»   » ವರದಕ್ಷಿಣೆ ವಿರುದ್ಧ ಸತ್ಯಮೇವ ಜಯತೇ ಹೋರಾಟ

ವರದಕ್ಷಿಣೆ ವಿರುದ್ಧ ಸತ್ಯಮೇವ ಜಯತೇ ಹೋರಾಟ

Posted By:
Subscribe to Filmibeat Kannada
ಅಮೀರ್ ಖಾನ್ ಸತ್ಯಮೇವ ಜಯತೆ ಕಿರುತೆರೆ ಕಾರ್ಯಕ್ರಮದ ಮೂಲಕ ಮನೆಗೇ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರತಿ ಕಾರ್ಯಕ್ರಮದಲ್ಲಿ ಹೊಸ ವಿಷಯ, ಅದರಲ್ಲೂ ಸಾಮಾಜಿಕ ಪಿಡುಗಿನ ಬಗ್ಗೆ ಜನರೊಂದಿಗೆ ಚರ್ಚಿಸುತ್ತಿರುವ ಅಮೀರ್, ಮುಂದಿನ ಸಂಚಿಕೆಯಲ್ಲಿ ನಮ್ಮ ಭಾರತವನ್ನು ಬೃಹದಾಕಾರವಾಗಿ ಕಾಡುತ್ತಿರುವ ವರದಕ್ಷಿಣೆಯ ಬಗ್ಗೆ ಚರ್ಚಿಸಲಿದ್ದಾರೆ. ಅಪ್ರಾಪ್ತ ಲೈಂಗಿಕತೆ ನಂತರ ಈ ವಿಷಯದ ಮೇಲೆ ಅಮೀರ್ ಬೆಳಕು ಬೀರಲಿದ್ದಾರೆ.

ಸುದ್ದಿಮೂಲಗಳಿಂದ ಡೈಲಿ ಭಾಸ್ಕರ್ ಗೆ ಬಂದ ಮಾಹಿತಿಯಂತೆ ಸತ್ಯಮೇವ ಜಯತೇ ಮುಂದಿನ ಸಂಚಿಕೆಯ ವಿಷಯ ಇದಾಗಿದೆ. ಭಾರತ ಸಾಕಷ್ಟು ಬೆಳೆದರೂ ಇನ್ನೂ ಇಲ್ಲಿ ಬೇರುಬಿಟ್ಟಿರುವ ಈ ಪಿಡುಗಿನ ವಿರುದ್ಧ ಅಮೀರ್ ಯಾವ ರೀತಿ ಧ್ವನಿ ಎತ್ತಲಿದ್ದಾರೆ ಹಾಗೂ ಜನರನ್ನು ಹೇಗೆ ಚರ್ಚಗೆ ಗುರಿಪಡಿಸಲಿದ್ದಾರೆ ಎಂಬುದೀಗ ತೀವ್ರ ಕುತೂಹಲ ಕೆರಳಿಸಿದೆ. ಅಮೀರ್ ಖಾನ್ ಶೋ ಸತ್ಯಮೇವ ಜಯತೇ, ಸಂಚಿಕೆಯಿಂದ ಸಂಚಿಕೆಗೆ ಬಹಳಷ್ಟು ಜನರನ್ನು ಆಕರ್ಷಿಸುತ್ತಿರುವುದಂತೂ ಸತ್ಯ.

ಮುಂದಿನ ದಿನಗಳಲ್ಲಿ ಜನಮನದ ಸಮಸ್ಯೆಗೆ ವೇದಿಕೆ ಹಾಗೂ ಕನ್ನಡಿಯಾಗಿ ಬದಲಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ. ಭಾರತದಲ್ಲಿರುವ ಸಮಸ್ಯೆಗಳು ಹಾಗೂ ಪಿಡುಗುಗಳಿಗೆ ಲೆಕ್ಕವೇ ಇಲ್ಲ ಬಿಡಿ. ಆದರೆ ಈ ಕಾರ್ಯಕ್ರಮದ ಮೂಲಕ, ಅದರಲ್ಲೂ ಇಲ್ಲಿದ್ದೇ ಅಷ್ಟು ಎತ್ತರಕ್ಕೆ ಬೆಳೆದ ಅಮೀರ್ ಮೂಲಕ ದೇಶದ ಸಮಸ್ಯೆಯ ಸ್ವಲ್ಪ ಭಾಗವಾದರೂ ಅಳಿದರೆ ಅದೇ ಸತ್ಯಮೇವ ಜಯತೇಯ ದೊಡ್ಡ ಸಾಧನೆ ಎನ್ನಬಹುದು. ಏನಾಗುತ್ತೋ ಕಾದು ನೋಡಬೇಕಷ್ಟೇ! (ಒನ್ ಇಂಡಿಯಾ ಕನ್ನಡ)

English summary
Aamir Khan Satyamev Jayate to come up with lavish Indian wedding, dowry system as the next topic of debate and discussion.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada