For Quick Alerts
  ALLOW NOTIFICATIONS  
  For Daily Alerts

  Choo Mantar First Look : 'ಛೂ ಮಂತರ್' ಎಂದು ನಗಿಸಿ ಭಯ ಹುಟ್ಟಿಸಲು ಬರ್ತಿದ್ದಾರೆ ಶರಣ್- ಚಿಕ್ಕಣ್ಣ

  |

  'ಗುರುಶಿಷ್ಯರು' ಸಿನಿಮಾದಲ್ಲಿ ನಟಿಸಿದ್ದ ನಟ ಶರಣ್ ಈ 'ಛೂ ಮಂತರ್' ಎನ್ನುತ್ತಿದ್ದಾರೆ. ಚಿತ್ರದಲ್ಲಿ ಮೇಘನಾ ಗಾಂವ್ಕರ್ ಹಾಗೂ ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದಾರೆ. ಶರಣ್ ಜೊತೆ ಕಾಮಿಡಿ ಕಳಗುಳಿ ಇಡಲು ಮತ್ತೊಮ್ಮೆ ಚಿಕ್ಕಣ್ಣ ಕೈ ಜೋಡಿಸಿದ್ದಾರೆ. ಸದ್ಯ ಚಿತ್ರದ ಫಸ್ಟ್‌ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

  'ಕರ್ವ' ಎನ್ನುವ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದ ನವನೀತ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. 'ಛೂ ಮಂತರ್' ಚಿತ್ರಕ್ಕೆ ತರುಣ್ ಶಿವಪ್ಪ ಬಂಡವಾಳ ಹೂಡಿದ್ದು ಇದು ಅವರ ಬ್ಯಾನರ್‌ನ 5ನೇ ಸಿನಿಮಾ ಎನ್ನುವುದು ವಿಶೇಷ. ಈ ಹಾರರ್ ಕಾಮಿಡಿ ಚಿತ್ರವನ್ನು ಅನೂಪ್ ಕಟ್ಟುಕರನ್ ಸೆರೆ ಹಿಡಿದಿದ್ದಾರೆ. ವೆಂಕಿ ಸಂಕಲನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಹಾರರ್ ಜೊತೆಗೆ ಕಾಮಿಡಿ ಸೇರಿಸಿ ಬಹಳ ಮಜವಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಹಾಡುಗಳ ಚಿತ್ರೀಕರಣ ನಡೀತಿದೆ.

  ಒಂದು ಬೂತ ಬಂಗಲೆ. ಆ ಬಂಗಲೆಯಲ್ಲಿ ಎದುರಾಗುವ ಸಮಸ್ಯೆಗಳ ಸುತ್ತಾ ಈ ಸಿನಿಮಾ ಸುತ್ತುತ್ತದೆ ಎನ್ನುವುದು ಮೋಷನ್ ಪೋಸ್ಟರ್‌ನಲ್ಲಿ ಅರ್ಥವಾಗ್ತಿದೆ. ಚಿತ್ರದಲ್ಲಿ ಪ್ರಭು ಮುಂಡ್ಕರ್, ರಜಿನಿಕಾ ಭಾರಧ್ವಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಮೈಸೂರು, ಉತ್ತರಕಾಂಡ, ಬೆಂಗಳೂರು ಹಾಗೂ ಲಂಡನ್‌ನಲ್ಲಿ 'ಛೂ ಮಂತರ್' ಸಿನಿಮಾ ಚಿತ್ರೀಕರಣ ನಡೆದಿದೆ. ಶೀಘ್ರದಲ್ಲೇ ತೆರೆಗೆ ಬರಲಿದೆ.

  English summary
  Sharan and Chikkanna Starrer Choo Mantar First Look Motion Poster Released. Navaneeth’s Tarun Shivappa produced horror comedy movie, Choo Mantar Releasing Soon. know more.
  Tuesday, January 3, 2023, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X