For Quick Alerts
  ALLOW NOTIFICATIONS  
  For Daily Alerts

  ಪೆಟ್ರೋಮ್ಯಾಕ್ಸ್ ಟ್ರೈಲರ್: ಸ್ವಲ್ಪ ಚೇಷ್ಟೆ, ಜಾಸ್ತಿ ಗಂಭೀರತೆ

  |

  ಕನ್ನಡ ನಟ ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ನಟನೆಯ 'ಪೆಟ್ರೋಮ್ಯಾಕ್ಸ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ.

  'ನೀರ್‌ದೋಸೆ' ಬಳಿಕ ನಿರ್ದೇಶಕ ವಿಜಯ ಪ್ರಸಾದ್ ಮಾಡುತ್ತಿರುವ ಚಿತ್ರ ಇದಾಗಿದ್ದು, ಟ್ರೈಲರ್ ಸಖತ್ ಮಜವಾಗಿ ಮೂಡಿ ಬಂದಿದೆ. ಟ್ರೈಲರ್‌ನಲ್ಲೇ ಈ ಮಟ್ಟಕ್ಕೆ ಮಜಾ ಇದೆ ಅಂದ್ರೆ ಇನ್ನು ಸಿನಿಮಾದಲ್ಲಿ ಯಾವ ಮಟ್ಟಕ್ಕೆ ಇರಬೇಡ ಎಂದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  ಸತೀಶ್ ನೀನಾಸಂ 'ಪೆಟ್ರೋಮ್ಯಾಕ್ಸ್' ಚಿತ್ರೀಕರಣ ಮುಕ್ತಾಯಸತೀಶ್ ನೀನಾಸಂ 'ಪೆಟ್ರೋಮ್ಯಾಕ್ಸ್' ಚಿತ್ರೀಕರಣ ಮುಕ್ತಾಯ

  ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದು, ಮೊದಲ ಚಿತ್ರದಲ್ಲೇ ಪ್ರೇಕ್ಷಕರಿಂದ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಟ್ರೈಲರ್ ಸಖತ್ ಎಂಟರ್‌ಟೈನ್ ಆಗಿದೆ. ಡಬಲ್ ಮೀನಿಂಗ್ ಡೈಲಾಗ್‌ಗಳು, ಪಂಚ್, ಕಾಮಿಡಿ ಹಾಗೂ ಪಾತ್ರಗಳು ಎಲ್ಲವೂ ಪೆಟ್ರೋಮ್ಯಾಕ್ಸ್ ಚಿತ್ರದ ಹೈಲೈಟ್. ಈ ಟ್ರೈಲರ್ ನೋಡಿದ್ಮೇಲೆ ಈ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುತ್ತದೆ.

  ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಬಹುತೇಕ ಮೈಸೂರಿನಲ್ಲಿ ನಡೆದಿದೆ. ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18, 'ಪೆಟ್ರೋಮ್ಯಾಕ್ಸ್' ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗಿದೆ. ನಿರಂಜನ್ ಬಾಬು ಅವರ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಅನೂಪ್ ಸೀಳಿನ್ ಸಂಗೀತವಿದೆ. ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಜೊತೆಗೆ ಚಿತ್ರದಲ್ಲಿ ಕಾರುಣ್ಯ ರಾಮ್, ನಾಗಭೂಷಣ, ವಿಜಯಲಕ್ಷೀಸಿಂಗ್, ಗೊಂಬೆಗಳ ಲವ್ ಖ್ಯಾತಿಯ ಅರುಣ್, ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

  ತಮಿಳು ನಟ ಶಶಿಕುಮಾರ್ ಜೊತೆ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂತಮಿಳು ನಟ ಶಶಿಕುಮಾರ್ ಜೊತೆ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ

  ಕಳೆದ ಜನವರಿ ತಿಂಗಳಲ್ಲಿ ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಗಿದಿತ್ತು. ಕೊರೊನಾ ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ತೆರೆಗೆ ಬರಬೇಕಿತ್ತು. ಅಂದ್ಹಾಗೆ, 2020ರಲ್ಲಿ ಸತೀಶ್ ನೀನಾಸಂ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಪೆಟ್ರೋಮ್ಯಾಕ್ಸ್ ಹೆಚ್ಚು ಕುತೂಹಲ ಮೂಡಿಸಿದೆ.

  Sathish Ninasam and Hariprriya Starrer Petromax movie trailer released

  ತಮಿಳು ನಟ ಶಶಿಕುಮಾರ್ ನಟನೆಯ 'ಪಗೈವಾನುಲು ಅರುಲ್ವಾಯ್' (Pagaivanulu Arulvai) ಚಿತ್ರದಲ್ಲಿ ಸತೀಶ್ ನೀನಾಸಂ ನಟಿಸುತ್ತಿದ್ದು, ಶೂಟಿಂಗ್ ಶುರು ಮಾಡಿದ್ದಾರೆ. ನಿರ್ದೇಶಕ ಅನಿಸ್ ಅಬ್ಬಾಸ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರ ಷೇಕ್ಸ್‌ಪಿಯರ್ ಕಥೆಯಿಂದ ಸ್ಫೂರ್ತಿಗೊಂಡಿರುವ ಈ ಸಿನಿಮಾದಲ್ಲಿ ಸತೀಶ್ ನೀನಾಸಂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖೈದಿ ಪಾತ್ರದಲ್ಲಿ ನಟಿಸಿದ್ದಾರೆ.

  ಇನ್ನುಳಿದಂತೆ ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ 'ಗೋಧ್ರಾ' ಸಿನಿಮಾದ ಚಿತ್ರೀಕರಣ ಮುಗಿದಿದೆ. ವಿಜಯ್ ಪ್ರಸಾದ್ ಅವರ ಜೊತೆಯಲ್ಲಿಯೇ 'ಪರಿಮಳ ಲಾಡ್ಜ್' ಸಿನಿಮಾ ಘೋಷಣೆಯಾಗಿದೆ. ದಸರಾ ಹಾಗೂ ಮ್ಯಾಟ್ನಿ ಚಿತ್ರಗಳಲ್ಲಿಯೂ ಸತೀಶ್ ನೀನಾಸಂ ನಟಿಸುತ್ತಿದ್ದಾರೆ.

  ಮತ್ತೊಂದೆಡೆ ಪೆಟ್ರೋಮ್ಯಾಕ್ಸ್ ಸಿನಿಮಾ ಮುಗಿಸಿರುವ ನಿರ್ದೇಶಕ ವಿಜಯ್ ಪ್ರಸಾದ್, ನಟ ಜಗ್ಗೇಶ್ ಜೊತೆ ತೋತಾಪುರಿ ಚಿತ್ರ ಮಾಡಿದ್ದಾರೆ. ಎರಡು ಭಾಗಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಜಗ್ಗೇಶ್ ಜೊತೆ ಅದಿತಿ ಪ್ರಭುದೇವ, ಧನಂಜಯ್ ಸಹ ನಟಿಸಿದ್ದಾರೆ.

  English summary
  Kannada Actor Sathish Ninasam and Hariprriya Starrer Petromax movie trailer released.
  Monday, September 20, 2021, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X