Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿವಣ್ಣನ ಚಿಕ್ಕ ಮಗಳಿಂದ 5 ವೆಬ್ ಸಿರೀಸ್: ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಬಿಗ್ ಸರ್ಪ್ರೈಸ್!
ಶಿವರಾಜ್‌ಕುಮಾರ್ 125ನೇ ಸಿನಿಮಾ ಬಿಡುಗಡೆ ಸಜ್ಜಾಗಿ ನಿಂತಿದೆ. ಇನ್ನೊಂದು ವಾರದಲ್ಲಿ ಹ್ಯಾಟ್ರಿಕ್ ಹೀರೊ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಈಗಾಗಲೇ 'ವೇದ' ಸಿನಿಮಾದ ಹಾಡುಗಳು ಹಾಗೂ ಥೀಮ್ ಟೀಸರ್‌ಗಳು ಸಿನಿಪ್ರಿಯರ ಮನಗೆದ್ದಿವೆ.
'ವೇದ' ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರ ಗೀತಾ ಆರ್ಟ್ಸ್ ಸಂಸ್ಥೆಯಲ್ಲಿ ನಿರ್ಮಾಣಗೊಂಡಿರೋ ಮೊದಲ ಸಿನಿಮಾ. ಹೀಗಾಗಿ ಈ ಸಿನಿಮಾದ ಮೇಲೆ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ರಕ್ಷಿತಾ
ಪ್ರೇಮ್
ಸಲಹೆ
ಮೇರೆಗೆ
ಕೊರಗಜ್ಜನ
ಸನ್ನಿಧಿಗೆ
ಭೇಟಿ
ನೀಡಿದ
ಶಿವಣ್ಣ:
ಎಲ್ಲ
ದೈವ
ಇಚ್ಛೆ
ಎಂದ
ಸೆಂಚುರಿಸ್ಟಾರ್!
'ವೇದ' ಚಿತ್ರದ ಮೂಲಕ ಗೀತಾ ಶಿವರಾಜ್‌ಕುಮಾರ್ ನಿರ್ಮಾಪಕಿಯಾದರೆ, ಇತ್ತ ಚಿಕ್ಕ ಮಗಳು ನಿವೇದಿತಾ ಕೂಡ ವೆಬ್ ಸಿರೀಸ್ ನಿರ್ಮಾಣಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ವೆಬ್ ಸಿರೀಸ್ ನಿರ್ಮಾಣ ಮಾಡಿ ಅನುಭವವಿರುವ ನಿವೇದಿತಾ ತಂದೆಯ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

'ವೇದ' ಗೀತಾ ಪಿಕ್ಚರ್ಸ್ ನಡೆಯೇನು?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ವೇದ' ರಿಲೀಸ್ ಆದ ಬಳಿಕ ದೊಡ್ಡ ಪ್ಲ್ಯಾನ್ ಅನ್ನೇ ಹಮ್ಮಿಕೊಂಡಿದ್ದಾರೆ. ಇತ್ತೀಚೆಗೆ ಕರ್ನಾಟಕ ಟಿವಿ ಜೊತೆಗಿನ ಸಂದರ್ಶನದಲ್ಲಿ ಹೊಸಬರಿಗೂ ಸಿನಿಮಾ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. "ಗೀತಾ ಫಿಕ್ಚರ್ಸ್ ಕೇವಲ ಶಿವಣ್ಣನ ಸಿನಿಮಾ ಮಾಡೋಕೆ ಅಷ್ಟೇ ಇಲ್ಲ. ಬೇರೆಯವರಿಗೂ ಅವಕಾಶ ಆಗಬೇಕು. ಹೊಸಬರಿಗೂ ಒಂದು ಅವಕಾಶ ಸಿಗುತ್ತೆ. ಹೊಸ ಡೈರೆಕ್ಟರ್‌ಗಳು ಪ್ಲ್ಯಾನ್ ಮಾಡಿ ಸಿನಿಮಾ ಮಾಡಬೇಕು." ಎಂದು ಶಿವಣ್ಣ ಹೇಳಿದ್ದಾರೆ.

