»   » 'ಶಿವಲಿಂಗ'ಕ್ಕೆ ಪೂಜೆ ಸಲ್ಲಿಸಿದ ನಂತರ 'ವೀರಪ್ಪನ್' ಬೇಟೆ ಶುರು.!

'ಶಿವಲಿಂಗ'ಕ್ಕೆ ಪೂಜೆ ಸಲ್ಲಿಸಿದ ನಂತರ 'ವೀರಪ್ಪನ್' ಬೇಟೆ ಶುರು.!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಚಿತ್ರದ ಟ್ರೈಲರ್ ಸೋರಿಕೆಯಾಗಿರುವ ಹಿನ್ನಲೆಯಲ್ಲಿ ನಿರ್ಮಾಪಕ ಕೆ.ಎ ಸುರೇಶ್ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪಿ ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಶಿವಲಿಂಗ' ಚಿತ್ರದ ಟ್ರೈಲರ್ ಸೋರಿಕೆಯಾಗಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ ಕೆ.ಎ.ಸುರೇಶ್ ಅವರು 'ಇದು ಐದು ದಿನದ ಹಿಂದೆಯೇ ಆಗಿದೆ. ಆದರೆ ನಮ್ಮ ಗಮನಕ್ಕೆ ಬಂದಿದ್ದು ಎರಡು ದಿನಗಳ ಹಿಂದೆ ಅಷ್ಟೆ. ಈ ಅನೈತಿಕ ಕೆಲಸ ಯಾರು ಮಾಡಿರಬಹುದು ಎಂದು ತಿಳಿಯಲು ವಿಚಾರಣೆ ನಡೆಸಲಾಗುತ್ತದೆ' ಎಂದು ಗುಡುಗುತ್ತಾರೆ ನಿರ್ಮಾಪಕರು.[ಸ್ಟೈಲಿಂಗ್ ಸ್ಟಾರ್ ಶಿವಣ್ಣನ, ಭರ್ಜರಿ 'ಶಿವಲಿಂಗ' ಟ್ರೈಲರ್ ಲೀಕ್..!]

Shivanna Starrer 'Shivalinga' will be hit big screen First

'ಮುಂದಿನ ವಾರ ಅಧಿಕೃತವಾಗಿ ಟ್ರೈಲರ್ ಬಿಡುಗಡೆಯಾಗಲಿದ್ದು, ಶುಕ್ರವಾರ (ನವೆಂಬರ್ 27) ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಇನ್ನು ಸಿನಿಮಾದ ಮೊದಲ ಪ್ರತಿ ಸಿದ್ಧವಾಗಿದ್ದು, ಅತೀ ಶೀಘ್ರದಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದೇವೆ' ಎಂದು ನಿರ್ಮಾಪಕ ಸುರೇಶ್ ನುಡಿಯುತ್ತಾರೆ.

ಮೊದಲಿನ ಯೋಜನೆಯಂತೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವಿರಪ್ಪನ್' ನವೆಂಬರ್ ನಲ್ಲಿ ಮತ್ತು 'ಶಿವಲಿಂಗ' ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಕಾಣಬೇಕಿತ್ತು.[ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ, ಅಗ್ನಿಪರೀಕ್ಷೆ! ]

Shivanna Starrer 'Shivalinga' will be hit big screen First

ಆದರೆ ಈಗ 'ಕಿಲ್ಲಿಂಗ್ ವೀರಪ್ಪನ್' ತಡವಾಗುತ್ತಿದ್ದು, ಮೊದಲು 'ಶಿವಲಿಂಗ' ಬಿಡುಗಡೆಯಾಗಲಿದೆ. ನಾವು 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ನಾವು ಮೊದಲೇ ನಿರ್ಧಾರ ತೆಗೆದುಕೊಂಡಂತೆ, ನಾವಂತೂ ಡಿಸೆಂಬರ್ ತಿಂಗಳಿನಲ್ಲಿ 'ಶಿವಲಿಂಗ' ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ನಿರ್ಮಾಪಕರು.[ಶಿವಣ್ಣ ಅವರು ಒಂಥರಾ 'ಬುಲೆಟ್' ಇದ್ದ ಹಾಗೆ ಎಂದವರು ಯಾರು?]

ಒಟ್ನಲ್ಲಿ 'ವೀರಪ್ಪನ್' ಇಲ್ಲದಿದ್ದರೇನಂತೆ, 'ಶಿವಲಿಂಗ' ಇದ್ಯಲ್ಲ, ಅಂತ ಶಿವಣ್ಣ ಅಭಿಮಾನಿಗಳು ಸಮಾಧಾನ ಪಟ್ಟುಕೊಂಡಿದ್ದಾರೆ.

English summary
Shivanna Starrer 'Shivalinga' will be hit big screen First. The movie features Kannada Actor Shiva Rajkumar, Actress Vedika in the lead role. The movie is directed by P.Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada