»   » ಅಸಹ್ಯಕರ ಸಂದೇಶ ಕಳುಹಿಸಿದವನ ಕಥೆ ಏನಾಯ್ತು.? ಶೀತಲ್ ಶೆಟ್ಟಿ ಏನ್ಮಾಡಿದ್ರು.?

ಅಸಹ್ಯಕರ ಸಂದೇಶ ಕಳುಹಿಸಿದವನ ಕಥೆ ಏನಾಯ್ತು.? ಶೀತಲ್ ಶೆಟ್ಟಿ ಏನ್ಮಾಡಿದ್ರು.?

Posted By:
Subscribe to Filmibeat Kannada

ಕನ್ನಡದ ಜನಪ್ರಿಯ ಟಿವಿ9 ವಾಹಿನಿಯ ಮಾಜಿ ನಿರೂಪಕಿ, 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿ, 'ಮಜಾ ಭಾರತ' ಆಂಕರ್ ಶೀತಲ್ ಶೆಟ್ಟಿಗೆ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಅಸಹ್ಯಕರ ಸಂದೇಶ ರವಾನಿಸಿರುವ ಸುದ್ದಿ ನಿಮಗೆಲ್ಲ ಗೊತ್ತೇ ಇದೆ.

ರಾಯ್ ಪಿಕಾರ್ಡೋ ಎಂಬ ಯುವಕ 'ಮಂಚದ ವಿಷ್ಯ'ದ ಕುರಿತು ಕಳುಹಿಸಿದ್ದ ಸಾಲು ಸಾಲು ಮೆಸೇಜ್ ಗಳನ್ನ ಸ್ವತಃ ಶೀತಲ್ ಶೆಟ್ಟಿಯವರೇ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬಹಿರಂಗ ಪಡಿಸಿದ್ದರು. ಜೊತೆಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು.[ನಿರೂಪಕಿ ಶೀತಲ್ ಶೆಟ್ಟಿಗೆ ಯುವಕನಿಂದ ಲೈಂಗಿಕ ಕಿರುಕುಳ!]

ಇಷ್ಟೆಲ್ಲ ಬೆಳವಣಿಗೆ ಆದ್ಮೇಲೆ, ಕಿಡಿಗೇಡಿ ರಾಯ್ ಪಿಕಾರ್ಡೋ ತನ್ನ ವರಸೆ ಬದಲಿಸಿದ್ದಾನಂತೆ. 'ನೀವು ನನ್ನ ಸಹೋದರಿ ಇದ್ದಂತೆ. ದಯವಿಟ್ಟು ದೂರು ನೀಡಬೇಡಿ' ಎಂದು ಅಂಗಲಾಚಿ ಬೇಡಿಕೊಂಡಿದ್ದಾನಂತೆ. ಮುಂದೆ ಓದಿ....

ಶೀತಲ್ ಶೆಟ್ಟಿಗೆ ಕೀಳು ಸಂದೇಶ ರವಾನೆ

ರಾಯ್ ಪಿಕಾರ್ಡೋ ಎಂಬ ಯುವಕ, ಶೀತಲ್ ಶೆಟ್ಟಿರವರನ್ನ ಮಂಚಕ್ಕೆ ಆಹ್ವಾನಿಸಿ ಕೀಳು ಮಟ್ಟದಲ್ಲಿ ಸಂದೇಶ ರವಾನೆ ಮಾಡಿದ್ದಾನೆ. ಇದನ್ನ ನೋಡಿ ಉರಿದು ಬಿದ್ದ ಶೀತಲ್, ಆ ಕೆಟ್ಟ ಮೆಸೇಜ್ ಗಳ ಸಮೇತ ಫೇಸ್ ಬುಕ್ ನಲ್ಲಿ ಕೆಂಡಕಾರಿದ್ದರು.

ಮಾತು ಬದಲಿಸಿದ ರಾಯ್ ಪಿಕಾರ್ಡೋ.!

ಫೇಸ್ ಬುಕ್ ನಲ್ಲಿ ಶೀತಲ್ ಶೆಟ್ಟಿ ಸಿಡಿದೆದ್ದ ಮೇಲೆ, ''ಇದು ನಿಮ್ಮ ಪರ್ಸನಲ್ ಅಕೌಂಟ್ ಎಂದು ಪರೀಕ್ಷಿಸಲು ಹೀಗೆ ಮಾಡಿದೆ. ನೀವು ನನ್ನ ಸಹೋದರಿ ಇದ್ದಂತೆ'' ಎಂದು ಹೇಳಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಶೀತಲ್ ಶೆಟ್ಟಿ, ರಾಯ್ ಪಿಕಾರ್ಡೋ ಜನ್ಮ ಜಾಲಾಡಿದ್ದಾರೆ. ಆಗಲೇ ಆತನ ಅಂಗವಿಕಲ ಎಂಬ ಸಂಗತಿ ಬಯಲಿಗೆ ಬಂದಿದೆ.

