»   » ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದ ಶಿವಣ್ಣ

ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದ ಶಿವಣ್ಣ

Posted By:
Subscribe to Filmibeat Kannada

ಸೈಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇತ್ತೀಚಿಗಷ್ಟೆ ದುಬೈನಲ್ಲಿ ನಡೆದಿತ್ತು. ನಟ ಶಿವರಾಜ್ ಕುಮಾರ್ ತಮ್ಮ 'ಶಿವಲಿಂಗ' ಸಿನಿಮಾದ ಮೂಲಕ ಬೆಸ್ಟ್ ಹೀರೋ ಪ್ರಶಸ್ತಿಯನ್ನು ಪಡೆದರು. ಅದೇ ಕಾರ್ಯಕ್ರಮದಲ್ಲಿ ಶಿವಣ್ಣ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ಒಬ್ಬ ಅಭಿಮಾನಿಯಾಗಿ ಶಿವಣ್ಣನ ಬಗ್ಗೆ ಯೋಗೇಶ್ ಹೇಳಿದ್ದೇನು?

ಕಾರ್ಯಕ್ರಮದಲ್ಲಿ ನಿರೂಪಕಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಶಿವಣ್ಣ ''ನಾನು ಕೆಲ ದಿನಗಳ ಹಿಂದೆ ನನ್ನ ತಾಯಿಯನ್ನು ಕಳೆದುಕೊಂಡೆ. ಆದರೂ ಸಹ ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಯಾವಾಗಲೂ ನಮ್ಮ ತಂದೆ ತಾಯಿ 'ಕೆಲಸ ಮೊದಲು' ಅಂತ ಹೇಳುತ್ತಿದ್ದರು. ಅದೇ ರೀತಿ ನಾನು ಮಾಡುತ್ತಿದ್ದೇನೆ'' ಅಂತ ಶಿವಣ್ಣ ಹೇಳಿದ್ದಾರೆ.

ಸೈಮಾ ಪ್ರಶಸ್ತಿ ಗೆದ್ದ ನಟ-ನಟಿಯರು ಯಾರು? ಸಂಪೂರ್ಣ ಪಟ್ಟಿ ಇಲ್ಲಿದೆ..

Shiva Rajkumar Spoke About Parvathamma in 'SIIMA'

ಜೊತೆಗೆ ಶಿವಣ್ಣ ತಮ್ಮ ನಟನೆಯ 115ಕ್ಕೂ ಹೆಚ್ಚು ಸಿನಿಮಾಗಳ ಪೈಕಿ 'ಚಿಗುರಿದ ಕನಸು' ಬೆಸ್ಟ್ ಅಂತ ಹೇಳಿದ್ದಾರೆ. ಈ ಸಿನಿಮಾ ಪ್ರತಿಯೊಬ್ಬ ಮನುಷ್ಯನಿಗೆ ತುಂಬ ಹತ್ತಿರವಿರುವ ಕಥೆ ಇದ್ದು, ಸಂಬಂಧದ ಬೆಸುಗೆಯ ಬಗ್ಗೆ ಇರುವ ಈ ಸಿನಿಮಾ ನನಗೆ ತುಂಬ ಇಷ್ಟ ಅಂತ ಶಿವಣ್ಣ ಉತ್ತರಿಸಿದ್ದಾರೆ.

English summary
Kannada Actor Shiva Rajkumar Spoke About Parvathamma Rajkumar in South Indian International Movie Awards 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada