twitter
    For Quick Alerts
    ALLOW NOTIFICATIONS  
    For Daily Alerts

    ಧನ್ವಿರ್ ಬಳಿಕ ದರ್ಶನ್ ಬೆಂಬಲಕ್ಕೆ ನಿಂತ ಮತ್ತೊಬ್ಬ ಖ್ಯಾತ ನಟ

    |

    ಕಳೆದ ಒಂದು ವಾರದಿಂದ ನಟ ದರ್ಶನ್ ಮೇಲೆ ಆರೋಪಗಳ ಮೇಲೆ ಆರೋಪಗಳು ಕೇಳಿ ಬಂದಿದೆ. ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ, ಸ್ನೇಹಿತರೊಬ್ಬರ ಮೇಲೆ ಹಲ್ಲೆ, ತೋಟದ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಮೇಲೆ ಹಲ್ಲೆ ಹಾಗೂ 25 ಕೋಟಿ ಲೋನ್ ಸಂಬಂಧಿಸಿದ ವಿವಾದ ಹೀಗೆ ಡಿ ಬಾಸ್ ವಿವಾದದ ಕೇಂದ್ರಬಿಂದುವಾಗಿದ್ದರು.

    ನಿರ್ದೇಶಕ-ಪತ್ರಕರ್ತ ಇಂದ್ರಜಿತ್ ಲಂಕೇಶ್ ನೇರಾ-ನೇರ ನಟ ದರ್ಶನ್ ವಿರುದ್ಧ ಸಿಡಿದೆದ್ದರು. ಈ ಬೆಳವಣಿಗೆಯಲ್ಲಿ ನಟ ದರ್ಶನ್ ಪರವಾಗಿ ಯಾರೊಬ್ಬ ಕಲಾವಿದರು ಮಾತನಾಡಿರಲಿಲ್ಲ. ಈಗ ಒಬ್ಬೊಬ್ಬರೇ 'ಯಜಮಾನ'ನ ಪರವಾಗಿ ಬೆಂಬಲ ಸೂಚಿಸುತ್ತಿದ್ದಾರೆ. ಯುವ ಧನ್ವೀರ್ ಫೇಸ್‌ಬುಕ್‌ನಲ್ಲಿ ದಾಸನ ಪರ ನಿಲುವು ವ್ಯಕ್ತಪಡಿಸಿದ್ದರು. ಇದೀಗ, ಕನ್ನಡದ ಖ್ಯಾತ ಹಾಸ್ಯ ನಟ ಶಿವರಾಜ್ ಕೆಆರ್ ಪೇಟೆ ಸಹ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಮುಂದೆ ಓದಿ...

    ಕಲಾವಿದರು ಅವಿದ್ಯಾವಂತರೇ?

    ಕಲಾವಿದರು ಅವಿದ್ಯಾವಂತರೇ?

    ''ಹುಟ್ಟು ಹಠಮಾರಿಯೊಬ್ಬ

    ಕವಿಯಾಗಲು ಪಣತೊಟ್ಟು

    ನಿತ್ಯ ಪದಭೇದಿಯಲ್ಲಿ ಬಳಲಿ

    ಹಲ್ಲು ಕಡಿಯುತ್ತಿದ್ದಾಗ

    ವಸಂತದ ಮಾವಿನ ಮರ

    ಕೋಗಿಲೆ ಕಂಠದಲ್ಲಿ ಹಾಡಿ

    ತನಗೇ ಗೊತ್ತಿಲ್ಲದೇ

    ಕವಿಯಾಯಿತು

    ಪಿ.ಲಂಕೇಶ್ (ನೀಲು ಕಾವ್ಯ)

    ಲಂಕೇಶ್ ಅವರ ಈ ಪದ್ಯ ಹೇಳುವಂತೆ, ಪತ್ರಕರ್ತನಾಗಲೂ ಹೆಣಕಾಡುತ್ತಿರುವ ವ್ಯಕ್ತಿಯೊಬ್ಬರು ನಟರನ್ನ ಅವಿದ್ಯಾವಂತರು ಎಂದು ಘೋಷಿಸಿದ್ದಾರೆ. ವಿದ್ಯೆ ಎಂಬುದು ಅಕಾಡೆಮಿಗಳು ನೀಡುವ ಸರ್ಟಿಫಿಕೇಟುಗಳಲ್ಲೇ ಇರುತ್ತವೆ ಎಂದು ನಂಬಿಕೊಂಡವರ ಹಣೆಬರಹವೇ ಇಷ್ಟು. ಇದಕ್ಕೆ ಉತ್ತರ ಲಂಕೇಶರ ಪದ್ಯದಲ್ಲಿಯೇ ಇದೆ.'' ಎಂದು ಲಂಕೇಶ್ ಪದ್ಯದ ಮೂಲಕವೇ ಇಂದ್ರಜಿತ್‌ಗೆ ಶಿವರಾಜ್ ಕೆಆರ್ ಪೇಟೆ ತಿರುಗೇಟು ನೀಡಿದ್ದಾರೆ.

    ದರ್ಶನ್ ಅವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗಲ್ಲ; ಡಿ ಬಾಸ್ ಪರ ನಿಂತ ಧನ್ವೀರ್ದರ್ಶನ್ ಅವರನ್ನು ಕುಗ್ಗಿಸೋ ಆಯುಧ ಎಲ್ಲೂ ಸಿಗಲ್ಲ; ಡಿ ಬಾಸ್ ಪರ ನಿಂತ ಧನ್ವೀರ್

    ಎದುರಿಸಿ ನಿಲ್ಲೋ ಶಕ್ತಿ ದರ್ಶನ್‌ಗಿದೆ

    ಎದುರಿಸಿ ನಿಲ್ಲೋ ಶಕ್ತಿ ದರ್ಶನ್‌ಗಿದೆ

    ''ಅಂದ ಹಾಗೇ ನೇರ ನುಡಿ, ನೇರ ನಡೆ ರೂಢಿಸಿಕೊಂಡ ವ್ಯಕ್ತಿಯೊಬ್ಬರು ಈ ನಾಟಕೀಯ ಜಗತ್ತಿನಲ್ಲಿ, ತನ್ನ ರೀತಿಯಲ್ಲಿಯೇ ಬದುಕಬೇಕು ಎಂದು ಹೊರಟಾಗ ವಿವಾದಗಳು ಸುತ್ತಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೂ ಇಂತಹವುಗಳನ್ನೆಲ್ಲಾ ಎದುರಿಸಿ ನಿಲ್ಲೋ ಶಕ್ತಿ ದರ್ಶನ್ ಸರ್ ಗಿದೆ. ಅವರ ಅಸಂಖ್ಯಾ ಅಭಿಮಾನಿಗಳ ಹಾರೈಕೆಯು ಅವರೊಂದಿಗಿದೆ. ಕೊನೆಯದಾಗಿ ಪಿ.ಲಂಕೇಶ ಅವರ ಮತ್ತೊಂದು ಪದ್ಯವೊಂದು ಈ ಸಂದರ್ಭಕ್ಕೂ ಸರ್ವ ಕಾಲಕ್ಕೂ ಸಲ್ಲುವಂತೆ ಇದೆ. ದಯವಿಟ್ಟು ಓದಿಕೊಳ್ಳಿ'' ಎಂದು ಫೇಸ್‌ಬುಕ್‌ನಲ್ಲಿ ಶಿವರಾಜ್ ಕೆಆರ್ ಪೇಟೆ ಬರೆದುಕೊಂಡಿದ್ದಾರೆ.

    ನಮ್ಮಿಚ್ಚೆ ಇದ್ದಂತೆ ಬದುಕುವುದೇ ನಿಜವಾದ ಬದುಕು

    ನಮ್ಮಿಚ್ಚೆ ಇದ್ದಂತೆ ಬದುಕುವುದೇ ನಿಜವಾದ ಬದುಕು

    ''ಎಲ್ಲರನ್ನೂ ಮೆಚ್ಚಿಸುವಂತೆ

    ಬದುಕುವ ಕಲೆಯನ್ನು

    ನೀನು ರೂಢಿಸಿಕೊಂಡ ದಿನವೇ

    ನಿನ್ನ ಕೊನೆಯ ದಿನವಾಗುವುದು

    -ಪಿ.ಲಂಕೇಶ
    ಯಾರನ್ನೋ ಮೆಚ್ಚಿಸಲು ಬದುಕುವುದಕ್ಕಿಂತ ನಮ್ಮಿಚ್ಚೆ ಇದ್ದಂತೆ ಬದುಕುವುದೇ ನಿಜವಾದ ಬದುಕು. ಅದಕ್ಕೆ ಉದಾಹರಣೆ ಎಂದರೆ ದರ್ಶನ್ ಸರ್'' ಎಂದು ಬೆಂಬಲಕ್ಕೆ ನಿಂತಿದ್ದಾರೆ ಶಿವರಾಜ್ ಕೆಆರ್ ಪೇಟೆ.

    Recommended Video

    ಡಾ.ರಾಜ್ ಬರೆದ ಒಂದೇ ಪತ್ರಕ್ಕೆ ರವಿಚಂದ್ರನ್ ವಿರುದ್ಧ ಪ್ರತಿಭಟನೆ ಕೈಬಿಟ್ಟ ಕನ್ನಡಿಗರು | Filmibeat Kannada
    ದರ್ಶನ್ ಬೆಂಬಲಕ್ಕೆ ನಿಂತ ಧನ್ವೀರ್

    ದರ್ಶನ್ ಬೆಂಬಲಕ್ಕೆ ನಿಂತ ಧನ್ವೀರ್

    "ನನ್ನ ಪ್ರೀತಿ, ನಂಬಿಕೆ, ಸ್ಫೂರ್ತಿಗೆ ಇನ್ನೊಂದು ಹೆಸರು ಡಿ ಬಾಸ್. ನಾನು ಚಿತ್ರೋದ್ಯಮಕ್ಕೆ ಬರುವ ಮೊದಲಿನಿಂದಲೂ ಡಿ ಬಾಸ್ ಅಭಿಮಾನಿ. ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಿಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ. ಇಂತಹ ನೂರಾರು ಗುಣಗಳಿರುವ ನನ್ನಂತ ಅಭಿಮಾನಿಗಳಿಗೆ ಸ್ಫೂರ್ತಿಯಾಗಿ ನಿಂತಿರುವ ಬೃಹತ್ ಶಿಖರ ಡಿ ಬಾಸ್'' ಎಂದು ಧನ್ವೀರ್ ಪೋಸ್ಟ್ ಹಾಕಿದ್ದಾರೆ.

    English summary
    Kannada Comedy actor Shivaraj KR Pete has react about Darshan controversy.
    Tuesday, July 20, 2021, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X