For Quick Alerts
  ALLOW NOTIFICATIONS  
  For Daily Alerts

  ಇಸ್ಲಾಂ ಧರ್ಮಕ್ಕೆ ಗೆ ಮತಾಂತರ ಆಗಿದ್ದಾರೆಯೇ ಸಂಜನಾ ಗಲ್ರಾನಿ?

  |

  ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸಂಜನಾ ಗಲ್ರಾನಿ ಧರ್ಮದ ಬಗ್ಗೆ ಈಗ ಪ್ರಶ್ನೆ ಎದ್ದಿದೆ.

  Islam ಧರ್ಮಕ್ಕೆ ಗೆ ಮತಾಂತರ ಆಗಿದ್ದಾರೆಯೇ Sanjjanaa Galrani | Oneindia Kannada

  ಚಿತ್ರರಂಗಕ್ಕೆ ಮಾದಕ ಜಾಲದ ನಂಟಿನ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಸಂಜನಾ ವಿರುದ್ಧ ಕಿಡಿ ಕಾರುತ್ತಲೇ ಇರುವ, ಆರೋಪಗಳನ್ನು ಮಾಡುತ್ತಲೇ ಇರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ, ಸಂಜನಾ ಬಗ್ಗೆ ಹೊಸದೊಂದು ಮಾಹಿತಿ ಹರಿಬಿಟ್ಟಿದ್ದಾರೆ.

  ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸಂಜನಾ ಬಗ್ಗೆ ಪೋಸ್ಟ್ ಹಾಕಿರುವ ಸಂಬರ್ಗಿ, ' 2018 ರಲ್ಲಿಯೇ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ' ಎಂದಿದ್ದಾರೆ.

  2018 ರಲ್ಲಿಯೇ ಸಂಜನಾ ಮತಾಂತರವಾಗಿದ್ದಾರೆ: ಸಂಬರ್ಗಿ

  2018 ರಲ್ಲಿಯೇ ಸಂಜನಾ ಮತಾಂತರವಾಗಿದ್ದಾರೆ: ಸಂಬರ್ಗಿ

  '2018 ರಲ್ಲಿಯೇ ಸಂಜನಾ ತಮ್ಮ ಧರ್ಮವನ್ನು ತೊರೆದು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಈಗ ಆಕೆಯ ಹೆಸರು ಮಹಿರಾ. ಕರ್ನಾಟಕದಲ್ಲೂ 'ಲವ್ ಜಿಹಾದ್' ನಡೆಯುತ್ತಿದೆ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ಪ್ರಶಾಂತ್ ಸಂಬರ್ಗಿ.

  ಸಿಸಿಬಿ ಚಾರ್ಜ್‌ಶೀಟ್‌ನಲ್ಲಿ ಸಂಜನಾ ಎಂದೇ ಹೆಸರಿದೆ

  ಸಿಸಿಬಿ ಚಾರ್ಜ್‌ಶೀಟ್‌ನಲ್ಲಿ ಸಂಜನಾ ಎಂದೇ ಹೆಸರಿದೆ

  ಸಂಜನಾ ಗಲ್ರಾನಿ ಮತಾಂತರವಾಗಿದ್ದಾರೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸಿಸಿಬಿ ಚಾರ್ಜ್‌ಶೀಟ್‌ನಲ್ಲಿ ಸಹ ಅವರ ಹೆಸರು ಸಂಜನಾ ಗಲ್ರಾನಿ ಎಂದೇ ಇದೆಯೇ ಹೊರತು ಮಹಿರಾ ಎಂದು ಇಲ್ಲ.

  ವೈದ್ಯ ಅಜೀಜ್ ಜೊತೆಗೆ ವಿವಾಹ ನಿಶ್ಚಯವಾಗಿತ್ತು

  ವೈದ್ಯ ಅಜೀಜ್ ಜೊತೆಗೆ ವಿವಾಹ ನಿಶ್ಚಯವಾಗಿತ್ತು

  ಸಂಜನಾ ಗಲ್ರಾನಿ ಅವರ ವಿವಾಹ ಇಸ್ಲಾಂ ಧರ್ಮದ ವೈದ್ಯರೊಬ್ಬರೊಂದಿಗೆ ಆಗುವುದರಲ್ಲಿತ್ತು. ವೈದ್ಯ ಅಜೀಜ್ ಅವರೊಟ್ಟಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಮದುವೆ ಮುಂದೂಡಲಾಗಿದೆ. ವೈದ್ಯ ಅಜೀಜ್ ಅವರನ್ನು ಬಹು ವರ್ಷಗಳಿಂದ ಪ್ರೀತಿಸುತ್ತಿದ್ದರು ಸಂಜನಾ.

  ದಾಖಲೆ ಹಂಚಿಕೊಂಡಿರುವ ಪ್ರಶಾಂತ್ ಸಂಬರ್ಗಿ

  ದಾಖಲೆ ಹಂಚಿಕೊಂಡಿರುವ ಪ್ರಶಾಂತ್ ಸಂಬರ್ಗಿ

  ದಾಖಲೆಯೊಂದನ್ನು ಪ್ರಶಾಂತ್ ಸಂಬರ್ಗಿ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದರುಲ್ ಉಲುಮ್ ಶಾ ವಲಿಉಲ್ಲಾ ಎಂಬ ಹೆಸರಿನಿಂದ ಬರೆಯಲಾಗಿರುವ ಈ ಪತ್ರದಲ್ಲಿ, ಅರ್ಚನಾ ಮನೋಹರ್ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು, ಇನ್ನು ಮುಂದೆ ಅವರನ್ನು ಮಹಿರಾ ಎಂದು ಕರೆಯಬೇಕು ಎಂದು ಬರೆಯಲಾಗಿದೆ.

  English summary
  Prashanth Sambargi said Sanjana Galrani changed her religion to Islam in 2018. He also accused that Love Jihad is happening in Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X