»   » ಉಪೇಂದ್ರಗೆ ಆಕ್ಷನ್ ಕಟ್ ಹೇಳಲಿದ್ದಾರೆ 'ಮುಂಗಾರು ಮಳೆ' ನಿರ್ದೇಶಕ

ಉಪೇಂದ್ರಗೆ ಆಕ್ಷನ್ ಕಟ್ ಹೇಳಲಿದ್ದಾರೆ 'ಮುಂಗಾರು ಮಳೆ' ನಿರ್ದೇಶಕ

Posted By: Bharath kumar
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಬೇರೆ ಬೇರೆ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಕಥೆ ಉತ್ತಮವೆನಿಸಿದರೆ ಹೊಸ ನಿರ್ದೇಶಕರಿಗೂ ಕಾಲ್ ಶೀಟ್ ಕೊಡುತ್ತಾರೆ. ಇತ್ತೀಚೆಗೆ 'ಮಾಸ್ಟರ್ ಪೀಸ್' ಚಿತ್ರದ ನಿರ್ದೇಶಕ 'ಮಂಜು ಮಾಂಡವ್ಯ' ಅವರಿಗೆ ತಮ್ಮ ಮುಂದಿನ ಚಿತ್ರವನ್ನ ನಿರ್ದೇಶನ ಮಾಡುವ ಅವಕಾಶ ಕೊಟ್ಟಿದ್ದಾರೆ ಎನ್ನಲಾಗಿದೆ. ಅದರ ಬೆನ್ನಲ್ಲೆ ಈಗ ಮತ್ತೊಬ್ಬ ಸ್ಟಾರ್ ನಿರ್ದೇಶಕನಿಗೆ ತಮ್ಮ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜವಾಬ್ದಾರಿ ಕೊಟ್ಟಿದ್ದಾರೆ.

ಹೌದು, ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ 'ರಿಯಲ್ ಸ್ಟಾರ್' ಉಪೇಂದ್ರ ಅವರ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ. ಉಪ್ಪಿ ಅಭಿನಯಿಸಲಿರುವ ಮುಂದಿನ ಚಿತ್ರಕ್ಕೆ ಶಶಾಂಕ್ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. 'ಮುಂಗಾರು ಮಳೆ 2' ಚಿತ್ರದ ಯಶಸ್ಸಿನ ನಂತರ ಶಶಾಂಕ್ ಮುಂದಿನ ಚಿತ್ರ ಯಾವುದು ಅಂತ ಇದ್ದ ಕುತೂಹಲಕ್ಕೆ ಈ ಮೂಲಕ ಖುದ್ದು ಅವರೇ ಬ್ರೇಕ್ ಹಾಕಿದ್ದಾರೆ.[ಉಪೇಂದ್ರ ಅವರ 50ನೇ ಚಿತ್ರಕ್ಕೆ 'ಆಕ್ಷನ್-ಕಟ್' ಯಾರದ್ದು?]


ಮುಂದಿನ ವಾರ ಉಪೇಂದ್ರ ಹಾಗೂ ಸುದೀಪ್ ಅಭಿನಯದ 'ಮುಕುಂದು ಮುರಾರಿ' ಚಿತ್ರ ಬಿಡುಗಡೆಯಾಗಲಿದೆ. ಮತ್ತೊಂದೆಡೆ ಉಪೇಂದ್ರ ಹಾಗೂ ಪ್ರೇಮಾ ಅಭಿನಯದಲ್ಲಿ ಮೂಡಿಬರಲಿರುವ 'ಮತ್ತೆ ಹುಟ್ಟಿ ಬಾ ಉಪೇಂದ್ರ' ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದಾದ ಬಳಿಕ ಮತ್ತೆರಡು ಹೊಸ ಪ್ರಾಜೆಕ್ಟ್ ಗಳು ಉಪ್ಪಿಯ ಕೈಯಲಿದ್ದು, ಈಗ ಶಶಾಂಕ್ ಚಿತ್ರದಲ್ಲಿ ನಾಯಕನಾಗಲು ಉಪ್ಪಿ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ, ಆ ಸಿನಿಮಾ ಯಾವುದು ? ಯಾವಾಗ ಶುರುವಾಗುತ್ತೆ ಅಂತ ಮುಂದೆ ಓದಿ...


ರಿಯಲ್ ಸ್ಟಾರ್ ಗೆ ಶಶಾಂಕ್ 'ಆಕ್ಷನ್ ಕಟ್'

ಸೂಪರ್ ಸ್ಟಾರ್ ಉಪೇಂದ್ರಗೆ ಸ್ಟಾರ್ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಲಿದ್ದಾರೆ. ಇದೇ ಮೊದಲ ಬಾರಿಗೆ ಉಪೇಂದ್ರ ಜೊತೆ ಶಶಾಂಕ್ ಕೆಲಸ ಮಾಡಲಿದ್ದು, ನಿರೀಕ್ಷೆಗಳು ಬೆಟ್ಟದಷ್ಟು ಹುಟ್ಟಿಕೊಂಡಿವೆ. ಇದನ್ನ ಸ್ವತಃ ಶಶಾಂಕ್ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಖಚಿತ ಪಡಿಸಿದ್ದು, ಶಶಾಂಕ್ ಖುಷಿಯಾಗಿದ್ದಾರೆ.


ಕಥೆ ಕೇಳಿ ಥ್ರಿಲ್ ಆದ ಉಪ್ಪಿ

ಉಪ್ಪಿಗಾಗಿ ಹಣೆದಿರುವ ಕಥೆ ತುಂಬಾ ವಿಭಿನ್ನವಾಗಿದೆಯಂತೆ. ಈ ಸಿನಿಮಾ ಶಶಾಂಕ್ ಗಾಗಲಿ, ಉಪ್ಪಿಗಾಗಲಿ ಹಾಗೂ ಕನ್ನಡ ಚಿತ್ರರಂಗಕ್ಕಾಗಲಿ ವಿಭಿನ್ನವಾಗಿರುತ್ತದೆಯಂತೆ. ಅದಕ್ಕಾಗಿಯೇ ಈ ಚಿತ್ರವನ್ನ ಶಶಾಂಕ್ ತಮ್ಮ ಬ್ಯಾನರ್ ನಲ್ಲೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಶಶಾಂಕ್ ಸ್ವಷ್ಟಪಡಿಸಿದ್ದಾರೆ. ಇನ್ನು ಚಿತ್ರದ ಕಥೆ ಕೇಳಿದ ಉಪೇಂದ್ರ ಅವರು ಕೂಡ ಥ್ರಿಲ್ ಆಗಿದ್ದು, ತುಂಬಾ ವಿಭಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.[ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ! ]


ನಿರ್ದೇಶನದ ಜೊತೆ 'ನಿರ್ಮಾಣ'

ಶಶಾಂಕ್ ಈ ಚಿತ್ರವನ್ನ ಬರಿ ನಿರ್ದೇಶನ ಮಾಡುತ್ತಿಲ್ಲ. ಈ ಚಿತ್ರವನ್ನ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣ ಕೂಡ ಮಾಡಲಿದ್ದಾರೆ. ಹಲವು ದಿನಗಳಿಂದ ಸ್ವಂತ ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಬೇಕೆಂಬ ಆಸೆ ಹೊಂದಿದ್ದ ಶಶಾಂಕ್, ಉಪೇಂದ್ರ ಅವರ ಚಿತ್ರವನ್ನ ನಿರ್ಮಾಣ ಮಾಡುವುದರೊಂದಿಗೆ ತಮ್ಮ ಆಸೆಯನ್ನ ಈಡೇರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ 'ಶಶಾಂಕ್ ಸಿನಿಮಾಸ್' ಎಂಬ ನಿರ್ಮಾಣ ಸಂಸ್ಥೆಯನ್ನ ಹುಟ್ಟಿಹಾಕಿದ್ದಾರೆ.


ಮುಂದಿನ ವಾರ 'ಮುಕುಂದ ಮುರಾರಿ' ರಿಲೀಸ್

ನಂದಕಿಶೋರ್ ನಿರ್ದೇಶನದಲ್ಲಿ ಸಿದ್ದವಾಗಿರುವ 'ಮುಕುಂದು ಮುರಾರಿ' ಚಿತ್ರ ಮುಂದಿನ ವಾರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಉಪೇಂದ್ರ ಹಾಗೂ ಸುದೀಪ್ ಒಟ್ಟಾಗಿ ಅಭಿನಯಿಸಿದ್ದಾರೆ.[ದೀಪಾವಳಿಗೆ 'ಮುಕುಂದ ಮುರಾರಿ'ಯ ದರ್ಶನ ]


'ಮತ್ತೆ ಹುಟ್ಟಿ ಬಾ ಉಪೇಂದ್ರ' ಶೂಟಿಂಗ್

ಸದ್ಯ, ರಿಯಲ್ ಸ್ಟಾರ್, 'ಮತ್ತೆ ಹುಟ್ಟಿ ಬಾ ಉಪೇಂದ್ರ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು, ಚಿತ್ರೀಕರಣ ಬಹುತೇಕ ಕೊನೆಯ ಹಂತದಲ್ಲಿದೆ. ಈ ಚಿತ್ರದಲ್ಲಿ ಉಪ್ಪಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರೇಮಾ ಹಾಗೂ ಶೃತಿ ಹರಿಹರನ್ ಚಿತ್ರದ ನಾಯಕಿಯರಾಗಿದ್ದಾರೆ.


ಮಂಜು ಮಾಂಡವ್ಯ ಸಿನಿಮಾ

ಈ ಮದ್ಯೆ, ಉಪೇಂದ್ರ ಅವರ 50ನೇ ಚಿತ್ರಕ್ಕೆ ಉಪ್ಪಿಯ ಅಭಿಮಾನಿ ಹಾಗೂ ಮಾಸ್ಟರ್ ಪೀಸ್ ಚಿತ್ರವನ್ನ ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ಆಕ್ಷನ್ ಕಟ್ ಹೇಳಿದ್ದಾರಂತೆ. ಈಗಾಗಲೇ ಕಥೆ ಕೇಳಿರುವ ರಿಯಲ್ ಸ್ಟಾರ್ ಮಾಸ್ಟರ್ ಪೀಸ್ ನಿರ್ದೇಶಕನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆದಷ್ಟೂ ಬೇಗ ಈ ಸಿನಿಮಾ ಸೆಟ್ಟೇರಲಿದೆಯಂತೆ.


ಶಶಾಂಕ್ ಸಿನಿಮಾ ಯಾವಾಗ,?

ಕಳೆದ 2-3 ವರ್ಷಗಳಿಂದ ಉಪ್ಪಿ ಹಾಗೂ ಶಶಾಂಕ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಆ ಸಮಯ ಈಗ ಬಂದಿದೆ. ಸದ್ಯ, ಸ್ಕ್ರಿಪ್ಟ್ ಕಾರ್ಯ ನಡಿತಿದ್ದು, ಸಂಪೂರ್ಣ ಸ್ಕ್ರಿಪ್ಟ್ ಮುಗಿಯಲು ಇನ್ನು 3-4 ತಿಂಗಳು ಸಮಯ ಬೇಕಂತೆ. ಹೀಗಾಗಿ, 2017 ರಲ್ಲಿ ಇವರಿಬ್ಬರ ಕಾಂಬಿನೇಷನ್ ನ ಸಿನಿಮಾ ಸೆಟ್ಟೇರಲಿದೆ ಎನ್ನುವುದನ್ನ ಶಶಾಂಕ್ ಸ್ವಷ್ಟಪಡಿಸಿದ್ದಾರೆ.


English summary
Real Star Upendra, After approving a subject from director Manju Mandavya, the next in line is Shashank’s project, which the actor okayed after a one-liner. This is another new actor-director combination. Shashank has been meaning to start his own production house in the name of Shashank cinemas.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X