For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 21ಕ್ಕೆ ಶರಣ್-ತರುಣ್ ಹೊಸ ಸಿನಿಮಾದ ಟೈಟಲ್ ಘೋಷಣೆ

  |

  ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಅವತಾರ್ ಪುರುಷ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿರುವ ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆಕಾಣಬಹುದು.

  ಶರಣ್ ಅಭಿನಯದ ಹೊಸ ಚಿತ್ರ ಘೋಷಣೆ | Saran | Tarun Sudhir | Filmibeat kannada

  ಇದೀಗ, ಶರಣ್ ತಮ್ಮ ಸ್ವಂತ ಬ್ಯಾನರ್‌ನಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಜೊತೆ ಸೇರಿ ಶರಣ್ ಹೊಸ ಚಿತ್ರ ಆರಂಭಿಸುತ್ತಿದ್ದಾರೆ.

  ತರುಣ್ ಸುಧೀರ್ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಿಸಿದ ಶರಣ್ತರುಣ್ ಸುಧೀರ್ ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಿಸಿದ ಶರಣ್

  ಈ ಹಿಂದೆ ತರುಣ್ ಸುಧೀರ್ ಹುಟ್ಟುಹಬ್ಬದಂದು ಈ ಪ್ರಾಜೆಕ್ಟ್ ಘೋಷಣೆ ಮಾಡಿದ್ದರು. ಪ್ರೊಡಕ್ಷನ್ ನಂ 3 ಹೆಸರಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದ ಶರಣ್, ಪೋಸ್ಟರ್ ಮೇಲೆ ವಿಸಿಲ್ ಇಟ್ಟು ಕುತೂಹಲ ಮೂಡಿಸಿದ್ದರು. ಬಹುತೇಕ ಚಿತ್ರದ ಹೆಸರೇ ವಿಸಿಲ್ ಎನ್ನುವ ಚಿಹ್ನೆ ಎಂದು ಊಹಿಸಿದ್ದರು. ಆದ್ರೀಗ, ಸಿನಿಮಾದ ಟೈಟಲ್ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

  ''ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಸೇರಿ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದ ಟೈಟಲ್ ಡಿಸೆಂಬರ್ 21ರಂದು ಅನಾವರಣಗೊಳಿಸಲಾಗುವುದು'' ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

  ಅಂದ್ಹಾಗೆ, ಜಗದೀಶ್ ಹಂಪಿ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಸದ್ಯಕ್ಕೆ ಬೇರೆ ಯಾವುದೇ ಮಾಹಿತಿ ಇಲ್ಲ. ಕಲಾವಿದರು, ಶೂಟಿಂಗ್ ಸೇರಿದಂತೆ ಬೇರೆ ಯಾವುದೇ ವಿಷಯಗಳನ್ನು ಬಿಟ್ಟುಕೊಟ್ಟಿಲ್ಲ.

  ಮತ್ತೊಂದೆಡೆ ತರುಣ್ ಸುಧೀರ್ ರಾಬರ್ಟ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ದರ್ಶನ್-ವಿನೋದ್ ಪ್ರಭಾಕರ್ ನಟಿಸಿರುವ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಆಶಾ ಭಟ್ ನಾಯಕಿಯಾಗಿದ್ದಾರೆ.

  English summary
  The title of the new film, produced by Sharana's Production and Tarun Sudhir Creatives, will be unveiled on Dec 21.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X