»   » ಪದ್ಮಾವತಿ ಪರನಿಂತ ಶಿವಣ್ಣ ವಿರುದ್ದ ತಿರುಗಿಬಿದ್ರು

ಪದ್ಮಾವತಿ ಪರನಿಂತ ಶಿವಣ್ಣ ವಿರುದ್ದ ತಿರುಗಿಬಿದ್ರು

Posted By:
Subscribe to Filmibeat Kannada

'ಪದ್ಮಾವತಿ'.... ಸದ್ಯ ವಿವಾದದ ಕೇಂದ್ರಬಿಂದುವಾಗಿರೋ ಸಿನಿಮಾ. ಎಲ್ಲೆಡೆ ಸಿನಿಮಾ ಬಿಡುಗಡೆಯಾಗದಂತೆ ತಡೆಯಲು ಪ್ರತಿಭಟನೆಗಳು ನಡೆಯುತ್ತಲೇ ಇದೆ. ಸಾಮಾನ್ಯವಾಗಿ ಪ್ರಾರಂಭವಾದ ವಿವಾದ ಉಗ್ರರೂಪ ತಾಳಿ ಸಿನಿಮಾತಂಡ ಮುಂದೇನು ಮಾಡಬೇಕು ಅನ್ನೋದನ್ನ ನಿರ್ಧಾರ ಮಾಡಲಾರದೆ ಕೈಕಟ್ಟಿ ಕೂರುವಂತೆ ಮಾಡಿದೆ.

'ಪದ್ಮಾವತಿ' ಸಿನಿಮಾದ ವಿವಾದ ಪ್ರಾರಂಭವಾಗುತ್ತಿದ್ದಂತೆಯೇ ಇಡೀ ಭಾರತೀಯ ಚಿತ್ರರಂಗ 'ಪದ್ಮಾವತಿ' ಸಿನಿಮಾ ಪರವಾಗಿ ನಿಂತು ಮಾತನಾಡಿತ್ತು. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಾಗಿರಲಿಲ್ಲ.

ಕನ್ನಡದ ಅನೇಕ ಸ್ಟಾರ್ ಗಳು ಕನ್ನಡದ ನಟಿ ದೀಪಿಕಾ ಪರವಾಗಿ ನಾವಿದ್ದೇವೆ ಎಂದು ಧೈರ್ಯ ತುಂಬಿತ್ತು. ನಮ್ಮ ನೆಲದ ನಟಿಗೆ ನಮ್ಮ ಸ್ಟಾರ್ ಗಳು ಪರವಹಿಸಿದ್ದೇ ಈಗ ವಿವಾದಕ್ಕೆ ಎಡೆಯಾಗಿದೆ.

ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಪದ್ಮಾವತಿ ಸಿನಿಮಾ ಬಗ್ಗೆ ನೀಡಿದ್ದ ಹೇಳಿಕೆಗೆ ಅನೇಕರು ಕೆಂಡಮಂಡಲವಾಗಿದ್ದಾರೆ. ಮುಂದೆ ಓದಿರಿ....

ಶಿವಣ್ಣನ ಮೇಲೆ ಗರಂ ಆದ ರಜಪೂತರು

ಡಿಸೆಂಬರ್ 1 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿರೋ 'ಮಫ್ತಿ' ಸಿನಿಮಾದ ಸುದ್ದಿಗೋಷ್ಟಿಯಲ್ಲಿ 'ಪದ್ಮಾವತಿ' ಸಿನಿಮಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉತ್ತರಿಸಿದ್ರು. ತಮ್ಮ ಅಭಿಪ್ರಾಯವನ್ನ ಮುಕ್ತವಾಗಿ ಹೇಳಿದ್ರು. ಈಗ ಅದೇ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.

ಬಾಲಿವುಡ್ 'ಪದ್ಮಾವತಿ' ಬಗ್ಗೆ ಸ್ಯಾಂಡಲ್ ವುಡ್ 'ಪದ್ಮಾವತಿ' ಹೇಳಿದ್ದೇನು?

