For Quick Alerts
  ALLOW NOTIFICATIONS  
  For Daily Alerts

  'ಹೆಡ್-ಬುಷ್' ಸಿನಿಮಾದಲ್ಲಿ ಡಾಲಿ ಬದಲಿಗೆ ನಟಿಸಬೇಕಿತ್ತು ಕನ್ನಡದ ಸ್ಟಾರ್ ನಟ!

  |

  ಡಾಲಿ ಧನಂಜಯ್ ಮತ್ತೊಮ್ಮೆ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಈ ಬಾರಿ ಖಡಕ್ ಅಂಡರ್ವರ್ಲ್ಡ್ ಡಾನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಡಾಲಿ.

  ಡಾಲಿ ಧನಂಜಯ್ ನಟಿಸಿರುವ 'ಹೆಡ್ ಬುಷ್' ಸಿನಿಮಾ ಮುಂದಿನ ವಾರ 21ನೇ ತಾರೀಖಿನಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಭೂಗತ ಲೋಕದ ಡಾನ್ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ.

  ಸಿನಿಮಾದ ಪ್ರಚಾರ ಆರಂಭಿಸಿರುವ ಡಾಲಿ ಧನಂಜಯ್, ರೆಟ್ರೋ ಮಾದರಿಯ ಉಡುಗೆಗಳನ್ನು ತೊಟ್ಟು, ಹಳೆ ಅಂಬಾಸಿಡರ್ ಕಾರಿನಲ್ಲಿ ಸುತ್ತಾಡುತ್ತಿದ್ದು, ವಿದೇಶಕ್ಕೂ ರೆಟ್ರೊ ಗೆಟಪ್‌ನಲ್ಲಿಯೇ ಹೋಗುತ್ತಿದ್ದಾರೆ. ಇತ್ತೀಚೆಗೆ ಫಿಲಂಫೇರ್‌ಗೂ ಅದೆ ಗೆಟಪ್‌ನಲ್ಲಿ ಬಂದಿದ್ದರು. ಆದರೆ ಈ ಸಿನಿಮಾದಲ್ಲಿ ಡಾಲಿ ಧನಂಜಯ್ ನಿರ್ವಹಿಸಿರುವ ಪಾತ್ರವನ್ನು ಕನ್ನಡದ ಸ್ಟಾರ್ ನಿರ್ವಹಿಸಬೇಕಾಗಿತ್ತಂತೆ.

  'ಹೆಡ್ ಬುಷ್' ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ

  'ಹೆಡ್ ಬುಷ್' ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ

  'ಹೆಡ್ ಬುಷ್' ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದು, ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ''ಈ ಸಿನಿಮಾದಲ್ಲಿ ಜಯರಾಜ್ ಪಾತ್ರವನ್ನು ಶಿವಣ್ಣ ಮಾಡಿದ್ದರೆ ಚೆನ್ನಾಗಿತ್ತು ಎನಿಸಿತ್ತು. ಉಪೇಂದ್ರ ಸಹ ಈ ಸಿನಿಮಾದ ಕತೆ ಕೇಳಿದ್ದರು. ಆದರೆ ಜಯರಾಜ್‌ನ ಯೌವ್ವನದ ದಿನಗಳ ಕತೆ ಇದಾದ್ದರಿಂದ ಕಟ್ಟುಮಸ್ತು ದೇಹದ ಯುವಕನ ಅವಶ್ಯಕತೆ ಇತ್ತು. ಹಾಗಾಗಿ ಡಾಲಿ ಧನಂಜಯ್ ಅನ್ನು ಆಯ್ಕೆ ಮಾಡಿದೆವು'' ಎಂದಿದ್ದಾರೆ.

