For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಕಾಲಿಟ್ಟ ಶಶಿಕುಮಾರ್ ಮಗನಿಗೆ ಈಕೆಯೇ ಜೋಡಿ

  By Naveen
  |
  ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡೋಕೆ ರೆಡಿ ಸ್ಟಾರ್ ನಟನ ಮಗ...!! | Filmibeat Kannada

  90ರ ದಶಕದಲ್ಲಿ ಸ್ಟಾರ್ ನಟನಾಗಿ ಮಿಂಚಿದ್ದ ನಟ ಶಶಿಕುಮಾರ್ ಈಗ ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ, ಈಗ ಅವರ ಮಗ ಕೂಡ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ.

  ಶಶಿ ಕುಮಾರ್ ಅವರ ಮಗ ಆದಿತ್ಯ ಶಶಿ ಕುಮಾರ್ ಸ್ಯಾಂಡಲ್ ವುಡ್ ಗೆ ಬರಲು ಸಜ್ಜಾಗಿದ್ದಾರೆ. ನಟನೆಗೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿರುವ ಅವರು ತಮ್ಮ ತಂದೆಯ ರೀತಿ ತೆರೆ ಮೇಲೆ ಮಿಂಚುವ ಆಸೆ ಹೊಂದಿದ್ದಾರೆ. ಇನ್ನು ಚಿತ್ರದಲ್ಲಿ ಆದಿತ್ಯ ಶಶಿ ಕುಮಾರ್ ಜೊತೆಗೆ ನಟಿಸುವ ನಾಯಕಿ ಆಯ್ಕೆ ಕೂಡ ಈಗಾಗಲೇ ಆಗಿದೆ.

  ಅಂದಹಾಗೆ, ನಟ ಆದಿತ್ಯ ಶಶಿ ಕುಮಾರ್ ಅವರ ಮೊದಲ ಸಿನಿಮಾದ ಕೆಲವು ವಿವರಗಳು ಮುಂದಿದೆ ಓದಿ...

  23 ವರ್ಷದ ಆದಿತ್ಯ

  23 ವರ್ಷದ ಆದಿತ್ಯ

  ನಟ ಶಶಿ ಕುಮಾರ್ ಅವರ ಮಗ ಆದಿತ್ಯ ಶಶಿ ಕುಮಾರ್ 23 ವರ್ಷದ ಹುಡುಗನಾಗಿದ್ದಾರೆ. ಅಪ್ಪನ ರೀತಿ ಹೀರೋ ಆಗುವ ಕನಸು ಹೊಂದಿರುವ ಇವರು ಚಿತ್ರರಂಗಕ್ಕೆ ಬರಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಡ್ಯಾನ್ಸ್, ಫೈಟ್ ಜೊತೆಗೆ ನಟನೆಯನ್ನು ಕರಗತ ಮಾಡಿಕೊಂಡಿದ್ದಾರೆ.

  ಜುಲೈನಲ್ಲಿ ಮುಹೂರ್ತ

  ಜುಲೈನಲ್ಲಿ ಮುಹೂರ್ತ

  ಆದಿತ್ಯ ಶಶಿ ಕುಮಾರ್ ಅವರ ಮೊದಲ ಸಿನಿಮಾ ಜುಲೈ ನಲ್ಲಿ ಸೆಟ್ಟೇರಲಿದೆ. ಈ ಚಿತ್ರವನ್ನು ಸಿದ್ದಾರ್ಥ ಮರದೇಪ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರಿಗೆ ಸಹ ಮೊದಲ ಸಿನಿಮಾವಾಗಿದೆ. ಸಿದ್ದಾರ್ಥ ಅವರ ಸಾರಥ್ಯದಲ್ಲಿ ಆದಿತ್ಯ ಲಾಂಚ್ ಆಗಲಿದ್ದಾರೆ.

  ಅಪೂರ್ವ ನಾಯಕಿ

  ಅಪೂರ್ವ ನಾಯಕಿ

  ಆದಿತ್ಯ ಶಶಿ ಕುಮಾರ್ ಅವರ ಈ ಚಿತ್ರಕ್ಕೆ ನಟಿ ಅಪೂರ್ವ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ರವಿಚಂದ್ರನ್ ಅವರ 'ಅಪೂರ್ವ' ಸಿನಿಮಾದ ಚಿತ್ರರಂಗಕ್ಕೆ ಬಂದ ಅಪೂರ್ವ ಇತ್ತೀಚಿಗಷ್ಟೆ ಶರಣ್ ಅವರ 'ವಿಕ್ಟರಿ' ಸಿನಿಮಾದಲ್ಲಿ ಸಹ ನಟಿಸುವ ಅವಕಾಶ ಪಡೆದಿದ್ದರು. ಆ ಚಿತ್ರದ ಬಳಿಕ ಆದಿತ್ಯ ಶಶಿ ಕುಮಾರ್ ಜೊತೆಗೆ ಅಪೂರ್ವ ತೆರೆ ಹಂಚಿಕೊಳ್ಳಲಿದ್ದಾರೆ.

  ಮುಂದಿನ ವಾರ ಫೋಟೋ ಶೂಟ್

  ಮುಂದಿನ ವಾರ ಫೋಟೋ ಶೂಟ್

  ಅಂದಹಾಗೆ, ಮುಂದಿನ ವಾರ ಈ ಚಿತ್ರದ ಫೋಟೋ ಶೂಟ್ ನಡೆಯಲಿದೆ. ಅದರ ನಂತರ ಚಿತ್ರದ ಟೈಟಲ್ ಹಾಗೂ ಉಳಿದ ತಾರಬಳಗ ಫಿಕ್ಸ್ ಆಗಲಿದೆ. ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜುಲೈ ನಲ್ಲಿ ಸಿನಿಮಾ ಲಾಂಚ್ ಆಗಲಿದೆ.

  English summary
  Kannada actor Shashikumar son Adithya Shashikumar making his sandalwood debut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X