For Quick Alerts
  ALLOW NOTIFICATIONS  
  For Daily Alerts

  ಸಾನ್ಯಾ ಇಷ್ಟದ ನಟ ಯಾರು? ಯಾರ ಜೊತೆ ನಟಿಸುವ ಆಸೆ? ಅಭಿಮಾನಿಗಳ ಪ್ರಶ್ನೆಗೆ ಪುಟ್ಟಗೌರಿ ಉತ್ತರ

  |

  ಸ್ಯಾಂಡಲ್ ವುಡ್ ನಟಿ ಸಾನ್ಯಾ ಅಯ್ಯರ್ ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ? ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ನಟಿಯಾಗಿ ಗುರುತಿಸಿಕೊಳ್ಳುವ ಕನಸು ಕಂಡಿರುವ ಸಾನ್ಯಾ, ಮುಂದಿನ ಸಿನಿಮಾ ತಾಯಾರಿ ಹೇಗಿದೆ?. ಕನ್ನಡ ಫಿಲ್ಮೀಬೀಟ್' ಆಯೋಜಿಸಿದ್ದ ಫೇಸ್‌ಬುಕ್‌ ಲೈವ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಸಾನ್ಯಾ ಉತ್ತರಸಿದ್ದಾರೆ.

  ಅಂದ್ಹಾಗೆ ಸಾನ್ಯಾ ಅಯ್ಯರ್ ಅಂದರೆ ಯಾರು ಅಂತ ಥಟ್ ಅಂತ ಗೊತ್ತಾಗಲಿಕ್ಕಿಲ್ಲ. ಜೂ.ಪುಟ್ಟಗೌರಿ ಅಂದರೆ ಕನ್ನಡಿಗರಿಗೆ ಬೇಗ ಗೊತ್ತಾಗುತ್ತೆ. ಮುದ್ದಾದ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಬಾಲನಟಿ ಪುಟ್ಟಗೌರಿ ಈಗ ದೊಡ್ಡವಳಾಗಿದ್ದಳೆ.

  ಜೂ.ಪುಟ್ಟಗೌರಿ ಈಗ ಹೇಗಿದ್ದಾರೆ, ಏನ್ಮಾಡುತ್ತಿದ್ದಾರೆ ಗೊತ್ತಾ?ಜೂ.ಪುಟ್ಟಗೌರಿ ಈಗ ಹೇಗಿದ್ದಾರೆ, ಏನ್ಮಾಡುತ್ತಿದ್ದಾರೆ ಗೊತ್ತಾ?

  ಸಿನಿಮಾದಲ್ಲಿ ಮಿಂಚುವ ತಯಾರಿಯಲ್ಲಿದೆ. ಸದ್ಯ ಓದಿನ ಕಡೆ ಗಮನ ಹರಿಸಿರುವ ಸಾನ್ಯಾ ಓದು ಮುಗಿಯುತ್ತಿದ್ದಂತೆ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಈ ಬಗ್ಗೆ ಸಾನ್ಯಾ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಾರೆ.

  ಆಸೆ, ಕನಸುಗಳನ್ನು ಸ್ಯಾಂಡಲ್ ವುಡ್ ನಲ್ಲಿ ಇಟ್ಟಿರುವ ಸಾನ್ಯಾ ಸದ್ಯ ಮೊದಲ ವರ್ಷದ ಮಾಸ್ ಕಮ್ಯುನಿಕೇಶನ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬರು ಸಾನ್ಯಾ ಅವರಿಗೆ ಸ್ಯಾಂಡಲ್ ವುಡ್ ನ್ ಯಾವ ನಟನ ಜೊತೆ ನಟಿಸುವ ಆಸೆ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಾನ್ಯಾ "ಯಾವ ನಟ ಆದರು ಸರಿ. ನಾನು ನಟಿಸುತ್ತೇನೆ. ನಾನು ಚಿತ್ರರಂಗಕ್ಕೆ ಎಂಟ್ರಿ ಕೊಡುವಷ್ಟೊತ್ತಿಗೆ ಸಾಕಷ್ಟು ಹೊಸ ಕಲಾವಿದರು ಬಂದಿರುತ್ತಾರೆ" ಎಂದು ಹೇಳಿದ್ದಾರೆ.

  ಇನ್ನೂ ಸ್ಯಾಂಡಲ್ ವುಡ್ ನಲ್ಲಿ ನಿಮ್ಮ ಫೇವರಿಟ್ ನಟ ಯಾರು ಅಂತ ಕೇಳಿದ್ದಕ್ಕೆ, "ಪುನೀತ್ ರಾಜ್ ಕುಮಾರ್, ಯಶ್ ಮತ್ತು ರಕ್ಷಿತ್ ಶೆಟ್ಟಿ ಹೆಸರು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಸ್ಟೈಲ್, ಡ್ಯಾನ್ಸ್ ತುಂಬಾ ಇಷ್ಟವಂತೆ' ಹೊಸ ರೀತಿಯ ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ಇದೆಯಂತೆ.

  English summary
  Actress Sanya Iyer likes puneeth Rajkumar, Yash and Rakshith Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X