»   » 'ಮಾಸ್ಟರ್ ಪೀಸ್' 50 ದಿನ ಆದ ಕೂಡಲೇ 'ಶಿವಲಿಂಗ' ಪ್ರತಿಷ್ಠಾಪನೆ

'ಮಾಸ್ಟರ್ ಪೀಸ್' 50 ದಿನ ಆದ ಕೂಡಲೇ 'ಶಿವಲಿಂಗ' ಪ್ರತಿಷ್ಠಾಪನೆ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸಿದ್ದ 'ಮಾಸ್ಟರ್ ಪೀಸ್' ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ಸಂತೋಷ್ ಥಿಯೇಟರ್ ನಲ್ಲಿ ಭರ್ತಿ 50 ದಿನಗಳನ್ನು ಪೂರೈಸಲಿದೆ.

ಇನ್ನು 'ಮಾಸ್ಟರ್ ಪೀಸ್' ಚಿತ್ರ 50 ದಿನ ಪೂರೈಸುತ್ತಿದ್ದಂತೆ ಅದರ ಜಾಗಕ್ಕೆ ಸಂತೋಷ್ ಥಿಯೇಟರ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಸಿನಿಮಾ ಎಂಟ್ರಿ ಆಗಲಿದೆ.[ರಿಲೀಸ್ ಗೂ ಮುನ್ನವೇ ಶಿವಣ್ಣ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್]


ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿರುವ 'ಶಿವಲಿಂಗ' ಚಿತ್ರದಲ್ಲಿ ನಟಿ ವೇದಿಕಾ ಅವರು ಶಿವಣ್ಣ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.


'Shivalinga' to Replace Yash's 'Masterpiece' in Santhosh Theater

ನಿರ್ಮಾಪಕ ಕೆ.ಎ ಸುರೇಶ್ ಬಂಡವಾಳ ಹೂಡಿರುವ 'ಶಿವಲಿಂಗ' ಸಿನಿಮಾ ಈಗಾಗಲೇ ಬಿಡುಗಡೆಗೆ ತಯಾರಾಗಿ ನಿಂತಿದ್ದು, ಡಿಸೆಂಬರ್ ನಲ್ಲಿಯೇ ತೆರೆ ಕಾಣಬೇಕಿತ್ತು. ಆದರೆ ಕೆಲವು ಕಾರಣಗಳಿಂದ ರಿಲೀಸ್ ಆಗುವುದು ಡಿಲೇ ಆಗಿದೆ.


ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ನಟಿ ಊರ್ವಶಿ ಅವರು ಇದೇ ಮೊದಲ ಬಾರಿಗೆ ನಟಿ ವೇದಿಕಾ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ.[250 ಥಿಯೇಟರ್ ಗಳಲ್ಲಿ 25 ದಿನಗಳನ್ನು ಪೂರೈಸಿದ 'ಮಾಸ್ಟರ್ ಪೀಸ್']


ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರಿ ಕುತೂಹಲ ಸೃಷ್ಟಿಸಿರುವ ಚಿತ್ರದಲ್ಲಿ ನಟ ಶಿವಣ್ಣ ಅವರು ಸ್ಪೆಷಲ್ ಸಿ.ಐ.ಡಿ ಪಾತ್ರದಲ್ಲಿ ಸಖತ್ ಸ್ಟೈಲಿಷ್ ಆಗಿ ಕ್ಲಾಸ್ ಲುಕ್ ನಲ್ಲಿ ಮಿಂಚಿದ್ದಾರೆ.

English summary
Kannada Actor Yash starrer 'Masterpiece' is all set to complete 50 days in Santhosh theater. Meanwhile, Shivarajakumar starrer 'Shivalinga' will be replacing 'Masterpiece' in the same theater after the film completes a fifty day run.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada