For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲಿ ನಗು ಬೀರಲಿದೆ ಶರಣ್ 'Rambo 2'

  By Bharath Kumar
  |

  ಕಾಮಿಡಿ ಕಿಂಗ್ ಶರಣ್ ಮತ್ತು ಚಿಕ್ಕಣ್ಣ ಅಭಿನಯದ 'Rambo 2' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪಕ್ಕಾ ಕಾಮಿಡಿ ಎಂಟರ್ ಟೈನ್ಮೆಂಟ್ ಚಿತ್ರವನ್ನ ಕನ್ನಡ ಕಲಾಭಿಮಾನಿಗಳು ಎರಡು ಕೈಯಿಂದ ಅಪ್ಪಿಕೊಂಡಿದ್ದಾರೆ.

  ಇದೀಗ, ಶರಣ್ ಸಿನಿಮಾ ವಿದೇಶಕ್ಕೆ ಕಾಲಿಟ್ಟಿದೆ. ಜೂನ್ 2ನೇ ತಾರೀಖಿನಿಂದ ಯುಎಸ್ ಮತ್ತು ಅಟ್ಲಾಂಟಾ ದೇಶದಲ್ಲಿ 'Rambo 2' ರಿಲೀಸ್ ಆಗುತ್ತಿದೆ.

  ಅಟ್ಲಾಂಟಾದ ಡಿಜಿಮ್ಯಾಕ್ಸ್ ಚಿತ್ರಮಂದಿರದಲ್ಲಿ ಎರಡು ಶೋ ಪ್ರದರ್ಶನ ಕಾಣುತ್ತಿದ್ದು, ಯುಎಸ್ ಮತ್ತು ಆಸ್ಟ್ರೇಲಿಯಾದಲ್ಲೂ ಶರಣ್ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಮೂಲಕ ವಿದೇಶದಲ್ಲಿರುವ ಕನ್ನಡಿಗರು ಕೂಡ 'Rambo' ನೋಡಿ ಎಂಜಾಯ್ ಮಾಡಬಹುದು.

  Rambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿ Rambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿ

  ಈ ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ನಟ ಶರಣ್ ಮತ್ತು ನಿರ್ಮಾಪಕ ಅಟ್ಲಾಂಟಾ ನಾಗೇಂದ್ರ. ಹೀಗಾಗಿ, ವಿದೇಶದಲ್ಲಿ ಹೆಚ್ಚು ಸ್ಕ್ರೀನ್ ನಲ್ಲಿ ಸಿನಿಮಾ ಬಿಡುಗಡೆಯಾಗುವಂತೆ ನಾಗೇಂದ್ರ ಅವರೇ ನೋಡಿಕೊಂಡಿದ್ದಾರೆ.

  ಇನ್ನುಳಿದಂತೆ ಅನಿಲ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಆಶಿಕಾ ರಂಗನಾಥ್, ಚಿಕ್ಕಣ್ಣ, ರವಿಶಂಕರ್, ಬುಲೆಟ್ ಪ್ರಕಾಶ್, ತಬಲ ನಾಣಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇ 18 ರಂದು ತೆರೆಕಂಡಿದ್ದ 'rambo 2' ಯಶಸ್ವಿ ಮೂರನೇ ವಾರ ಪ್ರದರ್ಶನ ಕಾಣುತ್ತಿದೆ.

  English summary
  Atlanta Kannada Cinema ​invites you to watch Nagendra's hit comedy-thriller movie "Raambo2" this weekend (june 2) ​​at DigiMax Theaters (Old Navrang Theaters).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X