For Quick Alerts
  ALLOW NOTIFICATIONS  
  For Daily Alerts

  'ಏಕ್ ಲವ್ ಯಾ' ತಂಡಕ್ಕೆ 'ಶಿಷ್ಯ' ದೀಪಕ್ ನ ಕರೆತಂದ ಪ್ರೇಮ್.!

  |

  ಕನ್ನಡ ಚಿತ್ರ ನಟ ದೀಪಕ್ ಯಾರು ಅಂತ ಗೊತ್ತಾಗಬೇಕಾದರೆ, ನೀವು 'ಶಿಷ್ಯ' ಚಿತ್ರವನ್ನ ನೆನಪು ಮಾಡಿಕೊಳ್ಳಲೇಬೇಕು. 2006 ರಲ್ಲಿ ಬಿಡುಗಡೆ ಆದ 'ಶಿಷ್ಯ' ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸದೇ ಇದ್ದರೂ, ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡಿದ್ದು ಸತ್ಯ.

  'ಶಿಷ್ಯ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡ ದೀಪಕ್ ಬಳಿಕ 'ಬಾ ಬೇಗೆ ಚಂದಮಾಮ', 'ಚನ್ನ', 'ಖದೀಮರು', 'ಮಾಗಡಿ', 'ಒನಕೆ ಓಬವ್ವ', '18th ಕ್ರಾಸ್' ಮುಂತಾದ ಚಿತ್ರಗಳಲ್ಲಿ ದೀಪಕ್ ನಟಿಸಿದ್ದರು. ಆದ್ರೆ, ಯಾವ ಚಿತ್ರವೂ ಅವರಿಗೆ ಯಶಸ್ಸನ್ನು ತಂದುಕೊಡಲಿಲ್ಲ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ 'ಬೆಳ್ಳಿ' ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದ ದೀಪಕ್ ಇದೀಗ 'ಏಕ್ ಲವ್ ಯಾ' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದಲ್ಲಿ ದೀಪಕ್ ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

  ಅಸಲಿಗೆ, ಪ್ರೇಮ್ ಮತ್ತು ರಕ್ಷಿತಾ ಕುಟುಂಬಕ್ಕೆ 'ಶಿಷ್ಯ' ದೀಪಕ್ ಅತ್ಯಾಪ್ತ. ಹೀಗಾಗಿ, ಚಿತ್ರದ ಸ್ಪೆಷಲ್ ಮತ್ತು ರೆಬೆಲ್ ಪಾತ್ರಕ್ಕೆ ದೀಪಕ್ ರನ್ನೇ ಪ್ರೇಮ್ ಅಯ್ಕೆ ಮಾಡಿದ್ದಾರೆ. 'ಏಕ್ ಲವ್ ಯಾ' ಚಿತ್ರದ ಮೂಲಕ ರಕ್ಷಿತಾ ಸಹೋದರ ರಾಣಾ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿಕೊಡುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.

  ಪ್ರೇಮ್ 'ಏಕ್ ಲವ್ ಯಾ' ಚಿತ್ರಕ್ಕೆ ಮೂರನೇ ನಾಯಕಿ ಎಂಟ್ರಿಪ್ರೇಮ್ 'ಏಕ್ ಲವ್ ಯಾ' ಚಿತ್ರಕ್ಕೆ ಮೂರನೇ ನಾಯಕಿ ಎಂಟ್ರಿ

  ಅಂದ್ಹಾಗೆ, 'ಏಕ್ ಲವ್ ಯಾ' ತಂಡದಲ್ಲಿ ರಚಿತಾ ರಾಮ್, ಶಶಿಕುಮಾರ್, ಚರಣ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರೀಕರಣ ಹಂತದಲ್ಲೇ ಸಿನಿಮಾತಂಡ ಬಿಜಿಯಾಗಿದೆ.

  English summary
  Shishya Deepak to act as Police Officer in Prem's Ek Love Ya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X