For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಬಿಗ್ ಬಾಸ್' ಸ್ಪರ್ಧಿ ಆಶಿತಾ ಚಂದ್ರಪ್ಪ

  |

  ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ ಆಶಿತಾ ಚಂದ್ರಪ್ಪ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ನೀಲಿ, ಜೊತೆ ಜೊತೆಯಲಿ, ರಾಧ ರಮಣ ಅಂತಹ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ನಟಿ ಇಂದು (ಮಾರ್ಚ್ 31) ಸಪ್ತಪದಿ ತುಳಿದಿದ್ದಾರೆ.

  ರೋಹನ್ ರಾಘವೇಂದ್ರ ಎನ್ನುವವರ ಜೊತೆ ವೈವಾಹಿಕ ಬದುಕು ಆರಂಭಿಸಿರುವ ನಟಿ ಆಶಿತಾ ಚಂದ್ರಪ್ಪಗೆ ಸ್ನೇಹಿತರು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

  ನಿಜಜೀವನದಲ್ಲೂ ಒಂದಾಗುತ್ತಿದೆ 'ಲಕ್ಷ್ಮಿ ಬಾರಮ್ಮ'ದ ಚಂದನ್-ಕವಿತಾ ಜೋಡಿ

  ಕೊರೊನಾ ವೈರಸ್ ಭೀತಿ ಕಾರಣದಿಂದ ಹೆಚ್ಚು ಜನರಿಗೆ ಮದುವೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಹೊಸ ಜೀವನ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

  ಆಶಿತಾ ಚಂದ್ರಪ್ಪ ಮದುವೆ ಆಗಿರುವ ರೋಹನ್ ರಾಘವೇಂದ್ರ ಅವರ ಕುರಿತು ಹೆಚ್ಚಾಗಿ ತಿಳಿದಿಲ್ಲ. ಇನ್ನು ಆಶಿತಾ ಅವರ ವಿವಾಹ ಕಾರ್ಯಕ್ರಮದಲ್ಲಿ ಕಿರುತೆರೆ ನಟ ಕಾರ್ತಿಕ್ ಜಯರಾಂ, ನಟಿ ತೇಜಸ್ವಿನಿ ಪ್ರಕಾಶ್, ಜಗನ್ನಾಥ್ ಚಂದ್ರಶೇಖರ್ ಸೇರಿದಂತೆ ಕೆಲವರು ಮಾತ್ರ ಪಾಲ್ಗೊಂಡಿದ್ದರು.

  ಆಶಿತಾ ಮತ್ತು ರೋಹನ್ ದಂಪತಿಗೆ ನಟ ಜೆಕೆ ಶುಭಕೋರಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಆಶಿತಾ ಜೊತೆಗಿನ ಫೋಟೋ ಹಂಚಿಕೊಂಡಿರುವ ಕಾರ್ತಿಕ್ ಜಯರಾಂ ''ನಿನ್ನ ದಾಂಪತ್ಯ ಬದುಕು ಸದಾ ಸಂತಸದಿಂದ ಕೂಡಿರಲಿ'' ಎಂದು ಹಾರೈಸಿದ್ದಾರೆ.

  ಕಿರುತೆರೆಯಲ್ಲಿ ಮಾತ್ರವಲ್ಲ ಸಿನಿಮಾರಂಗದಲ್ಲಿ ಆಶಿತಾ ಗುರುತಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪ್ರೀತಿಯಿಂದ ಅಣ್ಣ ಎಂದೇ ಕರೆಯುವ ಆಶಿತಾ ಡಿ ಬಾಸ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

  ಮದಕರಿ ಸಿನಿಮಾಗೂ ಮುಂಚೆ ಗೋಲ್ಡ್ ರಿಂಗ್ ಮೂಲಕ ತೆರೆಮೇಲೆ ಬರಲಿದ್ದಾರೆ ಡಿ ಬಾಸ್ | Filmibeat Kannada

  ಇನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡದ ಐದನೇ ಆವೃತ್ತಿಯಲ್ಲಿ ಆಶಿತಾ ಚಂದ್ರಪ್ಪ ಸ್ಪರ್ಧಿಯಾಗಿದ್ದರು.

  English summary
  Serial Actress Ashita Chandrappa Got married with rohan raghavednra Today at bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X