»   » ಹೊಸ ದಾಖಲೆ ನಿರ್ಮಿಸಿದ ಶಿವಣ್ಣ ಚಿತ್ರ 'ಭಜರಂಗಿ'

ಹೊಸ ದಾಖಲೆ ನಿರ್ಮಿಸಿದ ಶಿವಣ್ಣ ಚಿತ್ರ 'ಭಜರಂಗಿ'

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 105ನೇ ಚಿತ್ರ 'ಭಜರಂಗಿ' ಹೊಸ ದಾಖಲೆ ನಿರ್ಮಿಸಿದೆ. ದಾಖಲೆ ಸಂಖ್ಯೆಯಲ್ಲಿ ಚಿತ್ರದ ಡಿವಿಡಿಗಳು ಮಾರಾಟವಾಗಿವೆ. ಇದುವರೆಗೂ 40,000 ಗಡಿ ದಾಟಿವೆ 'ಭಜರಂಗಿ' ಚಿತ್ರದ ಡಿವಿಡಿಗಳು.

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಅತ್ಯಧಿಕವಾಗಿ ಮಾರಾಟವಾದ ಕನ್ನಡ ಡಿವಿಡಿ ಇದಾಗಿದೆ. ಭಜರಂಗಿ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು. ಉತ್ತಮ ವಿಮರ್ಶೆಗೂ ಪಾತ್ರವಾದ ಈ ಚಿತ್ರ ಫಿಲಂಫೇರ್ ಪ್ರಶಸ್ತಿಗೂ ಭಾಜನವಾಗಿದೆ. [ಭಜರಂಗಿ ಚಿತ್ರ ವಿಮರ್ಶೆ]

Shivaraj Kumar's Bhajarangi DVD Sales Crossed 40,000

ವಿಶೇಷ ಎಂದರೆ ಭಜರಂಗಿ ಚಿತ್ರದ ಆಡಿಯೋ ಸಿಡಿಗಳು ಸಹ ಈ ಮಟ್ಟದಲ್ಲಿ ಮಾರಾಟವಾಗಿಲ್ಲ ಎಂಬುದು. ಪೈರಸಿ ಎಂಬ ಪೆಡಂಭೂತದ ನಡುವೆಯೂ ಭಜರಂಗಿ ಚಿತ್ರದ ಡಿವಿಡಿಗಳು ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿರುವುದು ಚಿತ್ರೋದ್ಯಮಕ್ಕೆ ಹೊಸ ಹುಮ್ಮಸ್ಸನ್ನು ನೀಡಿದೆ.

ತಮ್ಮ 52ರ ಹರೆಯದಲ್ಲೂ ಶಿವಣ್ಣನ ಹೊಸ ಹುರುಪು, ಉತ್ಸಾಹವನ್ನು 'ಭಜರಂಗಿ' ಚಿತ್ರದಲ್ಲಿ ಕಾಣಬಹುದು. ಎಲ್ಲೂ ಅವರ ಪಾತ್ರ ಪೇಲವವಾಗಿ ಕಾಣದಂತೆ ನಿರ್ದೇಶಕರು ತೆರೆಯ ಮೇಲೆ ತೋರಿಸಿದ್ದಾರೆ. ಒಟ್ಟಾರೆಯಾಗಿ ಶಿವಣ್ಣ ಅಭಿಮಾನಿಗಳಿಗೆ 'ಜೋಗಿ' ದಿನಗಳನ್ನು ನೆನಪಿಸುತ್ತದೆ ಭಜರಂಗಿ.

ಇನ್ನು ಈ ಚಿತ್ರದಲ್ಲಿ ಶಿವಣ್ಣ ಸಿಕ್ಸ್ ಪ್ಯಾಕ್ ತೋರಿಸಿ ಅಭಿಮಾನಿಗಳ ಶಿಳ್ಳೆ ಗಿಟ್ಟಿಸುತ್ತಾರೆ. ಒಂದು ಮಾಸ್ ಸಿನಿಮಾಗೆ ಏನು ಬೇಕೋ ಅಷ್ಟೂ ಅಂಶಗಳು ಚಿತ್ರದಲ್ಲಿದ್ದು ನೀಟಾಗಿ ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಎ.ಹರ್ಷ. 2014ರಲ್ಲಿ ಶತಕ ಪೂರೈಸಿದ ಮೊದಲ ಚಿತ್ರದ ಎಂಬ ಖ್ಯಾತಿಗೂ ಚಿತ್ರ ಪಾತ್ರವಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Hat-trick hero Shivaraj Kumar has a reason to smile again. His super hit movie Bhajarangi created a record sales with the DVD release. By the end of last week the DVD sales of the movie managed to cross the 40,000 mark.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada