For Quick Alerts
  ALLOW NOTIFICATIONS  
  For Daily Alerts

  Leelavathi: ಜಮೀನು ಮಾರಿ ಬಂದ ಹಣದಲ್ಲಿ ಆಸ್ಪತ್ರೆ ನಿರ್ಮಿಸುತ್ತಿರುವ ನಟಿ ಲೀಲಾವತಿ

  |

  ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಚಿತ್ರರಂಗದಿಂದ ದೂರಾಗಿ ಬಹು ಕಾಲವಾಯಿತು. ಚಿತ್ರರಂಗದಿಂದ ಎಲ್ಲ ನಂಟುಗಳನ್ನೂ ಕಳೆದುಕೊಂಡು ನೆಲಮಂಗಳದ ಬಳಿಕ ಗ್ರಾಮವೊಂದರಲ್ಲಿ ಕೃಷಿ ಮಾಡಿಕೊಂಡು ಮಗನೊಟ್ಟಿಗೆ ವೃದ್ಧಾಪ್ಯ ದೂಡುತ್ತಿದ್ದಾರೆ.

  ಹಳ್ಳಿಯಲ್ಲಿ ಕೃಷಿ ಮಾಡುತ್ತಿದ್ದರೂ ಸಹ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ತಾಯಿ-ಮಗ ಈಗ ತಾವಿರುವ ಹಳ್ಳಿಯ ಜನರಿಗಾಗಿ ದೊಡ್ಡ ಸೇವೆಯೊಂದನ್ನು ಮಾಡಲು ಮುಂದಾಗಿದ್ದಾರೆ.

  ತಮ್ಮದೇ ಸಿನಿಮಾದ ಟ್ರೈಲರ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿನೋದ್ ಪ್ರಭಾಕರ್: ಕಾರಣ ಅಪ್ಪು!ತಮ್ಮದೇ ಸಿನಿಮಾದ ಟ್ರೈಲರ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿನೋದ್ ಪ್ರಭಾಕರ್: ಕಾರಣ ಅಪ್ಪು!

  ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ನೆಲಮಂಗಲದ ಬಳಿ ಸೋಲದೇವನಹಳ್ಳಿಯಲ್ಲಿ ವಾಸವಿದ್ದು ಗ್ರಾಮದ ಜನರಿಗಾಗಿ ಸ್ವಂತ ಹಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಮುಂದಾಗಿದ್ದಾರೆ. ಜಮೀನು ಮಾರಿ ಬಂದ ಹಣದಲ್ಲಿ ಈ ಸಮಾಜ ಸೇವಾ ಕಾರ್ಯ ಮಾಡಲು ಮುಂದಾಗಿದ್ದಾರೆ ಲೀಲಾವತಿ ಹಾಗೂ ಅವರ ಪುತ್ರ.

  ಈ ಮೊದಲು ಇದೇ ಸೋಲದೇವನಹಳ್ಳಿ ಗ್ರಾಮದಲ್ಲಿ ಲೀಲಾವತಿ ಮತ್ತು ಪುತ್ರ ವಿನೋದ್ ಒಟ್ಟಿಗೆ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದ್ದರು. ಆ ಆರೋಗ್ಯ ಕೇಂದ್ರಕ್ಕೆ ಒಬ್ಬ ವೈದ್ಯರನ್ನು ಕೊಡಿ ಎಂದು ಸರಕಾರಕ್ಕೆ ಹಲವು ಮನವಿಗಳನ್ನೂ ಸಲ್ಲಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಕೊನೆಗೆ ವೈದ್ಯರಿಗೂ ತಾವೇ ಸಂಬಳ ಕೊಟ್ಟೂ, ಆರೋಗ್ಯ ಕೇಂದ್ರವನ್ನು ಮುನ್ನಡೆಸಿದ್ದರು. ಇದೀಗ ತಮ್ಮ ಸ್ವಂತ ಹಣದಲ್ಲಿ ಅಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಹೊರಟಿದ್ದಾರೆ.

  ಹೊಸ ಆಸ್ಪತ್ರೆ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಕೆಲವು ದಿನಗಳ ಹಿಂದಷ್ಟೆ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕಾರ್ಯಕ್ರಮಕ್ಕೆ ನೆಲಮಂಗಲ ಶಾಸಕ ಕೆ ಶ್ರೀನಿವಾಸ ಮೂರ್ತಿ ಆಗಮಿಸಿದ್ದರು. ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದ ಕಡೆಯಿಂದಲೂ ನೆರವು ಕೊಡಿಸುವುದಾಗಿ ಅವರು ಭರವಸೆ ನೀಡಿದರು. ಅನಾರೋಗ್ಯದ ಕಾರಣದಿಂದಾಗಿ ಲೀಲಾವತಿ ಅವರು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

  ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಲೀಲಾವತಿಯವರು ಬೇಡಿಕೆಯ ನಟಿಯಾಗಿದ್ದ ಚೆನ್ನೈ ಬಳಿ ಖರೀದಿಸಿದ್ದ ಜಮೀನನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಆಸ್ಪತ್ರೆ ನಿರ್ಮಾಣವನ್ನು ಮಾಡಲಾಗುತ್ತಿದೆ.

  ನಟ ವಿನೋದ್ ರಾಜ್‌ಕುಮಾರ್ ಹಾಗೂ ಲೀಲಾವತಿ ಅವರುಗಳಿಗೆ ಸಮಾಜ ಸೇವೆ ಹೊಸದೇನೂ ಅಲ್ಲ. ಕೋವಿಡ್ ಸಮಯದಲ್ಲಿ ಸೋಲದೇವನಹಳ್ಳಿಯ ಜನರಿಗೆ ಸಹಾಯ ಮಾಡಿದ್ದರು. ಸಿನಿಮಾ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡಿದ್ದರು. ನಟಿ ವಿಜಯಲಕ್ಷ್ಮಿ ಸಹ ತಮ್ಮ ವಿಡಿಯೋ ಒಂದರಲ್ಲಿ ಮಾತನಾಡುತ್ತಾ, 'ಕಷ್ಟದಲ್ಲಿದ್ದಾಗ ತಮಗೆ ವಿನೋದ್ ರಾಜ್ ಸಹಾಯ ಮಾಡಿದ್ದಾಗಿ ಹೇಳಿದ್ದರು.

  ಲೀಲಾವತಿ ಅವರಿಗೆ ಸಾಕಷ್ಟು ವಯಸ್ಸಾಗಿದ್ದು ಕೆಲವು ತಿಂಗಳ ಹಿಂದೆ ಮನೆಯಲ್ಲಿ ಜಾರಿ ಬಿದ್ದು ಅಸ್ವಸ್ಥರಾಗಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ವಿನೋದ್ ರಾಜ್‌ ಅವರು 'ಮುಖವಾಡ' ಹೆಸರಿನ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಆದರೆ ಸಿನಿಮಾ ಸೆಟ್ಟೇರಿದ ಮಾಹಿತಿ ಇಲ್ಲ.

  English summary
  Senior actress Leelavathi and her son Vinod Raj building a hospital for their Soladevanahalli village people for free.
  Wednesday, March 23, 2022, 17:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X