ಶಿವಣ್ಣ ಮಗಳಿಂದ 5 ವೆಬ್ ಸಿರೀಸ್
"ನಿವೇದಿತಾ ನನ್ನ ಚಿಕ್ಕ ಮಗಳು ಶ್ರೀಮುತ್ತು ಸಂಸ್ಥೆಯಿಂದ ವೆಬ್ ಸೀರೀಸ್ ಮಾಡುತ್ತಿದ್ದಾರೆ. ಈಗ ಮತ್ತೆ ವೆಬ್ ಸಿರೀಸ್‌ಗೆ ಅವಕಾಶಗಳು ಬರುತ್ತಿವೆ. ಕನ್ನಡ ಚಿತ್ರರಂಗ ಈಗ ಮುಂದೆ ಹೋಗಿರುವುದರಿಂದ ವೆಬ್ ಸಿರೀಸ್‌ಗೂ ಅವಕಾಶಗಳನ್ನು ಕೊಡುತ್ತಿದ್ದಾರೆ. ನನ್ನ ಮಗಳು ವೆಬ್ ಸೀರೀಸ್ ಕೇಳಿ ಈಗಾಗಲೇ ಆರೇಳು ಕಥೆಗಳನ್ನು ರೆಡಿ ಮಾಡಿಟ್ಟುಕೊಂಡಿದ್ದಾಳೆ." ಎಂದು ಶಿವರಾಜ್‌ಕುಮಾರ್ ಚಿಕ್ಕ ಮಗಳ ಸಿನಿಮಾ ನಡೆಯ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡುವುದಕ್ಕೆ ನಿರ್ಧರಿಸಲಾಗಿದೆ. ಗೀತಾ ಪಿಕ್ಚರ್ಸ್ ಸಂಸ್ಥೆಯಿಂದ ಕಮ್ಮಿ ಅಂದ್ರೂ, 5 ವೆಬ್ ಸಿರೀಸ್ ಹಾಗೂ 5 ಸ್ಮಾಲ್ ಬಜೆಟ್ ಸಿನಿಮಾಗಳನ್ನು ಕೊಡುವ ಉತ್ಸಾಹದಲ್ಲಿ ಶಿವಣ್ಣ ನಿಂತಿದ್ದಾರೆ. "2023 ಜನವರಿಯಲ್ಲಿ ಐದು ವೆಬ್ ಸೀರೀಸ್ ಅನೌನ್ಸ್ ಮಾಡುತ್ತೇವೆ. ನನ್ನ ಹುಟ್ಟುಹಬ್ಬದ ಒಳಗೆ ಐದು ವೆಬ್ ಸಿರೀಸ್ ಹಾಗೂ ಐದು ಸ್ಮಾಲ್ ಬಜೆಟ್ ಕೊಡಬೇಕು ಅನ್ನೋ ಆಸೆಯಿದೆ." ಎಂದು ಶಿವಣ್ಣ ಹೇಳಿದ್ದಾರೆ.

ಅಣ್ಣಾವ್ರ ನೆನಪಿಸಿಕೊಂಡ ಶಿವಣ್ಣ
ಕಾಲ ಬದಲಾದಂತೆ ನಾವೂ ಬದಲಾಗಬೇಕು ಎಂದು ಅಣ್ಣಾವ್ರ ನಟಿಸಿದ 'ಬಹದ್ದೂರು ಗಂಡು' ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. "ಅಪ್ಪಾಜಿ ಬಹದ್ದೂರು ಗಂಡು ಸಿನಿಮಾದಲ್ಲಿ ಮೊದಲೇ ಹೇಳಿದ್ದಾರೆ. ಮುತ್ತಿನಂಥ ಮಾತೊಂದು ಗೊತ್ತೇನಮ್ಮ.. ನಿನಗೆ ಗೊತ್ತೇನಮ್ಮ.. ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು.. ಕಾಲಕ್ಕೆ ತಕ್ಕಂತೆ ಕುಣಿಯಬೇಕು. ಅಪ್‌ಡೇಟ್ ಆಗಬೇಕು ಅಂತೀವಿ. ಅವರು ಅವಾಗಲೇ ಹೇಳಿಬಿಟ್ಟಿದ್ದಾರೆ. ಅದಕ್ಕೆ ಓಲ್ಡ್ ಈಸ್ ಗೋಲ್ಡ್ ಅನ್ನೋದು." ಎಂದು ಶಿವಣ್ಣ ಹೇಳಿದ್ದಾರೆ.