»   » ಹೊಸ ದಾಖಲೆಗೆ 'ಓಂ'ಕಾರ ಹಾಕಿದ ಸೆಂಚುರಿ ಸ್ಟಾರ್

ಹೊಸ ದಾಖಲೆಗೆ 'ಓಂ'ಕಾರ ಹಾಕಿದ ಸೆಂಚುರಿ ಸ್ಟಾರ್

Posted By:
Subscribe to Filmibeat Kannada

ಈ ಗುರುವಾರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಶುಭ ವಾರ. ಯಾಕಂದ್ರೆ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ 'ಓಂ' ಸಿನಿಮಾ 551ನೇ ಬಾರಿ ಈ ವಾರ ತೆರೆಗೆ ಅಪ್ಪಳಿಸುತ್ತಿದೆ.

ಹೊಚ್ಚ ಹೊಸ ಕಾಪಿ ಮತ್ತು 5.1 ಡಿಜಿಟಲ್ ಸರೌಂಡ್ ಸೌಂಡ್ ನೊಂದಿಗೆ 'ಓಂ' ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಮೂವೀಲ್ಯಾಂಡ್, ಮಾಗಡಿ ರೋಡ್ ನ ವೀರೇಶ್, ನವರಂಗ್ ಸೇರಿದಂತೆ ಕರ್ನಾಟಕದಾದ್ಯಂತ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಓಂ' ತೆರೆ ಕಾಣುತ್ತಿದೆ.

Shivarajkumar's Blockbuster Om to release in 100+ theatres

ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳ ಜೊತೆ ಪಿ.ವಿ.ಆರ್, ಐನಾಕ್ಸ್, ಗೋಪಾಲನ್ ಸಿನಿಮಾಸ್, ಸಿನೆಪೊಲಿಸ್, ಕಾರ್ನಿವಲ್ ಸಿನಿಮಾಸ್, ಸಿನೆಮ್ಯಾಕ್ಸ್, ವಿಷನ್ ಸಿನೆಮಾಸ್, ಬಿಗ್ ಸಿನಿಮಾಸ್ ಸೇರಿದಂತೆ ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲೂ 'ಓಂ' ಪ್ರದರ್ಶನವಾಗಲಿದೆ. [551ನೇ ಬಾರಿ ರೀ ರಿಲೀಸ್ ಆಗುತ್ತಿದೆ ಬ್ಲಾಕ್ ಬಸ್ಟರ್ 'ಓಂ']

ಈಗಾಗಲೇ, ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ರವರ ಬೃಹತ್ ಕಟೌಟ್ ಹಾಕಲಾಗಿದೆ. ಅದಕ್ಕೆ ದೊಡ್ಡ ದೊಡ್ಡ ಹೂವಿನ ಹಾರಗಳು ಮತ್ತು ಹಾಲಿನ ಅಭಿಶೇಕ ಮಾಡುವ ಕಾರ್ಯಕ್ರಮವನ್ನ ಇದೇ ಗುರುವಾರ 'ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ' ಹಮ್ಮಿಕೊಂಡಿದೆ.

Shivarajkumar's Blockbuster Om to release in 100+ theatres

ಇಪತ್ತು ವರ್ಷಗಳ ಹಿಂದೆ, ಅಂದ್ರೆ, 1995 ರಲ್ಲಿ 'ಓಂ' ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಿದ್ದಾಗ ಇದ್ದ ಸಡಗರಕ್ಕಿಂತ ಈಗಿರುವ ಸಂಭ್ರಮ ದುಪ್ಪಟ್ಟು. ಈಗಾಗಲೇ HD ಕ್ವಾಲಿಟಿಯಲ್ಲಿ ರಿಲೀಸ್ ಆಗಿರುವ 'ಓಂ' ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ದೋಸೆಯಂತೆ ಸೇಲ್ ಆಗಿದೆ. [ಶಿವಣ್ಣನ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ]

Shivarajkumar's Blockbuster Om to release in 100+ theatres

ಆಗಲೇ ದಾಖಲೆಗಳ ಸರಮಾಲೆ ಸೃಷ್ಟಿಸಿರುವ 'ಓಂ' ಚಿತ್ರ ಈ ಬಾರಿ ಮತ್ತೊಂದು ಹಿಸ್ಟ್ರಿ ಕ್ರಿಯೇಟ್ ಮಾಡಿದ್ರೆ, ಖಂಡಿತ ಅಚ್ಚರಿ ಪಡಬೇಕಿಲ್ಲ. ಎಷ್ಟೇ ಆಗಲಿ, 'ಓಂ' ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ, ಶಿವಣ್ಣ ಮೊದಲ ಬಾರಿ 'ಲಾಂಗ್' ಹಿಡಿದ ಚಿತ್ರ ಅಲ್ವಾ..!? (ಫಿಲ್ಮಿಬೀಟ್ ಕನ್ನಡ)

English summary
Hattrick Hero Shivarajkumar's Blockbuster movie OM is all set to re-release this Thursday (March 12th). With the record of 551st re-release, OM is releasing in 100+ theatres all over Karnataka with the New 5.1 Digital surround sound technology.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada