ಸಂಗ್ರಹ ಯೋಗ್ಯ ಕೃತಿ 'ಚಿತ್ರ-ಕಥೆ' ಮತ್ತು ಶೂಟಿಂಗ್ ಸೋಜಿಗ
ಸಿನಿಮಾ ಪತ್ರಕರ್ತ ಶಶಿಧರ ಚಿತ್ರದುರ್ಗ ಅವರ 'ಚಿತ್ರಕಥೆ' ಮತ್ತು 'ಶೂಟಿಂಗ್ ಸೋಜಿಗ' ಸಿನಿಮಾ ಕೃತಿಗಳು ಇತ್ತೀಚೆಗೆ ಬಿಡುಗಡೆಯಾಗಿದ್ದು ಜನಮೆಚ್ಚುಗೆ ಗಳಿಸಿವೆ.
ಹಿರಿಯ ನಟಿ ಎಂ.ಎನ್.ಲಕ್ಷ್ಮೀದೇವಿ ಅವರು ಈ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಫೇಸ್‍ಬುಕ್‍ನಲ್ಲಿ ಮೂಡಿಬಂದ ಅಂಕಣಗಳ ಗುಚ್ಛ 'ಚಿತ್ರ-ಕಥೆ'. ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ಥ ನಾರಾಯಣ ಅವರ ಅಪರೂಪದ ಫೋಟೋಗಳು ಪುಸ್ತಕದಲ್ಲಿ ಬಳಕೆಯಾಗಿವೆ.

ಅಪರೂಪದ ರೆಟ್ರೋ ಸಿನಿಮಾ ಮಾಹಿತಿಗಳು ಇಲ್ಲಿವೆ. ಮತ್ತೊಂದು ಕೃತಿ 'ಶೂಟಿಂಗ್ ಸೋಜಿಗ'ದಲ್ಲಿ ಸುಮಾರು 250 ಸೋಜಿಗಗಳಿವೆ. 65 ಕಲಾವಿದರು ಹಾಗೂ ತಂತ್ರಜ್ಞರ ತೆರೆಯ ಹಿಂದಿನ ನೋವು, ನಲಿವು, ತಮಾಷೆಗಳನ್ನು ಶಶಿಧರ್ ಆಕರ್ಷಕವಾಗಿ ನಿರೂಪಿಸಿದ್ದಾರೆ. ಎರಡೂ ಕೃತಿಗಳಲ್ಲಿನ ಫೋಟೋ-ಬರಹಗಳು ಓದುಗರನ್ನು ಹಳೆಯ, ಮಧುರ ಸಿನಿಮಾ ಯುಗಕ್ಕೆ ಕರೆದೊಯ್ಯುತ್ತವೆ.

ಶಶಿಧರ ಚಿತ್ರದುರ್ಗ ಅವರು ಬರೆದ 'ಚಿತ್ರಪಥ' ಎಂಬ ಕೃತಿಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಈ ಹಿಂದೆ ಪ್ರಕಟಿಸಿತ್ತು.


Click it and Unblock the Notifications











