»   » ಅಂದರ್ ಬಾಹರ್ ಡೈರೆಕ್ಟರ್ ಮೇಲೆ ಶಿವಣ್ಣ ಅಪ್ಸೆಟ್

ಅಂದರ್ ಬಾಹರ್ ಡೈರೆಕ್ಟರ್ ಮೇಲೆ ಶಿವಣ್ಣ ಅಪ್ಸೆಟ್

Posted By:
Subscribe to Filmibeat Kannada

ಶಿವರಾಜ್ ಕುಮಾರ್, ಪಾರ್ವತಿ ಮೆನನ್ ಮುಖ್ಯ ಭೂಮಿಕೆಯಲ್ಲಿರುವ 'ಅಂದರ್ ಬಾಹರ್' ಚಿತ್ರದ ಟಾಕೀ ಪೋರ್ಷನ್ ತಡವಾಗುತ್ತಿರುವುದು ಏನಕ್ಕೆ ಎಂದು ಕಾರಣ ಹುಡುಕ ಹೊರಟರೆ ಅದು ನಿರ್ದೇಶಕರಿಂದ ಎಂದು ಬೊಟ್ಟು ಮಾಡಲಾಗುತ್ತಿದೆ.

ಅಂದರ್ ಬಾಹರ್ ಚಿತ್ರ ಯಾಕೋ ಮುಗಿಯುವ ಹಾಗೆ ಕಾಣುತ್ತಿಲ್ಲ. ನಿರ್ದೇಶಕ ಪಣೀಶ್ ರಾಮನಾಥಪುರ ಅಂದುಕೊಂಡಂತೇ ಶೂಟ್ ಮಾಡಿದ್ದರೆ ಇದೇ ತಿಂಗಳ ಇಪತ್ತರ ಒಳಗೆ ಟಾಕೀ ಪೋರ್ಷನ್ ಮುಗಿಸಬೇಕಿತ್ತು.

ಆದರೆ ಅದು ಇನ್ನೂ ಮುಗಿದಿಲ್ಲ. ಇನ್ನೂ ಒಂದಷ್ಟು ದೃಶ್ಯಗಳು ಹಾಗೇ ಬಾಕಿ ಉಳಿದಿದೆ. ನಿರ್ದೇಶಕ ಪಣೀಶ್ ಶೂಟಿಂಗ್ ಎಳೆದೆಳೆದು ಮಾಡುತ್ತಿದ್ದಾರೆ ಎನ್ನುವುದು ಶಿವಣ್ಣನಿಗೆ ಬೇಸರ ತಂದಿದೆ ಎಂಬ ಸುದ್ದಿಯಿದೆ.

Shivaraj Kumar upset with Andar Bahar Director

ಶಿವಣ್ಣ ಅಪ್ಸೆಟ್ ಆಗಲು ಕಾರಣ ಇಲ್ಲದಿಲ್ಲ, ಈಗಾಗಲೇ ಅವರು 'ಭಜರಂಗಿ' ಚಿತ್ರಕ್ಕೆ ಕಮಿಟ್ ಆಗಿದ್ದಾರೆ. ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರ ಶೂಟಿಂಗ್ ಬೇರೆ ನಡೆಯುತ್ತಿದೆ. ಪಣೀಶ್‍ಗೆ ಜೊತೆಗೆ ಇದು ಶಿವಣ್ಣನ ಮೊದಲ ಚಿತ್ರ ಮತ್ತು ನಿರ್ದೇಶನದಲ್ಲಿ ಅವರು ದೊಡ್ಡಮಟ್ಟದಲ್ಲಿ ಪಳಗಿಲ್ಲ.

ಶಿವಣ್ಣನ ಕಾಲ್‍ಶೀಟ್ ಇಟ್ಟುಕೊಂಡು ಹಿಂದೆ ಮುಂದೆ ನೋಡುತ್ತಾ ಹೋದರೆ ಮುಂದೆ ಕಷ್ಟವಾಗುತ್ತದೆ. ಏಕೆಂದರೆ ಶಿವಣ್ಣನಿಗೆ ಕೋಪ ಬರುವುದೇ ಕಡಿಮೆ. ಅವರು ಹಿಂದೆ ಮೈಲಾರಿ ಚಿತ್ರದ ಶೂಟಿಂಗ್ ಟೈಮಲ್ಲಿ ಸಿಕ್ಕಾಪಟ್ಟೆ ಎಳೆದೆಳೆದು ಶೂಟಿಂಗ್ ಮಾಡುತ್ತಿದ್ದರು ಎಂದು ನಿರ್ದೇಶಕ ಚಂದ್ರು ಮೇಲೆ ಕೊಂಚ ಬೇಸರ ಮಾಡಿಕೊಂಡಿದ್ದರು.

ಕ್ಲಾರಿಟಿ ಇಲ್ಲದೇ ಯಾಕೆ ಶೂಟ್ ಮಾಡುತ್ತಾರೋ ಗೊತ್ತಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು. ಅಂದರ್ ಬಾಹರ್ ವಿಚಾರದಲ್ಲೂ ಹಾಗೆ ಆಗದಿರಲಿ ಎನ್ನುವುದು ನಿರ್ದೇಶಕ ಪಣೀಶ್ ಗಮನಕ್ಕೆ ಬಂದರೆ ಸಾಕು ಅನ್ನುತ್ತಿದೆ ಚಿತ್ರತಂಡ.

ಒಟ್ಟು ಐದು ಜನ ಸೇರಿ ನಿರ್ಮಿಸುತ್ತಿರುವ ಅಂದರ್ ಬಾಹರ್ ಚಿತ್ರಕ್ಕೆ ಸಂಗೀತ ನೀಡಿದವರು ವಿಜಯ್ ಪ್ರಕಾಶ್, ಫೋಟೋಗ್ರಫಿ ಶೇಖರ್ ಚಂದ್ರು ಅವರದ್ದು. ಶಶಿ ಕುಮಾರ್ ಮತ್ತು ಅರುಂಧತಿ ನಾಗ್ ಉಳಿದ ಪ್ರಮುಖ ತಾರಾಗಣದಲ್ಲಿದ್ದಾರೆ.

ಅಂದರ್ ಬಾಹರ್ ಚಿತ್ರದ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Hatrick Hero Shivaraj Kumar upset with Director Phaneesh Ramanathapura for slow progress of shooting of his film 'Andar Bahar'.
Please Wait while comments are loading...