ ಮಾತಾಡಿದ.'' - ಸಂದೇಶ್ ನಾಗರಾಜ್, ನಿರ್ಮಾಪಕ

ಒಂದು ವಾರ ವಿಶ್ರಾಂತಿ ಬೇಕಾಗಬಹುದು
''ದರ್ಶನ್ ಗೆ ಏನು ಆಗಿಲ್ಲ. ಯಾವುದೇ ತೊಂದರೆ ಇಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ನಾಳೆಯಿಂದ ಅವರು ಅವರ ಮನೆಯಲ್ಲಿ ಇರುತ್ತಾರೆ. ಅಭಿಮಾನಿಗಳು ಆತಂಕ ಪಡಬೇಡಿ ಎಂದು ಕೇಳುಕೊಳ್ಳುತ್ತೇನೆ. ಇಂದು ರಾತ್ರಿ ಅಥವಾ ನಾಳೆ ಡಿಸ್ಚಾರ್ಜ್ ಮಾಡಬಹುದು.'' - ಸಂದೇಶ್ ನಾಗರಾಜ್, ನಿರ್ಮಾಪಕ