  ನನಗೆ ಶಿವರಾಜ್ ಕುಮಾರ್ ಇಷ್ಟ: ಅಗ್ನಿ ಶ್ರೀಧರ್

  ನನಗೆ ಶಿವರಾಜ್ ಕುಮಾರ್ ಇಷ್ಟ: ಅಗ್ನಿ ಶ್ರೀಧರ್

  ''ನನಗೆ ವೈಯಕ್ತಿಕವಾಗಿ ಶಿವರಾಜ್ ಕುಮಾರ್ ನಟನೆ ಇಷ್ಟ. ಅವರ ಕಣ್ಣುಗಳಂತೂ ನನಗೆ ಬಹಳ ಇಷ್ಟ. ಹಾಗಾಗಿ ಅವರೇ ಈ ಪಾತ್ರಕ್ಕೆ ಸೂಕ್ತ ಎಂದುಕೊಂಡಿದ್ದೆ. ಆದರೆ ಅದಾಗಲಿಲ್ಲ. ಆದರೆ ಧನಂಜಯ್ ಅದ್ಭುತವಾಗಿ ಈ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರಕ್ಕಾಗಿ ಅವರು ತಯಾರಾದ ರೀತಿ ಅದ್ಭುತವಾಗಿತ್ತು. ಅವರ ದೇಹದ ಶೇಪ್, ಮಾತನಾಡುವ ವಿಧಾನ ಎಲ್ಲವೂ ಚೆನ್ನಾಗಿದೆ. ಅವರು ಮೊದಲು ನಟನಾಗಿ ಬಂದರು. ಆದರೆ ಕತೆ ಇಷ್ಟವಾಗಿ ಅವರೇ ನಿರ್ಮಾಪಕರೂ ಆಗಿದ್ದಾರೆ'' ಎಂದಿದ್ದಾರೆ ಅಗ್ನಿ. ಅಸಲಿಗೆ ಶಿವರಾಜ್ ಕುಮಾರ್ ನಟನೆಯ 'ತಮಸ್ಸು' ಸಿನಿಮಾವನ್ನು ಅಗ್ನಿ ಶ್ರೀಧರ್ ನಿರ್ದೇಶನ ಮಾಡಿದ್ದರು.

  ಡಾಲಿಗೆ ತುಸು ಭಯವೂ ಇದೆ: ಅಗ್ನಿ ಶ್ರೀಧರ್

  ಡಾಲಿಗೆ ತುಸು ಭಯವೂ ಇದೆ: ಅಗ್ನಿ ಶ್ರೀಧರ್

  ''ಡಾಲಿ ಧನಂಜಯ್ ಅದ್ಭುತವಾದ ನಟ, ಆದರೆ ಅವರಿಗೆ ತುಸು ಭಯವೂ ಇದೆ. ಕ್ಯಾಮೆರಾ ಮುಂದೆ ಅಬ್ಬರಿಸುವ ಧನಂಜಯ್ ಹೊರಗಡೆ ಬಹಳ ಮೃದು ವ್ಯಕ್ತಿತ್ವದವರು. ಹೊರಗಡೆ ಯಾರನ್ನಾದರೂ ಹೆಸರಿಸು ಅಂದರೆ ಭಯ ಪಡುತ್ತಾರೆ. ಅವರಿಗೆ ತಾವು ಶಿಕ್ಷಕ ಆಗಬೇಕು ಎಂಬ ಆಸೆ. ಈಗಲೂ ತಾವು ಶಿಕ್ಷಕರಾಗಬೇಕು ಎಂದು ಮಾತನಾಡುತ್ತಾರೆ. ಸಾಕಷ್ಟು ತಿಳಿದುಕೊಂಡಿರುವ ವ್ಯಕ್ತಿ. ಬಹಳ ಶ್ರಮ ಜೀವಿ'' ಎಂದಿದ್ದಾರೆ ಅಗ್ನಿ ಶ್ರೀಧರ್.

  ರವಿಚಂದ್ರನ್ ಸಹ ಇದ್ದಾರೆ

  ರವಿಚಂದ್ರನ್ ಸಹ ಇದ್ದಾರೆ

  'ಹೆಡ್ ಬುಷ್' ಸಿನಿಮಾವನ್ನು ಶೂನ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ರಘು ಮುಖರ್ಜಿ ಇದ್ದಾರೆ. ವಿಶೇಷ ಪಾತ್ರದಲ್ಲಿ ನಟ ರವಿಚಂದ್ರನ್ ಸಹ ನಟಿಸಿದ್ದಾರೆ. ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಸಹ ಮಾಡಿದ್ದಾರೆ. ಸಿನಿಮಾದಲ್ಲಿ ಪಾಯಲ್ ರಜಪೂತ್ ಹಾಗೂ ಶ್ರುತಿ ಹರಿಹರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಸಹ. ಸಿನಿಮಾವು ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ.

  English summary
  Shiva Rajkumar was the first choice for Head Bush movie instead of Dali Dhananjay. Story writer Agni Shridhar told in an interview.
  Thursday, October 13, 2022, 19:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X