»   » ಚಿತ್ರಕಥೆ ರಚಿಸುವುದು ಹೇಗೆ? ದಾರಿ ಇಲ್ಲಿದೆ ನೋಡಿ

ಚಿತ್ರಕಥೆ ರಚಿಸುವುದು ಹೇಗೆ? ದಾರಿ ಇಲ್ಲಿದೆ ನೋಡಿ

Posted By:
Subscribe to Filmibeat Kannada

ಎಷ್ಟೋ ಮಂದಿ ಯುವಕ, ಯವತಿಯರು ಚಿತ್ರಕಥೆ ಬರೆಯುವುದು ಹೇಗೆ ಎಂದು ಕನಸು ಕಾಣುತ್ತಿರುತ್ತಾರೆ. ಆದರೆ ಅಂತಹವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವಂತಹ ಸಂಸ್ಥೆಗಳು ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತವೆ. ಅಂತಹ ಆಸಕ್ತರಿಗಾಗಿ ಇಲ್ಲಿದೆ ನೋಡಿ ಒಂದು ಗೋಲ್ಡನ್ ಚಾನ್ಸ್.

ಯಾವುದೇ ಒಂದು ಚಿತ್ರದ ಜೀವಾಳ ಚಿತ್ರಕಥೆ. ಒಂದು ಚಿತ್ರದ ಯಶಸ್ಸಿನ ಸೂತ್ರ ಅಡಗಿರುವುದು ಸ್ಕ್ರೀನ್ ಪ್ಲೇನಲ್ಲೇ ಎಂದರೆ ಅಚ್ಚರಿಯಾಗುತ್ತದೆ. ಯಾವುದೇ ಚಿತ್ರದ ಹಣೆಬರಹ ಬರೆಯುವುದೂ ಸ್ಕ್ರಿಪ್ಟ್ ಎಂದರೆ ತಪ್ಪಾಗಲಾರದು. ಚಿತ್ರಕಥೆಯ ಮಹತ್ವ ಗೊತ್ತಿದ್ದರೆ ಗೆಲುವು ಸುಲಭ. [ಉಳಿದವರು ಕಂಡಂತೆ ಚಿತ್ರ ಒಮ್ಮೆ ಓದಿ]

Script writing training

ಈ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ವಾರಾಂತ್ಯ ಚಿತ್ರಕಥಾ ತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತಿಯಿರುವ ಎಲ್ಲಾ ವಯೋಮಾನದವರೂ ಅರ್ಜಿ ಸಲ್ಲಿಸಬಹುದು. ಒಂಬತ್ತು ದಿನಗಳ ಕಾಲ ಆಯ್ದ ವಿಷಯ ಸಂಬಂಧಿ ಚಲನಚಿತ್ರ ಪ್ರದರ್ಶನ ಸೇರಿದಂತೆ 100 ಗಂಟೆಗಳ ಅವಧಿಯದಾಗಿರುತ್ತದೆ.

ಹೆಸರಾಂತ ಚಿತ್ರ ನಿರ್ದೇಶಕ, ಚಿತ್ರಕಥಾ ಲೇಖಕರು, ಸಾಹಿತಿಗಳು ತರಬೇತಿ ತರಗತಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಕರ್ನಾಟಕ ಚಲನಚಿತ್ರ ಅಕಾಡೆಮಿ ಕಾರ್ಯಾಲಯ, ಬಾದಾಮಿ ಹೌಸ್ ಕಟ್ಟಡ, ಬೃಹತ್ ಬೆಂಗಳೂರು ಮಹಾರನಗರ ಪಾಲಿಕೆ ಕಚೇರಿ ಎದುರು, ಎನ್.ಆರ್.ವೃತ್ತ, ಬೆಂಗಳೂರು.

ಜೂ.26, 2014 ರಿಂದ ಜು.5, 2014ರವರೆಗೆ ಕಚೇರಿ ವೇಳೆಯಲ್ಲಿ ನಗದು ರು.50 ಸಲ್ಲಿಸಿ ನಿಗದಿತ ಅರ್ಜಿಗಳನ್ನು ಪಡೆಯಬಹುದು. ತುಂಬಿದ ಅರ್ಜಿಗಳನ್ನು ಜು.10, 2014ರೊಳಗೆ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬಹುದಾಗಿದೆ. (ಒನ್ಇಂಡಿಯಾ ಕನ್ನಡ)

English summary
Karnataka Chalanachitra Academy invites application for a short term screenplay writing training in Bangalore. The course starts from in the month of July, 2014. Last date for submission for applications is 10th July, 2014. 
Please Wait while comments are loading...