For Quick Alerts
  ALLOW NOTIFICATIONS  
  For Daily Alerts

  ಸವಿ ಮಾದಪ್ಪ ಆತ್ಮಹತ್ಯೆ: ಕಿರುತೆರೆ ನಟನ ವಿರುದ್ಧ ದೂರು ನೀಡಿದ ಪೋಷಕರು

  |

  ಕನ್ನಡದ ನಟಿ ಸವಿ ಮಾದಪ್ಪ (ಸೌಜನ್ಯಾ) ಇಂದು (ಸೆಪ್ಟೆಂಬರ್ 30) ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡಬೆಳೆ ಎಂಬಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ.

  ಮೂಲತಃ ಕೊಡಗಿನರಾಗಿದ್ದ ಸವಿ ಮಾದಪ್ಪ 'ಚೌಕಟ್ಟು', 'ಫನ್' ಹೆಸರಿನ ಸಿನಿಮಾಗಳ ಜೊತೆಗೆ ಕಿರುತೆರೆಯಲ್ಲಿಯೂ ನಟಿಸಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆಗೆ ವಾಸವಿದ್ದ ನಟಿ ಸವಿ ಮಾದಪ್ಪ, ಇಂದು ಬೆಳಿಗ್ಗೆ ಬಾಯ್‌ಫ್ರೆಂಡ್ ತಿಂಡಿ ತರಲು ಹೊರಗೆ ಹೋದಾಗ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  ನಟಿ ಸವಿ ಮಾದಪ್ಪ ಮೃತದೇಹವನ್ನು ನಗರದ ಆರ್‌ಆರ್‌ ನಗರ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸವಿ ಮಾದಪ್ಪರ ಪೋಷಕರು ಕೊಡಗಿನಿಂದ ಬೆಂಗಳೂರಿಗೆ ಬರಲು ತಡವಾದ ಕಾರಣ ಮರಣೋತ್ತರ ಪರೀಕ್ಷೆಯನ್ನು ನಾಳೆ ನಡೆಸಲಾಗುತ್ತದೆ.

  ಪೋಷಕರು ಇಂದು ಸಂಜೆ ವೇಳೆಗೆ ಬೆಂಗಳೂರಿಗೆ ತಲುಪಿ ಕುಂಬಳಗೋಡ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಸವಿ ಮಾದಪ್ಪರ ಬಾಯ್‌ಫ್ರೆಂಡ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಆರ್‌ಆರ್‌ ನಗರ ಆಸ್ಪತ್ರೆ ಬಳಿ ನಟಿಯ ಸಂಬಂಧಿಗಳು ಜಮಾಯಿಸಿದ್ದು ಆಕ್ರಂದನ ಮುಗಿಲು ಮುಟ್ಟಿದೆ. ನಟಿಯ ಮೃತ ದೇಹವನ್ನು ನೋಡಿದ ತಾಯಿ ಅಲ್ಲೇ ಅಸ್ವಸ್ಥರಾಗಿ ಬಿದ್ದಿದ್ದಾರೆ. ಅವರಿಗೆ ಉಪಚಾರ ಮಾಡಲಾಗಿದೆ. ಇಂದು ಸಮಯ ಹೆಚ್ಚಾದ ಕಾರಣ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ನಾಳೆ (ಅಕ್ಟೋಬರ್ 01) ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರ ಸುಪರ್ದಿಗೆ ಒಪ್ಪಿಸಲಾಗುವುದು.

  ತೆಲುಗು ಹಾಗೂ ಕನ್ನಡದಲ್ಲಿ ನಟಿಸುತ್ತಿರುವ ಕಿರುತೆರೆ ನಟನೊಬ್ಬ ಸವಿ ಮಾದಪ್ಪರನ್ನು ಹಲವು ವರ್ಷಗಳಿಂದ ಮದುವೆ ಆಗುವಂತೆ ಪೀಡಿಸುತ್ತಿದ್ದ, ಆತನೇ ಇಂದು ಮನೆ ಬಳಿ ಬಂದು ಮದುವೆ ಆಗುವಂತೆ ಪೀಡಿಸಿರುವ ಸಾಧ್ಯತೆ ಇದೆ. ಹಾಗಾಗಿಯೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸವಿ ಮಾದಪ್ಪ ಪೋಷಕರು ಆರೋಪಿಸಿದ್ದಾರೆ.

  ಮಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಸವಿ ಮಾದಪ್ಪ ಪೋಷಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.

  ಇಂದು ತಡವಾದ ಕಾರಣ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ನಾಳೆ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರ ಸುಪರ್ದಿಗೆ ಒಪ್ಪಿಸಲಾಗುವುದು.

  ಮೃತ ಸವಿ ಮಾದಪ್ಪ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿದ್ದು ಡೆತ್‌ನೋಟ್‌ನಲ್ಲಿ 'ನನ್ನ ಸಾವಿಗೆ ನಾನೇ ಕಾರಣ' ಎಂದು ಸವಿ ಮಾದಪ್ಪ ಬರೆದುಕೊಂಡಿದ್ದಾರೆ.

  ''ನನ್ನ ಗೆಲುವಿಗೆ ಸಹಾಯ‌ ಮಾಡಿ ಎಲ್ಲರಿಗೂ ಧನ್ಯವಾದಗಳು. ಜೀವನದಲ್ಲಿ ತುಂಬಾನೆ ಜವಬ್ದಾರಿ ಇತ್ತು. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನೇ ಕಾರಣ. ನಾನು ಮಾತು ಕೊಟ್ಟ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಐ ಲವ್ ಯು ಪಪ್ಪ, ಅಮ್ಮ ನಾನು ಮನೆಗೆ ಬರುತ್ತೇನೆ ಎಂದು ಹೇಳಿದ್ದೆ. ಆದರೆ ಈ ಸ್ಥಿತಿಯಲ್ಲಿ ಮನೆಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ನನಗೆ ಮುಂದೆ ಒಳ್ಳೆಯ ಭವಿಷ್ಯ ಇತ್ತು ಅನ್ನೋದು ಗೊತ್ತಿದೆ, ಆದರೂ ಪರವಾಗಿಲ್ಲ. ನನ್ನ‌ ಸಾವಿನ ಬಗ್ಗೆ ಹಾಗೂ ಬರೆದಿರುವ ಪತ್ರವನ್ನ ಯಾವುದೇ ಮಾಧ್ಯಮಗಳಿಗೂ ಕೊಡಬೇಡಿ'' ಎಂದು ನಟಿ ಸವಿ ಮಾದಪ್ಪ ಮನವಿ ಮಾಡಿದ್ದಾರೆ.

  ತೆಲುಗು ಚಿತ್ರರಂಗದ ಪೋಷಕ ನಟಿ ಅನುರಾಧ ಎಂಬುವರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಪ್ರಕರಣವು ಇಂದೇ ಬೆಳಕಿಗೆ ಬಂದಿದೆ. ಅನುರಾಧಾ ಸಾವಿಗೆ ಆಕೆಯ ಬಾಯ್‌ಫ್ರೆಂಡ್‌ ಕಾರಣ ಎನ್ನಲಾಗಿತ್ತು, ಅನುರಾಧ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅನುರಾಧಾರ ಪ್ರಿಯಕರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅನುರಾಧಾ ಹಾಗೂ ಆಕೆಯ ಬಾಯ್‌ಫ್ರೆಂಡ್ ಕಿರಣ್ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾತುಕತೆ ಸಹ ಆಗಿತ್ತು. ಆದರೆ ಈ ನಡುವೆ ಭಿನ್ನಾಭಿಪ್ರಾಯ ತೆಗೆದ ಕಿರಣ್, ತಾನು ಅನುರಾಧಾಳನ್ನು ಮದುವೆ ಆಗುವುದಿಲ್ಲ ಎಂದಿದ್ದಾರೆ. ಹಾಗಾಗಿ ಖಿನ್ನತೆಗೆ ಒಳಗಾದ ಅನುರಾಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  English summary
  Actress Savi Madappa commit suicide. Her parents gave complaint against a tv actor. Parents said actor forcing Savi Madappa to marry him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X