»   » ಪರದೇಶಕ್ಕೆ ಹಾರಿದ ಜಯ ಜಯ ಜಾಕೆಟ್ಟು ರ್‍ಯಾಂ ಬೋ

ಪರದೇಶಕ್ಕೆ ಹಾರಿದ ಜಯ ಜಯ ಜಾಕೆಟ್ಟು ರ್‍ಯಾಂ ಬೋ

Posted By:
Subscribe to Filmibeat Kannada
"ಜಯ ಜಯ ಜಾಕೆಟ್ಟು ಜಯನ ಗಂಡ ರಾಕೆಟ್ಟು.." ಎಂದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಶರಣ್ ಅಭಿನಯದ ಹಾಸ್ಯಪ್ರಧಾನ ಚಿತ್ರ ರ್‍ಯಾಂ ಬೋ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಚಿತ್ರ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾದ ರ್‍ಯಾಂ ಬೋ ಚಿತ್ರ ಪ್ರೇಕ್ಷಕರ ಮನಗೆದ್ದಿದೆ.

ಈಗ ಈ ಚಿತ್ರ ಯುಎಸ್ಎಯಲ್ಲಿ ಬಿಡುಗಡೆಯಾಗಿದೆ. ಸ್ಯಾನ್ ಜೋಸ್, ಕ್ಯಾಲಿಫೋರ್ನಿಯಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಸೀಯಾಟ್ಲ್, ಪೋರ್ಟ್‌ಲ್ಯಾಂಡ್, ಆಸ್ಟಿನ್, ಹೋಸ್ಟನ್, ಡಲ್ಲಾಸ್, ಅಟ್ಲಾಂಟಾ, ನ್ಯೂಜೆರ್ಸಿ, ಬೋಸ್ಟನ್, ನ್ಯೂಯಾರ್ಕ್, ಫ್ಲೋರಿಡಾ, ತಾಂಪಾ, ಅರಿಜೋನಾ ಹಾಗೂ ಚಿಕಾಗೋದಲ್ಲೂ ಬಿಡುಗಡೆಯಾಗಲಿದೆ.

ಲಡ್ಡು ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಎಂಎಸ್ ಶ್ರೀನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ಕತೆ, ಚಿತ್ರಕತೆ ಕೂಡ ನಿರ್ದೇಶಕರದ್ದೆ. ಚಿತ್ರದ ಟ್ರೇಲರ್ ಗಳಿಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್ ಆಗಿದೆ.

ಮಾಧುರಿ, ತಬಲಾ ನಾಣಿ, ರಂಗಾಯಣ ರಘು, ಸಾಧು ಕೋಕಿಲ, ಶ್ರುತಿ, ಉಮಾಶ್ರೀ, ಉಮೇಶ್, ಕಾಶಿ, ಧರ್ಮ, ಕುರಿಗಳು ಪ್ರತಾಪ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಬಜೆಟ್ ರು.4 ಕೋಟಿ ಎನ್ನಲಾಗಿದೆ.

ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಸೂಪರ್ 35 ಎಂಎಂ ಕ್ಯಾಮೆರಾ ಬಳಸಿ ಒಟ್ಟು 55 ದಿನಗಳ ಕಾಲ 47 ತಾಣಗಳಲ್ಲಿ ಚಿತ್ರೀಕರಣ ನಡೆಸಿರುವುದು. ಚಿತ್ರದ ಹಾಡಿಗಳೂ ಕ್ಯಾಚಿಯಾಗಿದ್ದು ಎಲ್ಲರನ್ನು ರಂಜಿಸುತ್ತಿದೆ. ರ್‍ಯಾಂಬೋ ಚಿತ್ರ ವಿಮರ್ಶೆ ಓದಿ.

ಇನ್ನೊಂದು ವಿಶೇಷ ಎಂದರೆ ಇದೊಂದು ತ್ರಿಡಿ ಚಿತ್ರ. ಆದರೆ ಈ ತ್ರಿಡಿ ಚಿತ್ರಕ್ಕೆ ತ್ರಿಡಿ ಕನ್ನಡಕ ಬೇಕಾಗಿಲ್ಲ. ಬರಿಗಣ್ಣಿನಿಂದಲೇ ನೋಡಬಹುದು. ಅದು ಹೇಗೆ ಅಂತೀರಾ. ನೀವೆಲ್ಲಾ ತಿಳಿದುಕೊಂಡಿರುವಂತೆ ಇದು ಕನ್ನಡಕ ಹಾಕಿಕೊಂಡು ನೋಡುವ ತ್ರಿಡಿ ಚಿತ್ರವಲ್ಲ. ಶರಣ್ ಅವರೇ ಹೇಳುವಂತೆ ತ್ರಿಡಿ ಎಂದರೆ 'ದಗಲ್ಬಾಜಿ, ದಗಾಕೋರ, ಡೌವ್ ರಾಜ'. ಇವೇ ಆ ಮೂರು ತ್ರಿ'ಡಿ'ಗಳು! (ಏಜೆನ್ಸೀಸ್)

English summary
Kannada films comedy actor Sharan's 100th film Rambo releases in USA. it will be released in Seattle, Portland, Austin, Houston, Dallas, Atlanta, New Jersey, Boston, New York, Florida, Tampa, Arizona and Chicago.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada