For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಮುಂದಿನ ಚಿತ್ರಕ್ಕಾಗಿ ಒಂದಾಗಲಿದ್ದಾರೆ ವಿವಿಧ ಇಂಡಸ್ಟ್ರಿಯ ಆರು ಜನ ಹೀರೊಗಳು; ಇಲ್ಲಿದೆ ಪಟ್ಟಿ

  |

  ಏಕ್ ಲವ್ ಯಾ ಚಿತ್ರದ ಸಾಮಾನ್ಯ ಫಲಿತಾಂಶದ ನಂತರ ನಿರ್ದೇಶಕ ಜೋಗಿ ಪ್ರೇಮ್ ಪ್ಯಾನ್ ಇಂಡಿಯಾ ಚಿತ್ರ ನಿರ್ದೇಶನದತ್ತ ಮುಖಮಾಡಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಈ ಬಾರಿ ಜೋಗಿ ಪ್ರೇಮ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಪೋಸ್ಟರ್ ಮೂಲಕ ಹೈಪ್ ಹುಟ್ಟು ಹಾಕಿದ್ದಾರೆ.

  ಅತ್ತ ಪೊಗರು ಚಿತ್ರದ ಮೂಲಕ ನಿರೀಕ್ಷಿಸಿದ ಯಶಸ್ಸು ಸಾಧಿಸುವಲ್ಲಿ ವಿಫಲರಾಗಿರುವ ಧ್ರುವ ಸರ್ಜಾ ಕೂಡ ಕಮ್ ಬ್ಯಾಕ್ ನಿರೀಕ್ಷೆಯಲ್ಲಿದ್ದು ಜೋಗಿ ಪ್ರೇಮ್ ಜತೆ ಕೈಜೋಡಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಅಡಿಯಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಡಲಾಗಿಲ್ಲ. ಯಾವಾಗಲೂ ಭಿನ್ನ ಹಾಗೂ ಸೃಜನಶೀಲ ಶೀರ್ಷಿಕೆಗಳನ್ನು ತನ್ನ ಚಿತ್ರಗಳಿಗೆ ಇಡುವ ಜೋಗಿ ಪ್ರೇಮ್ ಈ ಚಿತ್ರಕ್ಕೂ ಸಹ ಅಂಥದ್ದೇ ಟೈಟಲ್ ಇಡುವ ನಿರೀಕ್ಷೆ ಇದೆ.

  ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಪ್ರೇಮ್ ದೊಡ್ಡ ಮಟ್ಟದಲ್ಲಿ ನೆರವೇರಿಸಲು ಯೋಜನೆ ರೂಪಿಸಿಕೊಂಡಿದ್ದು, ಕಾರ್ಯಕ್ರಮ ಇದೇ 20ರಂದು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಜರುಗಲಿದೆ. ಈ ಮೆಗಾ ಕಾರ್ಯಕ್ರಮಕ್ಕೆ ಪ್ರೇಮ್ ವಿವಿಧ ಚಿತ್ರರಂಗಗಳ ದಿಗ್ಗಜ ನಟರನ್ನ ಆಹ್ವಾನಿಸಿದ್ದು, ಸದ್ಯ ಕನ್ನಡ ಚಲನಚಿತ್ರ ರಂಗದಿಂದ ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಿದ್ದಾರೆ.

   ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡ ಪ್ರೇಮ್

  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡ ಪ್ರೇಮ್

  ಇನ್ನು ಶಿವರಾಜ್ ಕುಮಾರ್ ಅವರನ್ನು ತನ್ನ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ನಡುವಿನ ಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿರುವ ವಿಷಯವನ್ನು ಪ್ರೇಮ್ ಶಿವಣ್ಣ ಜತೆಗಿನ ಸೆಲ್ಫಿ ಚಿತ್ರ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ. ಇನ್ನು ಈ ಫೋಟೊದಲ್ಲಿ ನೀಲಿ ಕಣ್ಣಿನೊಂದಿಗೆ ಖಡಕ್ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಬೀರ್ ಬಲ್ ಖ್ಯಾತಿಯ ಎಂ ಜಿ ಶ್ರೀನಿವಾಸ್ ನಿರ್ದೇಶನದ ಘೋಸ್ಟ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

   ವೇದಿಕೆ ಮೇಲೆ ಇರಲಿದ್ದಾರೆ ಪ್ರೇಮ್ ಅವರ 6 ಜನ ಹೀರೋಗಳು

  ವೇದಿಕೆ ಮೇಲೆ ಇರಲಿದ್ದಾರೆ ಪ್ರೇಮ್ ಅವರ 6 ಜನ ಹೀರೋಗಳು

  ಇನ್ನು ಶಿವರಾಜ್ ಕುಮಾರ್ ಜತೆಗೆ ಮಲಯಾಳಂ ಚಿತ್ರರಂಗದ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಬಾಲಿವುಡ್ ಚಿತ್ರರಂಗದ ಸಂಜಯ್ ದತ್ ಮತ್ತು ಕಾಲಿವುಡ್ ಚಿತ್ರರಂಗದ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಕೂಡ ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಈ ಮೂಲಕ ಧ್ರುವ ಸರ್ಜಾ, ಶಿವರಾಜ್ ಕುಮಾರ್, ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ವಿಜಯ್ ಸೇತುಪತಿ ಹಾಗೂ ಸಂಜಯ್ ದತ್ ಹೀಗೆ ಒಟ್ಟು 6 ಜನ ಹೀರೋಗಳು ಒಂದೇ ವೇದಿಕೆ ಮೇಲೆ ಪ್ರೇಮ್ ಕಾರ್ಯಕ್ರಮಕ್ಕಾಗಿ ಒಂದಾಗಲಿದ್ದಾರೆ.

   ಎಲ್ಲಾ ಭಾಷೆಗಳಿಗೂ ಧ್ರುವ ಸರ್ಜಾ ಡಬ್

  ಎಲ್ಲಾ ಭಾಷೆಗಳಿಗೂ ಧ್ರುವ ಸರ್ಜಾ ಡಬ್

  ಇನ್ನು ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಅಡಿಯಲ್ಲಿ ಮೂಡಿಬರುತ್ತಿರುವ ಚಿತ್ರದ ಎಲ್ಲಾ ಭಾಷೆಯ ಟೀಸರ್‌ನಲ್ಲೂ ಸಹ ಧ್ರುವ ಸರ್ಜಾ ಅವರ ದನಿಯೇ ಇರಲಿದೆ. ಈ ಕುರಿತು ಈ ಮೊದಲೇ ತಿಳಿಸಿದ್ದ ನಿರ್ದೇಶಕ ಪ್ರೇಮ್ ಧ್ರುವ ಸರ್ಜಾ ಇದೇ ಮೊದಲ ಬಾರಿಗೆ ಎಲ್ಲಾ ಭಾಷೆಗೂ ಸಹ ಡಬ್ಬಿಂಗ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು. ಈ ಮೂಲಕ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಬ್ಬಿಂಗ್ ಮಾಡಲಿರುವ ಮೊದಲನೇ ಕನ್ನಡ ನಟ ಎನಿಸಿಕೊಳ್ಳಲಿದ್ದಾರೆ.

  English summary
  Shiva rajkumar, Mohanlal and Sanjay Dutt to grace Dhruva Sarja and Prem combo title teaser launch event. Take a look
  Monday, October 17, 2022, 19:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X