ಶೀತಲ್ ಶೆಟ್ಟಿ ಏನು ಹೇಳುತ್ತಾರೆ.?

''ಫೇಸ್ ಬುಕ್ ಅಕೌಂಟ್ ಇದ್ದ ಮೇಲೆ ಇದೆಲ್ಲ ಕಾಮನ್ ಅನಿಸುತ್ತದೆ. ಆದ್ರೆ, ಕಾಮನ್ ಅಂತ ಬಿಟ್ಟು ಬಿಡಲು ನಾನು ರೆಡಿ ಇಲ್ಲ. ತುಂಬಾ ಕೆಟ್ಟ ಕೆಟ್ಟ ಮಸೇಜ್ ಗಳನ್ನ ಕಳುಹಿಸಿದಾಗ, ಸುಮ್ನೆ ಇರಬಾರದು ಅಂತ ನನಗೆ ಅನಿಸಿತು'' - ಶೀತಲ್ ಶೆಟ್ಟಿ, ನಟಿ, ಆಂಕರ್

ಫೇಕ್ ಅಕೌಂಟ್ ಅಲ್ಲ

''ನನಗೆ ಆಶ್ಚರ್ಯ ತಂದಿರುವುದು ಆ ಹುಡುಗನ ಧೈರ್ಯ. ಯಾಕಂದ್ರೆ, ಅವನು ಫೇಕ್ ಅಕೌಂಟ್ ನಿಂದ ಮೆಸೇಜ್ ಕಳುಹಿಸಿಲ್ಲ. ಅವನದ್ದೇ ಅಕೌಂಟ್ ನಿಂದ ನನಗೆ ಕೆಟ್ಟ ಮೆಸೇಜ್ ಗಳನ್ನ ಕಳುಹಿಸಿದ್ದಾನೆ'' - ಶೀತಲ್ ಶೆಟ್ಟಿ, ನಟಿ, ಆಂಕರ್

ಇದೆಲ್ಲ ಅಸಹ್ಯಕರ

''ಮೀಡಿಯಾದಲ್ಲಿ ಕೆಲಸ ಮಾಡುವ ನನಗೆ ಈ ತರಹ ಮೆಸೇಜ್ ಗಳನ್ನ ಕಳುಹಿಸುತ್ತಾನೆ ಅಂದ್ರೆ ಇನ್ನೂ ಅವನ ಅಕ್ಕ-ಪಕ್ಕ ಮನೆಯವರಿಗೆ, ಕ್ಲಾಸ್ ಮೇಟ್ಸ್ ಗೆ ಹೇಗೆಲ್ಲ ಮೆಸೇಜ್ ಗಳನ್ನ ಕಳುಹಿಸಬಹುದು.? ಇದೆಲ್ಲ ತುಂಬಾ ಅಸಹ್ಯಕರ'' - ಶೀತಲ್ ಶೆಟ್ಟಿ, ನಟಿ, ಆಂಕರ್

ಇಲ್ಲಿಗೆ ಸಾಕು ಅನಿಸುತ್ತೆ

''ನಾನಿನ್ನೂ ಅವನ ಮೇಲೆ ಕಂಪ್ಲೇಂಟ್ ಕೊಡೋಕೆ ಹೋಗಿಲ್ಲ. ಯಾಕಂದ್ರೆ, ಅವನ ಅಕೌಂಟ್ ನ ನಾನು ಚೆಕ್ ಮಾಡಿದಾಗ, ಅವನು ಅಂಗವಿಕಲ ಅಂತ ಗೊತ್ತಾಯ್ತು. ಆತನಿಗೆ ಒಂದು ಕಾಲು ಸರಿ ಇಲ್ಲ. ಚಿಕ್ಕ ವಯಸ್ಸು ಬೇರೆ. ಆದರೆ ಅವನು ಮಾಡಿರುವ ತಪ್ಪು ಚಿಕ್ಕದು ಅಂತ ನಾನು ಹೇಳಲ್ಲ. ಆದರೆ ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸಿದಾಗ, ಇಲ್ಲಿಗೆ ಸಾಕು ಅನಿಸುತ್ತೆ. ಫೇಸ್ ಬುಕ್ ನಲ್ಲಿ ನಾನು ಅವನಿಗೆ ಕೊಟ್ಟಿರುವ ಶಿಕ್ಷೆಯೇ ಜಾಸ್ತಿ ಆಯ್ತು. ಮಾನವೀಯತೆಯ ಆಧಾರದ ಮೇಲೆ ಸುಮ್ಮನೆ ಇದ್ದೀನಿ'' ಎನ್ನುತ್ತಾರೆ ಶೀತಲ್ ಶೆಟ್ಟಿ

English summary
Kannada Actress, Anchor, Bigg Boss Kannada 4 Contestant Sheethal Shetty was sexually harassed by Roy Picardo in Facebook. Now, Sheethal Shetty has decided to not to file complaint on the same.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada