»   » ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ ಸುಗ್ಗಿ ಸಂಭ್ರಮ

ಸ್ಯಾಂಡಲ್ ವುಡ್ ನಲ್ಲಿ ಜೋರಾಗಿದೆ ಸುಗ್ಗಿ ಸಂಭ್ರಮ

Posted By:
Subscribe to Filmibeat Kannada

ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸುಗ್ಗಿ ಹಬ್ಬದ ಸಂಭ್ರಮ ಸ್ಯಾಂಡಲ್ ವುಡ್ ಅಂಗಳದಲ್ಲೂ ಜೋರಾಗಿದೆ. ಇಂದು ಭೂಮಿತಾಯಿಗೆ ನಮಿಸಿ ಕೃಷಿ ಕೆಲಸಗಳನ್ನ ರೈತರು ಶುರು ಮಾಡಿದರೆ ಚಿತ್ರರಂಗದಲ್ಲಿ ನಿರ್ದೇಶಕರು ತಮ್ಮ ಸಿನಿಮಾ ಕೆಲಸಗಳನ್ನ ಶುರು ಮಾಡುತ್ತಿದ್ದಾರೆ.

ಹಬ್ಬದ ಸಂಭ್ರಮದಲ್ಲಿರುವ ಸಿನಿ ರಸಿಕರಿಗಾಗಿ ಕನ್ನಡ ಸಿನಿಮಾ ನಿರ್ದೇಶಕರು ಚಿತ್ರದ ಪೋಸ್ಟರ್ ಗಳನ್ನ ರಿಲೀಸ್ ಮಾಡಿದ್ದಾರೆ. ಹೊಸ ಚಿತ್ರಗಳ ಡೈರೆಕ್ಟರ್ ಗಳು ತಮ್ಮ ಕ್ರಿಯೇಟಿವಿಟಿ ತಕ್ಕಂತೆ ವಿಭಿನ್ನವಾಗಿ ಫಸ್ಟ್ ಲುಕ್ ಡಿಸೈನ್ ಮಾಡಿದ್ದಾರೆ.

ಇನ್ನು ಕೆಲವರು ವಾವ್ಹ್ ಅನ್ನಿಸಿ ಚಿತ್ರದ ಬಗ್ಗೆ ಕುತೂಹಲ ಮೂಡಿಸುವಂತೆ ಪೊಸ್ಟರ್ ಗಳನ್ನ ಬಿಡುಗಡೆ ಮಾಡಿದ್ದಾರೆ. ಹಾಗಾದ್ರೆ ಸಂಕ್ರಾಂತಿ ಸಂಭ್ರಮಕ್ಕೆ ಯಾವೆಲ್ಲಾ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿವೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

ರಿಲ್ಯಾಕ್ಸ್ ಆಗ್ತಿದ್ದಾನೆ ಸ್ಯಾಂಡಲ್ ವುಡ್ ಸತ್ಯ

'ಅಕಿರಾ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ನಿರ್ದೇಶಕ ನವೀನ್ ರೆಡ್ಡಿ ನಿರ್ದೇಶನದ ಎರಡನೇ ಸಿನಿಮಾ 'ರಿಲ್ಯಾಕ್ಸ್ ಸತ್ಯ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಚಿತ್ರದಲ್ಲಿ ಪ್ರಭು ಮುಂಡ್ಕೂರ್ ನಾಯಕನಾಗಿ ಅಭಿನಯಿಸುತಿದ್ದಾರೆ. ಇನ್ನೂ ದರ್ಶನ್ ಸಹೋದರ ಮನೋಜ್ ಅಭಿನಯದ ರಘುಶಾಸ್ತ್ರಿ ನಿರ್ದೇಶನದ 'ಟಕ್ಕರ್' ಚಿತ್ರದ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.

ಅಯೋಗ್ಯನ ಜೊತೆ ಲೈವ್ ಜೊತೆ ಒಂದ್ ಸೆಲ್ಫಿ

ಮಹೇಶ್ ನಿರ್ದೇಶನದ ರಚಿತಾ ರಾಮ್ ಹಾಗೂ ನಿನಾಸಂ ಸತೀಶ್ ಅಭಿನಯದ 'ಅಯೋಗ್ಯ' ಸಿನಿಮಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಅದರ ಜೊತೆಯಲ್ಲಿ ಪ್ರಜ್ವಲ್, ನೆನಪಿರಲಿ ಪ್ರೇಮ್ ಹಾಗೂ ಹರಿಪ್ರಿಯಾ ಅಭಿನಯದ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರದ ಮೊದಲ ಪೋಸ್ಟರ್ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲಾಗಿದೆ.

ಕಿಸ್ ಪೋಸ್ಟರ್ ಜೊತೆ ಪಾರ್ವತಮ್ಮನ ಮಗ ಭರಣಿ

ನಿರ್ದೇಶಕ ಎ ಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದ ಸ್ಪೆಷಲ್ ಪೋಸ್ಟರ್ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಿದೆ. ಇವುಗಳ ಜೊತೆಯಲ್ಲಿ ಚನಾನಿರಾಜ ನಿರ್ದೇಶನದ 'ಭರಣಿ' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ಶೃತಿ ಹರಿಹರನ್ ಅಭಿನಯದ 'ನಾತಿಚರಾಮಿ'

ನಟಿ ಮೇಘನಾ ರಾಜ್ ತಮ್ಮ ನಿಶ್ಚಿತಾರ್ಥದ ಬಳಿಕ ಮಾಡುತ್ತಿರುವ ಹೊಸ ಸಿನಿಮಾ ಇರುವುದೆಲ್ಲವ ಬಿಟ್ಟು ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ತಿಲಕ್ ಮತ್ತು ಮೇಘನಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಯಲ್ಲಿ ನಟಿ ಶೃತಿ ಹರಿಹರನ್ ಅಭಿನಯದ 'ನಾತಿಚರಾಮಿ' ಸಿನಿಮಾದ ಫಸ್ಟ್ ಕೂಡ ಬಿಡುಗಡೆ ಆಗಿದೆ. ರಿಲೀಸ್ ಆಗಿರುವ ಚಿತ್ರದ ಪೋಸ್ಟರ್ ಸಿಂಪಲ್ ಮತ್ತು ಸೂಪರ್ ಆಗಿದೆ.

English summary
The Sankranti festival special Takkar, Relax Satya, Bharani, Kiss kannada movies posters released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X