For Quick Alerts
  ALLOW NOTIFICATIONS  
  For Daily Alerts

  ಸಪ್ತಪದಿ ತುಳಿದ ಶಿವರಾಜ್ ಕುಮಾರ್ ಪುತ್ರಿ ನಿರುಪಮ

  By Harshitha
  |

  ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಮೊಮ್ಮಗಳು, ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಅವರ ಮಗಳು ಡಾ.ನಿರುಪಮ ಅವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. [ಶಿವರಾಜ್ ಕುಮಾರ್ ಮಗಳ ಮದುವೆ ನೋಡಿ LIVE]

  ಇಂದು ಬೆಳಗ್ಗೆ 9.30-10 ಗಂಟೆವರೆಗೆ ಇದ್ದ ಮುಹೂರ್ತದಲ್ಲಿ ಡಾ.ನಿರುಪಮ ಡಾ.ದಿಲೀಪ್ ಅವರ ಕೈ ಹಿಡಿದಿದ್ದಾರೆ. ಆ ಮೂಲಕ ಇಬ್ಬರ ಎಂಟು ವರ್ಷಗಳ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. [ಡಾ.ಶಿವರಾಜ್ ಕುಮಾರ್ ಅಳಿಯ ಡಾ.ದಿಲೀಪ್ ಕುರಿತು...]

  ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಇಂದ್ರ ಲೋಕವೇ ಧರೆಗಿಳಿದ ವೈಭವ ಇತ್ತು. ಇಬ್ಬರ ಗಟ್ಟಿಮೇಳಕ್ಕಾಗಿ ಅದ್ದೂರಿ ಮಂಟಪ ಸಿದ್ಧವಾಗಿತ್ತು. [ದೊಡ್ಮನೆ ಮೊಮ್ಮಗಳಿಗೆ ಬಳೆ ತೊಡಿಸುವ ಶಾಸ್ತ್ರದ ಚಿತ್ರಗಳು]

  ಸಂಪ್ರದಾಯ ಬದ್ಧವಾಗಿ ವರ ಕಾಶಿ ಯಾತ್ರೆ ಮತ್ತು ವಧು ಗೌರಿ ಪೂಜೆ ಮುಗಿಸಿದ ಬಳಿಕ ಹಸೆ ಮಣೆ ಏರಿದರು. ಗುರು ಹಿರಿಯರ ಸಮ್ಮುಖದಲ್ಲಿ ಡಾ.ದಿಲೀಪ್ ಮತ್ತು ಡಾ.ನಿರುಪಮ ಸಪ್ತಪದಿ ತುಳಿದರು. [ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

  ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿಜಯ್ ರಾಘವೇಂದ್ರ, ಹಿರಿಯ ನಟಿ ಅಂಬಿಕಾ, ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ, ಸುಧಾರಾಣಿ, ವೇದಿಕಾ, ಕಾಲಿವುಡ್ ನಟ ಪ್ರಭು ಸೇರಿದಂತೆ ಹಲವಾರು ಗಣ್ಯರು ಡಾ.ನಿರುಪಮ-ಡಾ.ದಿಲೀಪ್ ಮದುವೆಗೆ ಸಾಕ್ಷಿಯಾದರು.

  English summary
  Kannada Actor Shivarajkumar Daughter Dr.Nirupama has tied knot with Dr.Dileep today (August 31st) in Palace Grounds, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X