twitter
    For Quick Alerts
    ALLOW NOTIFICATIONS  
    For Daily Alerts

    ''ಯಾವ ಹೀರೋನನ್ನು ಕಳಪೆಯಾಗಿ ನೋಡಬೇಡಿ'' - ಸತೀಶ್ ನೋವಿನ ನುಡಿ

    |

    ಒಂದು ಸಿನಿಮಾ, ಒಂದೇ ಒಂದು ಗೆಲುವು ಒಬ್ಬ ಕಲಾವಿದನನ್ನು ಯಾವ ಹಂತಕ್ಕೆ ಬೇಕಾದರೂ ಕರೆದುಕೊಂಡು ಹೋಗುತ್ತದೆ. ನಟ ಸತೀಶ್ ನೀನಾಸಂ ಸಹ ಇದೀಗ ಗೆಲುವಿನ ಉತ್ತುಂಗಕ್ಕೆ ಏರಿದ್ದಾರೆ. ಅದಕ್ಕೆ ಕಾರಣವಾಗಿದ್ದು 'ಅಯೋಗ್ಯ' ಸಿನಿಮಾ.

    ಬಹಳ ವರ್ಷಗಳ ಬಳಿಕ ಸತೀಶ್ ಗೆಲುವಿನ ನಗೆ ಬೀರಿದ್ದು ಕಳೆದ ವರ್ಷ. ಸಿನಿಮಾಗಳ ಮೇಲೆ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸತೀಶ್ ಗೆ ದೊಡ್ಡ ಬ್ರೇಕ್ ನೀಡಿದ್ದು 'ಅಯೋಗ್ಯ' ಸಿನಿಮಾ. ಇಂತಹ 'ಅಯೋಗ್ಯ' ಸಿನಿಮಾದ ಬಗ್ಗೆ ಸತೀಶ್ ಗೆ ನೂರು ನೆನಪುಗಳಿವೆ.

     ವಿಮರ್ಶೆ : ಈ ಮಂಡ್ಯದ ಗಂಡು ಅಯೋಗ್ಯ ಅಲ್ಲ 'ಯೋಗ್ಯ' ವಿಮರ್ಶೆ : ಈ ಮಂಡ್ಯದ ಗಂಡು ಅಯೋಗ್ಯ ಅಲ್ಲ 'ಯೋಗ್ಯ'

    'ಅಯೋಗ್ಯ' ಸಿನಿಮಾ ಕಳೆದ ವರ್ಷದ ಹಿಟ್ ಸಿನಿಮಾವಾಗಿದ್ದು, 100 ದಿನಗಳನ್ನು ಪೂರೈಸಿತ್ತು. ನಿನ್ನೆ (ಭಾನುವಾರ) ಬೆಂಗಳೂರಿನ ಕಲಾವಿದರ ಸಂಘದಲ್ಲಿ ಸಿನಿಮಾದ ಶತದಿನೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ತಮ್ಮ ನೋವನ್ನು ಹಂಚಿಕೊಂಡರು. ಮುಂದೆ ಓದಿ....

    'ಟೈಗರ್ ಗಲ್ಲಿ' ಸಿನಿಮಾ ಸೋತ್ತಿತ್ತು

    'ಟೈಗರ್ ಗಲ್ಲಿ' ಸಿನಿಮಾ ಸೋತ್ತಿತ್ತು

    ಸತೀಶ್ 'ಟೈಗರ್ ಗಲ್ಲಿ' ಸಿನಿಮಾದ ಬಗ್ಗೆ ಬಹಳ ನಂಬಿಕೆ ಇಟ್ಟಿದ್ದರು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಆಕ್ಷನ್ ಹೀರೋ ಆಗಿ ಸತೀಶ್ ನಟಿಸಿದ್ದರು. ಆದರೆ, ಆ ಸಿನಿಮಾ ಸೋಲು ಅನುಭವಿಸಿತ್ತು. ಆ ಚಿತ್ರ ಸೋತರೂ ಅದೇ ದಿನ ನಿರ್ಮಾಪಕ ಚಂದ್ರಶೇಖರ್ ಸತೀಶ್ ಜೊತೆಗೆ 'ಅಯೋಗ್ಯ' ಸಿನಿಮಾ ಶುರು ಮಾಡಿದ್ದರು.

    ನೂರು ದಿನ, ನೂರಾರು ನೋವು

    ನೂರು ದಿನ, ನೂರಾರು ನೋವು

    'ಅಯೋಗ್ಯ' ಸಿನಿಮಾ ಶುರು ಮಾಡಿದ್ದ ಸತೀಶ್ ಅಂಡ್ ಟೀಮ್ ಬಹಳ ಸಮಸ್ಯೆಗಳು ಬಂತು. ಈ ಎಲ್ಲ ಸಮಸ್ಯೆಗಳನ್ನು ಎದುರಿಸಿದ್ದ ತಂಡ ಇಂದು ಶತದಿನೋತ್ಸವದಲ್ಲಿ ಒಂದಾಗಿತ್ತು. ಕಾರ್ಯಕ್ರಮದಲ್ಲಿ ಸತೀಶ್ ಚಿತ್ರದ ಹಿಂದಿನ ನೋವನ್ನು ಹಂಚಿಕೊಂಡರು. ಸಿನಿಮಾದ ಬಗ್ಗೆ ಮಾತನಾಡುತ್ತ ಅವರು ಭಾವುಕರಾದರು.

    ಮಂಡ್ಯದ ಅ'ಯೋಗ್ಯ'ನ ಬಗ್ಗೆ ವಿಮರ್ಶಕರು ಹಿಂಗೆ ಹೇಳವ್ರೆ ಮಂಡ್ಯದ ಅ'ಯೋಗ್ಯ'ನ ಬಗ್ಗೆ ವಿಮರ್ಶಕರು ಹಿಂಗೆ ಹೇಳವ್ರೆ

    ಯಾವ ಹೀರೋನು ಕಳಪೆಯಾಗಿ ನೋಡಬೇಡಿ

    ಯಾವ ಹೀರೋನು ಕಳಪೆಯಾಗಿ ನೋಡಬೇಡಿ

    ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ''ಯಾವ ಹೀರೋನು ಕಳಪೆಯಾಗಿ ನೋಡಬೇಡಿ. ಆತ ಒಂದೇ ಒಂದು ಅವಕಾಶ, ಒಂದೇ ಸಿನಿಮಾದಿಂದ ಎದ್ದು ಬರುತ್ತಾನೆ. ಯಾರು ಏನು ಬೇಕಾದರೂ ಆಗಬಹುದು. ಅದಕ್ಕೆ ಯಾವ ಕಲಾವಿದರ ಬಗ್ಗೆ ಏನು ಹೇಳಬೇಡಿ. ಅಂದು ನೋವು ತಿಂದ್ದು, ನಾವು ಇವತ್ತು ಸಿನಿಮಾದ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಇದರ ಹಿಂದೆ ತುಂಬ ದುಃಖಗಳು ಇವೆ.'' ಎಂದಿದ್ದಾರೆ.

    ಸಿನಿಮಾ ಸೋತರೇ ಹೀರೋ ಬಗ್ಗೆ ಕೆಟ್ಟ ಮಾತು

    ಸಿನಿಮಾ ಸೋತರೇ ಹೀರೋ ಬಗ್ಗೆ ಕೆಟ್ಟ ಮಾತು

    ''ಸಿನಿಮಾ ಗೆದ್ದರೇ ಎಲ್ಲ ನನ್ನಿಂದ, ನಂದೇ ಸಿನಿಮಾ ಎನ್ನುತ್ತಾರೆ. ಆದರೆ, ಸಿನಿಮಾ ಸೋತರೇ ಹೀರೋ ಮೇಲೆ ಹಾಕುತ್ತಾರೆ. ಆ ಹೀರೋಗೆ ಓಪನಿಂಗ್ ಇಲ್ಲ, ಕಲೆಕ್ಷನ್ ಇಲ್ಲ, ಟಿವಿ ರೈಟ್ಸ್ ಸೇಲ್ ಆಗಲ್ಲ, ಕೈ ಇಲ್ಲ, ಕಾಲ್ ಇಲ್ಲ.. ಅದು ಇಲ್ಲ.. ಇದು ಇಲ್ಲ.. ಹೀಗೆ ಏನೇನೋ ಹೇಳುತ್ತಾರೆ.'' ಎಂದರು ಸತೀಶ್.

    'ಅಯೋಗ್ಯ' ಚಿತ್ರದ ನಟಿ ದೃಶ್ಯ ವಿರುದ್ಧ ಎಫ್ ಐ ಆರ್

    ನಿರ್ದೇಶಕ ಮಹೇಶ್ ಬಗ್ಗೆ ಮೆಚ್ಚುಗೆ

    ನಿರ್ದೇಶಕ ಮಹೇಶ್ ಬಗ್ಗೆ ಮೆಚ್ಚುಗೆ

    ನಿರ್ದೇಶಕ ಮಹೇಶ್ ರನ್ನು ಮೆಚ್ಚಿಕೊಂಡ ಸತೀಶ್, ಸಿನಿಮಾದ ಎಲ್ಲ ಕಷ್ಟಗಳಲ್ಲಿ ನಾನು ಮಹೇಶ್ ಇಬ್ಬರು ಜೊತೆಗೆ ಇದ್ದೆವು ಎಂದಿದ್ದಾರೆ. ಸಿನಿಮಾವನ್ನು ಗೆಲ್ಲಿಸಿದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಈ ರೀತಿ ತಮ್ಮ ನೋವನ್ನು ಶತದಿನೋತ್ಸವದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸತೀಶ್ ಹೊರ ಹಾಕಿದ್ದಾರೆ.

    English summary
    Actor Sathish Neenasam become emotional in Ayogya kannada movie 100 days program. The movie is directed by Mahesh Gowda.
    Monday, March 11, 2019, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X