»   » ಸತ್ಯ ಹರಿಶ್ಚಂದ್ರ ಚಿತ್ರದ 'ಕುಲದಲ್ಲಿ ಕೀಳ್ಯಾವುದೋ' ಹಾಡು ಮತ್ತೆ ಬಳಕೆ!

ಸತ್ಯ ಹರಿಶ್ಚಂದ್ರ ಚಿತ್ರದ 'ಕುಲದಲ್ಲಿ ಕೀಳ್ಯಾವುದೋ' ಹಾಡು ಮತ್ತೆ ಬಳಕೆ!

Posted By:
Subscribe to Filmibeat Kannada

ಡಾ ರಾಜ್ ಕುಮಾರ್, ಪಂಡಿರಿಬಾಯಿ ಅಭಿನಯದ ಸೂಪರ್ ಹಿಟ್ ಚಿತ್ರ 'ಸತ್ಯ ಹರಿಶ್ಚಂದ್ರ'. 1965ರಲ್ಲಿ ತೆರೆಕಂಡ ಈ ಚಿತ್ರದಷ್ಟೇ ಸೂಪರ್ ಹಿಟ್ ಆಗಿದ್ದು, 'ಕುಲದಲ್ಲಿ ಕೀಳ್ಯಾವುದೋ ಹಾಡು'. ಅಂದಿನ ಕಾಲದಿಂದ ಇಂದಿನ ಪೀಳಿಗೆಗೂ ಈ ಹಾಡು ಆಲ್ ಟೈಮ್ ಫೆವರೇಟ್.

ಯಾವುದೇ ಸ್ಟೇಜ್ ಕಾರ್ಯಕ್ರಮವಿರಲಿ ಈ ಹಾಡನ್ನ ಹಾಡುವ ಮೂಲಕವೇ ಕಾರ್ಯಕ್ರಮವನ್ನ ಅಂತ್ಯವಾಗಿಸುವುದು. ಅಷ್ಟರ ಮಟ್ಟಿಗೆ 'ಕುಲದಲ್ಲಿ ಕೀಳ್ಯಾವುದೋ' ಹಾಡು ಫೇಮಸ್. ಇದೀಗ ಈ ಹಾಡನ್ನ ಮತ್ತೆ ಮರುಬಳಕೆ ಮಾಡಲಾಗುತ್ತಿದ್ದು, ಆಧುನಿಕ ಸಂಗೀತ ಶೈಲಿಯಲ್ಲಿ ಮೂಡಲಿದೆಯಂತೆ.['ಸತ್ಯ ಹರಿಶ್ಚಂದ್ರ' ಶರಣ್ ಗೆ ನಾಯಕಿ ಪಡುಕೋಣೆ, ಯಾರು ದೀಪಿಕಾನಾ?]

Satya Harishchandra Evergreen Kuladalli Song Reused

ಹೌದು, ಶರಣ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರದಲ್ಲಿ ಡಾ ರಾಜ್ ಕುಮಾರ್ ಅವರ ಎವರ್ ಗ್ರೀನ್ ಹಾಡನ್ನ ಮರುಬಳಕೆ ಮಾಡಲಾಗಿದೆ. ಈ ಹಾಡಿಗೆ ಮಾರ್ಡನ್ ಮ್ಯೂಸಿಕ್ (ರೀಮಿಕ್ಸ್ ಅಲ್ಲ) ಟಚ್ ಕೊಟ್ಟು ಕಂಪೋಸ್ ಮಾಡಲಾಗಿದೆಯಂತೆ.

ಮೇಲುಕೋಟೆಯಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದು, ಈಗಾಗಲೇ ಸಾಂಗ್ ಶೂಟಿಂಗ್ ಕೂಡ ಮುಗಿಸಿದ್ದಾರಂತೆ. ಸುಮಾರು 300 ಡ್ಯಾನ್ಸರ್ ಗಳನ್ನ ಹಾಡಿನಲ್ಲಿ ಬಳಸಲಾಗಿದೆ. ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.['ಸತ್ಯ ಹರಿಶ್ಚಂದ್ರ'ನ ಅವತಾರ ತಾಳಿದ ಕಾಮಿಡಿ ಕಿಂಗ್ ಶರಣ್ ]

Satya Harishchandra Evergreen Kuladalli Song Reused

ಇನ್ನೂ ಶರಣ್ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಸಂಚಿತಾ ಪಡುಕೊಣೆ, ಭಾವನ ರಾವ್, ಸಂಚಾರಿ ವಿಜಯ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನ ಕೆ.ಮಂಜು ನಿರ್ಮಾಣ ಮಾಡುತ್ತಿದ್ದು, ದಯಾಳ ಪದ್ಮನಾಭನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಟ್ನಲ್ಲಿ, ಟೈಟಲ್ ಹಳೆಯದಾದರೂ ಸಿನಿಮಾ ಮಾತ್ರ ಪಕ್ಕಾ ಕಾಮಿಡಿ ಎಂಟರ್ ಟೈನಿಂಗ್ ಆಗಿ ಮೂಡಿಬರಲಿದೆಯಂತೆ. ಬಹುತೇಕ ಟಾಕಿ ಪೋಷನ್ ಮುಗಿಸಿರುವ ಚಿತ್ರತಂಡ ಉಳಿದ ಚಿತ್ರೀಕರಣಕ್ಕಾಗಿ ಆದಷ್ಟೂ ಬೇಗ ವಿದೇಶಕ್ಕೆ ಹಾರಲಿದೆಯಂತೆ.

English summary
The legendary song Kuladalli Keelyavudh from the movie Satya Harishchandra (1965) is even famous to this day. This epic song has been revisited with a touch of modern sound in the upcoming film with the same title "Satya Harishchandra".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada