For Quick Alerts
  ALLOW NOTIFICATIONS  
  For Daily Alerts

  ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ 3ನೇ ಸಿನಿಮಾ ಅನೌನ್ಸ್ ಮಾಡಿದ ಶಶಿ ಕುಮಾರ್ ಪುತ್ರ

  |

  ಸ್ಯಾಂಡಲ್ ವುಡ್ ನ ಸುಪ್ರೀಂ ಹೀರೋ ಶಿಶಿಕುಮಾರ್ ಸದ್ಯ ಮಗನ ಸಿನಿಮಾ ಪಯಣದ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಸಕ್ರೀಯರಾಗುವ ಶಶಿ ಕುಮಾರ್ ಜೊತೆಗೆ ತನ್ನ ಪುತ್ರ ಅಕ್ಷಿತ್ ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

  ಮೊದಲ ಸಿನಿಮಾ ರಿಲೀಸ್ ಗೂ ಮುನ್ನವೇ ಬದಲಾಯ್ತು Shashikumar ಮಗನ ಅದೃಷ್ಟ | Filmibeat Kannada

  ವಿಶೇಷ ಎಂದರೆ ಅಕ್ಷಿತ್ ಚೊಚ್ಚಲ ಸಿನಿಮಾ ಸೀತಾಯಣ ರಿಲೀಸ್ ಆಗುವ ಮೊದಲೇ 3ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಮೊದಲ ಸಿನಿಮಾ ರಿಲೀಸ್ ಗೂ ಮೊದಲೇ ಅಕ್ಷಿತ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅಕ್ಷಿತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಿತ್ ಮೊದಲ ಸಿನಿಮಾ ಸೀತಾಯಣದ ಟೀಸರ್ ಮತ್ತು ಹಾಡು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಈ ಸಿನಿಮಾ ಕನ್ನಡದ ಜೊತೆಗೆ ತಲುಗಿನಲ್ಲೂ ರಿಲೀಸ್ ಆಗುತ್ತಿದೆ.

  ಶಶಿಕುಮಾರ್ ಮಗನ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಎರಡನೇ ಸಿನಿಮಾ ಘೋಷಣೆಶಶಿಕುಮಾರ್ ಮಗನ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಎರಡನೇ ಸಿನಿಮಾ ಘೋಷಣೆ

  ಈ ಸಿನಿಮಾ ರಿಲೀಸ್ ಆಗುವ ಮೊದಲೇ 2ನೇ ಸಿನಿಮಾಗೂ ಸಹಿ ಮಾಡಿದ್ದಾರೆ. ಸಮಿತ್ ಎನ್ನುವ ಶೀರ್ಷಿಕೆಯಲ್ಲಿ 2ನೇ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿ ನೆರವೇರಿದೆ. ಈ ಸಿನಿಮಾ ಅನೌನ್ಸ್ ಮಾಡಿದ ಬೆನ್ನಲ್ಲೇ 3ನೇ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ಹೌದು, ಓ ಮೈ ಲವ್ ಎನ್ನುವ ಹೊಸ ಸಿನಿಮಾದಲ್ಲಿ ಅಕ್ಷಿತ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಫೋಟೋ ಶೂಟ್ ಮಾಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಸರೇ ಹೇಳುವ ಹಾಗೆ ಇದೊಂದು ಪಕ್ಕಾ ರೊಮ್ಯಾಂಟಿಕ್ ಸಿನಿಮಾ. ಚಿತ್ರದಲ್ಲಿ ಅಕ್ಷಿತ್ ಗೆ ಜೋಡಿಯಾಗಿ ಕೀರ್ತಿ ಕಲಕೇರಿ ಕಾಣಿಸಿಕೊಳ್ಳುತ್ತಿದ್ದಾರೆ.

  ಓ ಮೈ ಲವ್ ಸಿನಿಮಾದ ಫೋಟೋ ಶೂಟ್ ನಲ್ಲಿ ಅಕ್ಷಿತ್ ಮತ್ತು ಕೀರ್ತಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಸ್ಟಿಲ್ ಸೀನು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಸಹ ಕನ್ನಡದ ಜೊತೆಗೆ ಬೇರೆ ಭಾಷೆಯಲ್ಲೂ ತಯಾರಾಗುತ್ತಿದೆ. ಸದ್ಯ ಸಿನಿಮಾ ಅನೌನ್ಸ್ ಮಾಡಿರುವ ಚಿತ್ರತಂಡ ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.

  English summary
  Kannada Actor Shashikumar's Son Signs His 3rd Film Even Before His Debut Film Release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X