For Quick Alerts
  ALLOW NOTIFICATIONS  
  For Daily Alerts

  'ದಿ ವಿಲನ್' ಟೀಸರ್ ನೋಡಿ ಶಾನ್ವಿ ಮಾಡಿರುವ ಕಾಮೆಂಟ್ ಏನು.?

  By Harshitha
  |
  ದಿ ವಿಲನ್ ನೋಡಿ ಶಾನ್ವಿ ಶ್ರೀವಾಸ್ತವ ಹೇಳಿದ್ದೇನು..? | Filmibeat Kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ತೆರೆ ಹಂಚಿಕೊಂಡಿರುವ 'ದಿ ವಿಲನ್' ಟೀಸರ್ ಬಿಡುಗಡೆ ಆದ್ಮೇಲೆ ಅದ್ಯಾಕೋ ಅಭಿಮಾನಿಗಳ ಕಿತ್ತಾಟ ಶುರುವಾಗಿದೆ.

  ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಆರಂಭವಾಗಿದೆ. ಇದನ್ನೆಲ್ಲ ಗಮನಿಸಿದ ಕಿಚ್ಚ ಸುದೀಪ್ ಅನವಶ್ಯಕ ಚರ್ಚೆಗಳಿಗೆ ಆಸ್ಪದ ಕೊಡದಿರಲು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ''ಪ್ರೀತಿಸಿ, ಎಲ್ಲರಿಗೂ ಪ್ರೀತಿ ಕೊಟ್ಟು 'ದಿ ವಿಲನ್' ಚಿತ್ರಕ್ಕೆ ಸಪೋರ್ಟ್ ಮಾಡಿ'' ಎಂದು ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ಈ ಎಲ್ಲದರ ನಡುವೆ ನಟಿ ಶಾನ್ವಿ ಶ್ರೀವಾಸ್ತವ 'ದಿ ವಿಲನ್' ಚಿತ್ರದ ಟೀಸರ್ ನೋಡಿ ಟ್ವೀಟ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ ಓದಿರಿ...

  ಶಾನ್ವಿ ಮಾಡಿರುವ ಟ್ವೀಟ್ ಏನು.?

  ''ಕಿಚ್ಚ ಸುದೀಪ್ ಹಾಗೂ ಶಿವಣ್ಣ ರವರನ್ನ 'ವಿಲನ್' ಪಾತ್ರದಲ್ಲಿ ಹೆಚ್ಚು ಇಷ್ಟ ಪಡುವವಳು ನಾನೊಬ್ಬಳೇನಾ.? 'ದಿ ವಿಲನ್' ಚಿತ್ರದಲ್ಲಿ ಒಬ್ಬರದ್ದು ಕಂಪ್ಲೀಟ್ ನೆಗೆಟಿವ್, ಇನ್ನೊಬ್ಬರದ್ದು ಪಾಸಿಟಿವ್-ನೆಗೆಟಿವ್. ಹೀಗಾಗಿ ಈ ಸಿನಿಮಾ ನಾನು ನೋಡಲು ಪರ್ಫೆಕ್ಟ್ ಅನ್ಸುತ್ತೆ. ಇದರಲ್ಲಿ ಯಾರಿಗೂ ಬೇಸರ ಮಾಡುವ ಉದ್ದೇಶ ಇಲ್ಲ. ಟೀಸರ್ ಗಳು ಚೆನ್ನಾಗಿವೆ'' ಎಂದು ಶಾನ್ವಿ ಶ್ರೀವಾಸ್ತವ ಟ್ವೀಟ್ ಮಾಡಿದ್ದಾರೆ.

  ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್

  ಧನ್ಯವಾದ ತಿಳಿಸಿರುವ ಸುದೀಪ್

  ಶಾನ್ವಿ ಶ್ರೀವಾಸ್ತವ ಮಾಡಿರುವ ಟ್ವೀಟ್ ಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ.

  ಧೂಳೆಬ್ಬಿಸಿದ 'ದಿ ವಿಲನ್' ಟೀಸರ್

  ಧೂಳೆಬ್ಬಿಸಿದ 'ದಿ ವಿಲನ್' ಟೀಸರ್

  ಮೊನ್ನೆಯಷ್ಟೇ ಬಿಡುಗಡೆ ಆದ 'ದಿ ವಿಲನ್' ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಕಿಚ್ಚ ಸುದೀಪ್ ರವರ ಟೀಸರ್ ಗೆ ಯೂಟ್ಯೂಬ್ ನಲ್ಲಿ 25 ಲಕ್ಷಕ್ಕೂ ಹೆಚ್ಚು ವ್ಯೂಸ್ ಲಭಿಸಿದೆ.

  ಟ್ರೆಂಡಿಂಗ್ ನಲ್ಲಿದೆ ಶಿವಣ್ಣ ಟೀಸರ್

  ಟ್ರೆಂಡಿಂಗ್ ನಲ್ಲಿದೆ ಶಿವಣ್ಣ ಟೀಸರ್

  ಇನ್ನೂ 'ದಿ ವಿಲನ್' ಚಿತ್ರದ ಶಿವಣ್ಣ ರವರ ಟೀಸರ್ ಯೂಟ್ಯೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ. ಇಲ್ಲಿಯವರೆಗೂ ಶಿವಣ್ಣ ರವರ ಟೀಸರ್ ಗೆ 17 ಲಕ್ಷಕ್ಕೂ ಹೆಚ್ಚು ವ್ಯೂಸ್ ಲಭ್ಯವಾಗಿದೆ.

  English summary
  Kannada Actress Shanvi Srivastava has taken her twitter account to praise 'The Villain' teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X