ಅಂಥದ್ದೇನಿದೆ ಹೇಳಿಕೆಯಲ್ಲಿ.?

ಕಲಾವಿದರನ್ನ ಟಾರ್ಗೆಟ್ ಮಾಡಬಾರದು. ದೀಪಿಕಾ ಅಭಿನಯ ಅದ್ಭುತ ಅನಿಸುತ್ತೆ, ಸಂಜಯ್ ಲೀಲಾ ಬನ್ಸಾಲಿ ಒಳ್ಳೆ ಸಿನಿಮಾ ಮಾಡಿರುತ್ತಾರೆ ಅನ್ನೋ ನಂಬಿಕೆ ಇದೆ, ರಿಲೀಸ್ ಗೂ ಮೊದಲು ಚಿತ್ರದ ಬಗ್ಗೆ ನಿರ್ಧಾರ ಮಾಡೋದು ಸರಿಯಲ್ಲ. ಈ ರೀತಿ ಮಾಡೋದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗುತ್ತೆ ಎಂದು ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯವನ್ನ ತಿಳಿಸಿದ್ರು.

ಶಿವಣ್ಣನ ಮೇಲೆ ಗರಂ ಆದ ರಜಪೂತರು

ಸದ್ಯ ಈ ಹೇಳಿಕೆಗೆ ಫೇಸ್ ಬುಕ್ ನಲ್ಲಿ ತೀರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅನೇಕ ರಜಪೂತರು ಶಿವರಾಜ್ ಕುಮಾರ್ ಹೇಳಿಕೆ ಹಾಗೂ ಅವರ ಅಭಿನಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡಿರುವ ಶಿವಣ್ಣನ ಅಭಿಮಾನಿಗಳು ನಾವು 'ಪದ್ಮಾವತಿ' ಸಿನಿಮಾಗೆ ಬೆಂಬಲಿಸುತ್ತೇವೆ ಏನು ಬೇಕಿದ್ದರೂ ಮಾಡಿಕೊಳ್ಳಿ ಎಂದು ಕಾಮೆಂಟ್ ಹಾಕಿದ್ದಾರೆ.

ಉಗ್ರರೂಪ ತಾಳಿದ 'ಪದ್ಮಾವತಿ' ಚಿತ್ರದ ವಿರುದ್ಧ ಪ್ರತಿಭಟನೆ

ಸಿನಿಮಾ ಸ್ವಾತಂತ್ರಕ್ಕೆ ಧಕ್ಕೆ

ದೀಪಿಕಾ ಅದ್ಭುತ ಕಲಾವಿದೆ. ಅಷ್ಟೇ ಅಲ್ಲದೆ ಬೆಂಗಳೂರು ಮೂಲದ ನಾಯಕಿ. ಸಂಜಯ್ ಲೀಲಾ ಬನ್ಸಾಲಿ ಐತಿಹಾಸಿಕ ಹಿನ್ನಲೆ ಹೊಂದಿರೋ ಸಾಕಷ್ಟು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಎಂದಿಗೂ ರಾಜಕೀಯ ಪ್ರವೇಶ ಮಾಡಬಾರದು. ಸದ್ಯ ಪದ್ಮಾವತಿ ಸಿನಿಮಾಗೆ ರಾಜಕೀಯ ಪ್ರವೇಶವಾಗಿರೋದ್ರಿಂದ ಇಷ್ಟೆಲ್ಲಾ ವಿವಾದವಾಗ್ತಿದೆ ಅನ್ನೋದು ಅನೇಕರ ಮಾತು.

'ಪದ್ಮಾವತಿ' ವಿವಾದ ಬಗೆಹರಿಸಲಿದ್ದಾರೆ ಈ 'ಮಾಸ್ಟರ್ ಮೈಂಡ್' ಲೇಡಿ.!

English summary
Shiva RajKumar's statement on 'Padmavathi' cinema has now led to controversy. ಪದ್ಮಾವತಿ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada