For Quick Alerts
  ALLOW NOTIFICATIONS  
  For Daily Alerts

  ನಾನು ಹುಟ್ಟಿ ಬೆಳೆದ ಊರು ಇದು ಹುಬ್ಬಳ್ಳಿ ಸ್ವರ್ಗಕ್ಕೆ ಸಮಾನ: ನಟ ಶರಣ್

  By ಹುಬ್ಬಳ್ಳಿ ಪ್ರತಿನಿಧಿ
  |

  ''ಇದು ನಾನು ಹುಟ್ಟಿ ಬೆಳದ ಊರು, ನನ್ನ ಚಿಕ್ಕ ವಯಸ್ಸಿನ್ನು ಕಳೆದ ಊರು ಇದು, ಹುಬ್ಬಳ್ಳಿ ನನಗೆ ಸ್ವರ್ಗಕ್ಕೆ ಸಮಾನ. ಹುಬ್ಬಳ್ಳಿ ಊಟ, ಇಲ್ಲಿನ ಮಾತನ್ನು ಕೇಳ್ತಿದ್ದರೆ ನನ್ನ ಮೈಯೆಲ್ಲ ರೋಮಾಂಚನವಾಗುತ್ತದೆಂದು'' ನಟ ಶರಣ್ ಗಂಡು ಮಟ್ಟಿನ ನಾಡು ಹುಬ್ಬಳ್ಳಿಯನ್ನು ಹಾಡಿ ಹೊಗಳಿದರು.

  ನಟ ಶರಣ್ ಅವರು ನಟನೆ ಮಾಡಿದ 'ಗುರು ಶಿಷ್ಯರು' ಚಿತ್ರದ ಟ್ರೈಲರ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ತಂದೆಯವರ ನಾಟಕ ಕಂಪನಿ ಇಲ್ಲಿಯೇ ಇತ್ತು. ರಂಗಭೂಮಿಯೇ ನನ್ನ ಜೀವ. ಇಷ್ಟೊಂದು ಹೆಸರು ಮಾಡಿದ್ದು ರಂಗಭೂಮಿಯಿಂದಲೆಂದು ನೆನೆದುಕೊಂಡರು.

  ಗುರು ಶಿಷ್ಯರು ಚಿತ್ರ ನಾನು ಇಷ್ಟ ಪಟ್ಟು ಮಾಡಿದ ಸಿನಿಮಾ ಇದು. ಹಳೆಯ ಆಟಗಳನ್ನು ನಾವು ಮರೆಯುತ್ತಿದ್ದೇವೆ. ಆ ಆಟಗಳು ಎಷ್ಟೊಂದು ಜೋಶ್ ತರುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಿದೆ. ಇದೆ ತಿಂಗಳು 23 ಕ್ಕೆ ಇಡೀ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಸಾಕಷ್ಟು ಜನರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂದರು.

  'ಗುರು ಶಿಷ್ಯರು' ಸಿನಿಮಾದಲ್ಲಿ ಗುರುವಾಗಿರುವ ನಿಮಗೆ ಗುರು ಯಾರು? ಎಂಬ ಪ್ರಶ್ನೆಗೆ ಉತ್ತರಿಸಿದ ಶರಣ್, ನಾನು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೀನಿ. ಆ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕರೆಲ್ಲರೂ ನನಗೆ ಗುರುಗಳೇ. ನಾನು ಕೆಲಸ ಕಲಿತು ಚಿತ್ರರಂಗಕ್ಕೆ ಬಂದವನಲ್ಲ. ನನಗೆ ಕೆಲಸ ಕೊಟ್ಟು ಕೆಲಸ ಕಲಿಸಿದರು ಹಾಗಾಗಿ ನಾನು ಈ ಚಿತ್ರರಂಗಕ್ಕೆ ಎಂದೇಂದೂ ಚಿರ ಋಣಿ'' ಎಂದರು ಶರಣ್. ಇನ್ನು ಶಿಷ್ಯರ ಜೊತೆ ಶರಣ್ ಅವರು ಹಾಡು ಹೇಳಿ ಸ್ಟೆಪ್ ಕೂಡ ಹಾಕಿ ಜನರನ್ನು ಮನರಂಜಿಸಿದರು.

  ನಟಿ ನಿಶ್ವಿಕಾ ಮಾತನಾಡಿ, ನನ್ನ ಪಾತ್ರ ಸೂಜಿ ಎಂಬ ಪಾತ್ರದಲ್ಲಿ ನಾನು ಅಭಿನಯಿಸಿದ್ದೇನೆ. ಈಗಾಗಲೇ ಚಿತ್ರದ ಹಾಡುಗಳು ಸಖತ್ ಸದ್ದು ಮಾಡುತ್ತಿದ್ದು, ಅದರಲ್ಲೂ ಆಣೆ ಮಾಡು ಹೇಳುತಿನಿ ಹಾಡು ಎಲ್ಲರ ಮನಸ್ಸಲ್ಲಿ ಉಳಿದಿದ್ದು ಸಂತಸ ತಂದಿದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದರು.

  ನಿನ್ನೆ ದಾವಣಗೆರೆಯಲ್ಲಿ 'ಗುರು ಶಿಷ್ಯರು' ಸಿನಿಮಾದ ಪ್ರಚಾರ ಕಾರ್ಯ ಮಾಡಲಾಗಿದೆ. ಖೋ-ಖೋ ಆಟದ ಕುರಿತ ಈ ಸಿನಿಮಾ ಇದೇ ತಿಂಗಳು 23 ರಂದು ತೆರೆಗೆ ಬರಲಿದೆ.

  English summary
  Sharan Starrer Guru Shishyaru movie promotion program held in Hubli today. Movie will releasing on Septermber 23.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X