»   » ಲೇವಡಿ ಮಾಡಿದ ರಮ್ಯಾ ವಿರುದ್ಧ ಉರಿದುಬಿದ್ದ ಶಿಲ್ಪಾ ಗಣೇಶ್.!

ಲೇವಡಿ ಮಾಡಿದ ರಮ್ಯಾ ವಿರುದ್ಧ ಉರಿದುಬಿದ್ದ ಶಿಲ್ಪಾ ಗಣೇಶ್.!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸುಮಾರು ಒಂಬತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ಸ್ಯಾಂಡಲ್ ವುಡ್ ಗೆ 'ಕ್ವೀನ್' ಆಗಿದ್ದ ರಮ್ಯಾ ಆಗಿನ್ನೂ ರಾಜಕೀಯಕ್ಕೆ ಧುಮುಕಿರಲಿಲ್ಲ. ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದರು. ಇನ್ ಫ್ಯಾಕ್ಟ್ 2008 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಬೊಂಬಾಟ್' ಎಂಬ ಸಿನಿಮಾದಲ್ಲಿ ನಟಿ ರಮ್ಯಾ ಮಿಂಚಿದ್ದರು.

  ಈಗ ಕಾಲ ಬದಲಾಗಿದೆ. ಗಾಂಧಿನಗರಕ್ಕೆ ಗುಡ್ ಬೈ ಹೇಳಿರುವ ರಮ್ಯಾ ಮೇಡಂ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗಣೇಶ್ ಕೂಡ ಬಿಜೆಪಿ ಪಕ್ಷದಲ್ಲಿ ಯೂತ್ ಲೀಡರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಇಬ್ಬರ ಪಕ್ಷ, ತತ್ವ, ಸಿದ್ಧಾಂತಗಳು ಬೇರೆ ಬೇರೆ ಆಗಿರುವ ಕಾರಣ ರಮ್ಯಾ ಹಾಗೂ ಶಿಲ್ಪಾ ಗಣೇಶ್ ಮಧ್ಯೆ ಫೇಸ್ ಬುಕ್ ವಾರ್ ನಡೆಯುತ್ತಿದೆ.

  ನಟಿ ರಮ್ಯಾ ವಿರುದ್ಧ ಸಿಡಿದೆದ್ದ 'ಗೋಲ್ಡನ್ ಸ್ಟಾರ್' ಪತ್ನಿ ಶಿಲ್ಪಾ ಗಣೇಶ್.!

  ''ಬಿಜೆಪಿ ಸರ್ಕಾರ ಮಹಿಳೆಯರಿಗೆ ಭದ್ರತೆ ನೀಡುತ್ತಿಲ್ಲ'' ಎಂದು ಕಾಮೆಂಟ್ ಮಾಡಿದ್ದ ರಮ್ಯಾ ವಿರುದ್ಧ ಶಿಲ್ಪಾ ಗಣೇಶ್ ಫೇಸ್ ಬುಕ್ ನಲ್ಲಿ ಸಿಡಿದೆದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಲೇವಡಿ ಮಾಡಿರುವ ರಮ್ಯಾ ವಿರುದ್ಧ ಶಿಲ್ಪಾ ಗಣೇಶ್ ಉರಿದು ಬಿದ್ದಿದ್ದಾರೆ. ಮುಂದೆ ಓದಿರಿ....

  ರಮ್ಯಾ ಪೋಸ್ಟ್ ಮಾಡಿದ ಫೋಟೋ ಇದು...

  ಗುಜರಾತ್ ನ ಪ್ರವಾಹ ಪೀಡಿತ ಜನರನ್ನ ರಾಹುಲ್ ಗಾಂಧಿ ಭೇಟಿ ಮಾಡಿರುವ ಫೋಟೋಗೆ 'ಪೀಪಲ್ಸ್ ಲೀಡರ್' (ಜನರ ನಾಯಕ) ಎಂಬ ಬಿರುದು ಕೊಟ್ಟು ಅದಕ್ಕೆ ಗುಜರಾತ್ ಪ್ರವಾಹ ಪೀಡಿತ ಪ್ರದೇಶಗಳನ್ನ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ 'ಸೀಟ್ ಬೆಲ್ಟ್ ಲೀಡರ್' ಎಂಬ ಬಿರುದು ನೀಡಿ ಹೋಲಿಕೆ ಮಾಡಿರುವ ಫೋಟೋವನ್ನ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು.

  ಗಣೇಶ್-ಶಿಲ್ಪಾ ಗಡಿಬಿಡಿ ಮದುವೆ ಬಗ್ಗೆ ಕೇಳಿಬಂದ ಅಂತೆ-ಕಂತೆಯೆಲ್ಲ 'ಬುಲ್ ಶಿಟ್'.!

  ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಲೇವಡಿ

  ಪ್ರಧಾನಿ ನರೇಂದ್ರ ಮೋದಿ ಅವರನ್ನ 'ಸೀಟ್ ಬೆಲ್ಟ್ ನಾಯಕ' ಎಂದು ಕರೆದು ರಮ್ಯಾ ಲೇವಡಿ ಮಾಡಿರುವುದರಿಂದ ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ ಆಗಿರುವ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗಣೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.

  ರಮ್ಯಾ ವಿರುದ್ಧ ಶಿಲ್ಪಾ ಗಣೇಶ್ ಗರಂ

  ''ರಮ್ಯಾರವರೇ, ಮೊದಲಿಗೆ ತಾವೊಬ್ಬರೇ ಬುದ್ಧಿವಂತರು ಎನ್ನುವ ತಮ್ಮ ಭ್ರಮೆಗೆ ನಮಸ್ಕಾರಗಳು'' ಎನ್ನುವ ಮೂಲಕ ಫೇಸ್ ಬುಕ್ ನಲ್ಲಿ ರಮ್ಯಾ ವಿರುದ್ಧ ಶಿಲ್ಪಾ ಗಣೇಶ್ ಸಿಡಿದೆದ್ದಿದ್ದಾರೆ.

  ವೈಮಾನಿಕ ಸಮೀಕ್ಷೆ ಅನಿವಾರ್ಯ

  ''ನೀವು ಹೋಲಿಕೆ ಮಾಡುತ್ತಿರುವ ಈ ಫೋಟೋ ವಿಚಾರಕ್ಕೆ ಬಂದರೆ ಯಾವ ಜಾಗಗಳಲ್ಲಿ ವಾಹನ ಹೋಗಲೂ ಕೂಡ ಕಷ್ಟವೋ ಅಲ್ಲಿ ವೈಮಾನಿಕ ಸಮೀಕ್ಷೆ ಮಾಡುವುದು ಅನಿವಾರ್ಯ ಎನ್ನುವುದು ಅರಿವಿರಲಿ, ಪ್ರಧಾನಿಗಳು ನಂತರದಲ್ಲಿ ಜನರೊಂದಿಗೆ ನೇರವಾಗಿ ಮಾತಾಡಿರುವುದನ್ನು ತಾವು ಮರೆತಿದ್ದರೂ ಅಲ್ಲಿನ ಜನ ಮರೆತಿಲ್ಲ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

  ಜನ ಮೂರ್ಖರಲ್ಲ

  ''ನಿಮ್ಮ ರಾಹುಲ್ ರವರಿಗೆ ಜನರ ಬಗ್ಗೆ ಅಷ್ಟು ಕಾಳಜಿ ಇದ್ದಿದ್ದರೆ ಅಂತಹ ಪ್ರವಾಹದ ಪರಿಸ್ಥಿತಿಯಲ್ಲಿ ಗುಜಾರಾತಿನ ತಮ್ಮದೇ ಪಕ್ಷದ ಶಾಸಕರನ್ನು ಬೆಂಗಳೂರಿನಲ್ಲಿ ಮೋಜು ಮಾಡಲು ಕಳುಹಿಸಿ ತಾವು ಭಾರಿ ಸಭ್ಯರಂತೆ ಜನರೆದುರು ಬಂದು ಮೊಸಳೆ ಕಣ್ಣೀರು ಸುರಿಸಿದರೆ ಅದನ್ನು ನಂಬಲು ಜನ ಮೂರ್ಖರಲ್ಲ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

  ನಕಲಿ ರೈತರ ಕಥೆ

  ''ನಿಮ್ಮ ರಾಹುಲ್ ರವರು ನಿಜವಾದ ಪ್ರವಾಹ ಸಂತ್ರಸ್ತರ ಜೊತೆಗೆ ಕುಳಿತು ಮಾತಾಡಿದ್ದಾರೆ ಎನ್ನಲು ಯಾವುದೇ ಸಾಕ್ಷಿ ಇಲ್ಲ. ನಿಮ್ಮದೇ ಮಂಡ್ಯದಲ್ಲಿ ರಾಹುಲ್ ಭೇಟಿಯಾದಾಗ ತಾವು ಸೃಷ್ಟಿಸಿದ ನಕಲಿ ರೈತರ ಕಥೆ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಇದರಿಂದಾಗಿ ತಾವು ಮಂಡ್ಯದ ಮಾರುಕಟ್ಟೆಯಲ್ಲಿ ಅವಮಾನ ಪಟ್ಟಿದ್ದು ತಮ್ಮ ಮಂಡ್ಯದಿಂದ ವಾಸಸ್ಥಾನ ಬದಲಾಯಿಸಿದ್ದು ಕೂಡಾ ಜನ ಮರೆತಿಲ್ಲ'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

  ನಾಟಕ ಆಡಿ ಯಶಸ್ವಿಯಾದವರು ತಾನೇ.?

  ''ರಾಹುಲ್ ರವರು ತಾವು ಸಂಸದರಾದ ಕ್ಷೇತ್ರದಲ್ಲೇ ಯಾವುದೇ ಅಭಿವೃದ್ಧಿ ಮಾಡದೇ ಜನರಿಂದ ಉಗಿಸಿಕೊಂಡಿದ್ದು ಜನ ಮರೆತಿಲ್ಲ. ಇನ್ನು ರಾಹುಲ್ ರವರು ಗುಜರಾತಿನ ಪ್ರವಾಹ ಸಂತ್ರಸ್ತರನ್ನು ನೋಡಲು ಹೋದಾಗ ತಮ್ಮ ಕಾರಿನ ಮೇಲೆ ಬಿಜೆಪಿಯವರು ಕಲ್ಲು ತೂರಾಟ ಮಾಡಿದರು ಎಂದು ಹೇಳಿಕೆ ನೀಡಿದ್ದು ನೋಡಿದರೆ ಇದರ ಹಿಂದೆ ನಿಮ್ಮ ಬುದ್ಧಿವಂತಿಕೆ ಎದ್ದು ಕಾಣುತ್ತದೆ, ತಾವೇ ಕಲ್ಲು ಹೊಡೆಸಿಕೊಂಡು ಬಿಜೆಪಿಯ ಮೇಲೆ ಗೂಬೆ ಕೂರಿಸುವುದು ತಿಳಿದ ವಿಚಾರವೇ ಅಲ್ಲವೇ? ಈಗಾಗಲೇ ತಾವು ಮಂಡ್ಯದಲ್ಲಿ ಇದೇ ತರ ನಾಟಕ ಮಾಡಿ ಯಶಸ್ವಿಯಾದವರು ತಾನೇ?'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

  ಜವಾಬ್ದಾರಿಯಿಂದ ಮಾತನಾಡಿರಿ...

  ''ಮೂರು ಬಾರಿ ಮುಖ್ಯಮಂತ್ರಿ ಆದವರು ದೇಶದ ಪ್ರಧಾನಿಯಾದವರಿಗೆ ಆಡಳಿತ ಮಾಡುವುದನ್ನು ತಾವು ಕಲಿಸಿಕೊಡಲು ಹೋಗಬೇಡಿ. ನೀವೇ ಹೇಳಿದಂತೆ ರಾಹುಲ್ ರನ್ನು ಮೋದಿಜೀ ಲೆವೆಲ್ಲಿಗೆ ಕೊಂಡೊಯ್ಯುತ್ತೇನೆ ಎಂದ ಮಾತನ್ನು ಮೋದಿಜೀ ಹೆಸರಿಗೆ ಮಣ್ಣೆರೆಚುವ ಬದಲು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಮನಸ್ಸನ್ನು ಗೆಲ್ಲಿರಿ. ನಿಮ್ಮ ನಾಟಕಗಳನ್ನು ಜನ ನಂಬುವ ಕಾಲ ಹೊರಟುಹೋಗಿದೆ, ಜವಾಬ್ದಾರಿಯಿಂದ ಮಾತಾಡುವುದನ್ನು ಕಲಿಯಿರಿ.
  ಧನ್ಯವಾದಗಳು'' - ಶಿಲ್ಪಾ ಗಣೇಶ್, ಬಿಜೆಪಿ ರಾಜ್ಯ ಮಹಿಳಾ ಮೋರ್ಚ ಉಪಾಧ್ಯಕ್ಷೆ

  English summary
  Shilpa Ganesh, Wife of Kannada Actor Ganesh and State Vice President Mahila Morcha - BJP Karnataka has taken her Facebook page to express her displeasure against EX MP, Kannada Actress Ramya's post in Facebook .

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more