»   » ಶಿವಣ್ಣನ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ

ಶಿವಣ್ಣನ ಅಭಿಮಾನಿಗಳಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ಸಿನಿಮಾ 'ಓಂ'. ಕೌಟುಂಬಿಕ, ಪ್ರೇಮ ಕಥೆ ಕುರಿತಾದ ಚಿತ್ರಗಳೇ ಟ್ರೆಂಡ್ ಆಗಿದ್ದ ಕಾಲದಲ್ಲಿ, ಬೆಂಗಳೂರಿನ ಭೂಗತ ಲೋಕದ ಕರಾಳ ಅಧ್ಯಾಯವನ್ನ ಅನಾವರಣ ಮಾಡಿ ಹೊಸ ಕ್ರೇಜ್ ಹುಟ್ಟುಹಾಕಿದ ಸಿನಿಮಾ 'ಓಂ'.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೃತ್ತಿಬದುಕಿಗೆ ದೊಡ್ಡ ತಿರುವು ಕೊಟ್ಟ ಈ ಚಿತ್ರ, ಇಲ್ಲಿಯವರೆಗೂ ಅದೆಷ್ಟು ಬಾರಿ ರೀ ರಿಲೀಸ್ ಆಗಿದೆಯೋ ಲೆಕ್ಕವಿಲ್ಲ. ಪ್ರತಿ ಬಾರಿ ಥಿಯೇಟರ್ ಗೆ ಅಪ್ಪಳಿಸಿದಾಗಲೂ, ಹೌಸ್ ಫುಲ್ ಪ್ರದರ್ಶನ ಕಾಣುವ 'ಓಂ' ಸಿನಿಮಾ ಇದೀಗ ಮಗದೊಮ್ಮೆ ನಿಮ್ಮ ಕಣ್ಣ ಮುಂದೆ ಬರಲಿದೆ.

  5.1 ಡಿಜಿಟಲ್ ಸರೌಂಡ್ ಸೌಂಡ್ ಎಫೆಕ್ಟ್ ನಲ್ಲಿ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ರೀ ರೆಕಾರ್ಡ್ ಆಗಿರುವ 'ಓಂ' ಸಿನಿಮಾ ಮಾರ್ಚ್ ನಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ. ಆ ಮೂಲಕ ಮತ್ತೊಮ್ಮೆ 'ಓಂ' ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಲಿದೆ. ಮುಂದೆ ಓದಿ....

  1994 ರಲ್ಲಿ ಸೆಟ್ಟೇರಿದ 'ಓಂ'

  ರಿಯಲ್ ಸ್ಟಾರ್ ಅಂತ ಈಗ ಕರೆಯಿಸಿಕೊಳ್ಳುವ ಉಪೇಂದ್ರ, ಆಗಿನ್ನೂ ಸ್ಟಾರ್ ನಿರ್ದೇಶಕರಾಗಿರಲಿಲ್ಲ. ಉಪ್ಪಿಯ 'ಶ್' ಸಿನಿಮಾದಲ್ಲಿ ಭಾಗಿಯಾಗಿದ್ದ ರಾಜ್ ಕುಟುಂಬದ ಆಪ್ತ ಹೊನ್ನವಳ್ಳಿ ಕೃಷ್ಣ, ಉಪ್ಪಿಯ ಸಿನಿಮಾ ಮೇಕಿಂಗ್ ಶೈಲಿಯನ್ನು ಕಂಡು ಬೆರಗಾಗಿದ್ದರು. ಅದನ್ನ ಹೊನ್ನವಳ್ಳಿ ಕೃಷ್ಣ, ಪಾರ್ವತಮ್ಮನವರ ಬಳಿ ಹಂಚಿಕೊಂಡಿದ್ದರು. ಉಪ್ಪಿಯಲ್ಲಿದ್ದ ಪ್ರತಿಭೆಯನ್ನ ಕೇಳಿ, ಶಿವಣ್ಣನಿಗೆ ಒಂದು ಸಿನಿಮಾ ಮಾಡಿಸಬೇಕು ಅಂದುಕೊಂಡ ಪಾರ್ವತಮ್ಮ ರಾಜ್ ಕುಮಾರ್ ಉಪ್ಪಿಗೆ ಬುಲಾವ್ ನೀಡಿದರು.

  ಆಗಿನ್ನು ಉಪ್ಪಿಗೆ 26 ವರ್ಷ..!

  ಸದಾಶಿವನಗರದಲ್ಲಿರುವ ರಾಜ್ ಕುಮಾರ್ ಮನೆಗೆ ತೆರಳಿದ ಉಪ್ಪಿ, ಬಹುದಿನಗಳಿಂದ ಅವರ ತಲೆಯಲ್ಲಿ ಕೊರೆಯುತ್ತಿದ್ದ ಕಥೆಯನ್ನ ಅಣ್ಣಾವ್ರಿಗೆ ಮತ್ತು ಅವರ ಸಹೋದರ ವರದಪ್ಪನವರಿಗೆ ಹೇಳಿದರು. ರೌಡಿಸಂ ಕಥೆಯಾದರೂ, ಚಿತ್ರಕಥೆ ಅಣ್ಣಾವ್ರಿಗೆ ಇಷ್ಟವಾಯ್ತು. ಸಿನಿಮಾದಲ್ಲಿದ್ದ ಸಂದೇಶ ವರದಪ್ಪನ ಮನಸ್ಸು ಮುಟ್ಟಿತು. ತಕ್ಷಣ ಹಿಂದು ಮುಂದು ನೋಡದೇ, ಡಿಸೆಂಬರ್ 7, 1994 ರಲ್ಲಿ 'ಓಂ' ಚಿತ್ರಕ್ಕೆ ತಮ್ಮ ಮನೆಯಲ್ಲೇ ಮುಹೂರ್ತ ಸಮಾರಂಭಕ್ಕೆ ಅಣ್ಣಾವ್ರು ಚಾಲನೆ ನೀಡಿದರು. ಆಗಿನ್ನೂ ಉಪ್ಪಿಗೆ 26 ವರ್ಷ.

  ಕುಂಕುಮದಲ್ಲಿ ಬರೆದ 'ಓಂ'

  ಏನೇ ಕೆಲಸ ಮಾಡಿದರೂ, 'ಓಂ'ಕಾರದಿಂದ ಶುರುಮಾಡುವ ಅಭ್ಯಾಸ ಉಪೇಂದ್ರ ಅವರದ್ದು. ಮುಹೂರ್ತದ ದಿನ, ಅಣ್ಣಾವ್ರ ಕೈಯಲ್ಲಿ ಕುಂಕುಮ ಕೊಟ್ಟು 'ಓಂ' ಬರೆಸಿದ್ದ ಉಪ್ಪಿ, ಅದನ್ನೇ ಟೈಟಲ್ ಆಗಿ ಎಲ್ಲಾ ಪೋಸ್ಟರ್ ಗಳಲ್ಲಿ ಬಳಸಿಕೊಳ್ಳುತ್ತಾರೆ.

  ಮೊದಲ ಬಾರಿ 'ಲಾಂಗ್' ಹಿಡಿದ ಶಿವಣ್ಣ

  ಇಂದಿಗೂ ಶಿವಣ್ಣ ಲಾಂಗ್ ಹಿಡಿಯುವುದಕ್ಕೆ ಫೇಮಸ್. ಶಿವಣ್ಣ ಲಾಂಗ್ ಹಿಡಿದ್ರೆ, ಗಾಂಧಿನಗರದ ನೆಲ ಇವತ್ತೂ ನಡುಗೋಕೆ ಕಾರಣ ಅವರು ಮೊದಲು ಲಾಂಗ್ ಹಿಡಿದ 'ಓಂ' ಸಿನಿಮಾ. ನಾಯಕಿ ಪ್ರೇಮ ಎಸೆಯುವ ಲಾಂಗ್ ನ ಸ್ಟೈಲಿಶ್ ಆಗಿ ಶಿವಣ್ಣ ಹಿಡಿಯುವ ಸೀನ್ ನೋಡೋಕಂತ್ಲೇ ಚಿತ್ರಮಂದಿರಕ್ಕೆ ಮುಗಿಬೀಳುವ ಜನರಿದ್ದಾರೆ.

  ರೌಡಿಸಂ ಮಿಶ್ರಿತ ಪ್ರೇಮ ಕಥೆ 'ಓಂ'

  ಭೂಗತ ಪಾತಕಿ ಸತ್ಯ. ಅವನಿಗೆ ಪ್ರೇಮ ಅನ್ನುವ ಹುಡುಗಿ ಮೇಲೆ ಹುಚ್ಚು ಪ್ರೇಮ. ಹೀಗೆ ಶುರುವಾಗುವ ಕಥೆ ಹೊಸತೊಂದು ತಿರುವು ಪಡೆದುಕೊಳ್ಳುತ್ತೆ. ಅಸಲಿಗೆ, ಸತ್ಯ ಭೂಗತಪಾತಕಿ ಆಗೋದಕ್ಕೆ ಕಾರಣವೇ ಪ್ರೇಮ ಅನ್ನುವುದು ನಂತರದ ಕಥೆ. ಕೌರ್ಯ, ಹಿಂಸೆಯನ್ನ ತೆರೆಮೇಲೆ ತೋರಿಸಿದ ಈ ಸಿನಿಮಾದಲ್ಲಿ ಹಂಸಲೇಖರ ಸುಮಧುರ ಸಂಗೀತ ಕೂಡ ಅಷ್ಟೇ ಜನಪ್ರಿಯವಾಗಿತ್ತು. [ಬಾಕ್ಸ್ ಆಫೀಸಲ್ಲಿ ಶಿವಣ್ಣ 'ಓಂ' ಭರ್ಜರಿ ಓಪನಿಂಗ್]

  ರಿಯಲ್ ರೌಡಿಗಳೂ ನಟಿಸಿದ್ದರು

  'ಓಂ' ಚಿತ್ರದಲ್ಲಿ ರಿಯಲ್ ರೌಡಿಗಳೂ ಕಾಣಿಸಿಕೊಂಡಿದ್ದು ವಿಶೇಷ. ಕುಖ್ಯಾತ ರೌಡಿಗಳಾದ ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಮತ್ತು ತನ್ವೀರ್ ಮೊದಲ ಬಾರಿ ತೆರೆಮೇಲೆ ಕಾಣಿಸಿಕೊಂಡಿದ್ದರು. [ತ್ರಿವೇಣಿ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ]

  20 ವರ್ಷಗಳಾದರೂ ಈಗಲೂ ಹೌಸ್ ಫುಲ್!

  'ಓಂ' ಸಿನಿಮಾ ರಿಲೀಸ್ ಆಗಿ 20 ವರ್ಷಗಳಾಗಿವೆ. ಈಗಲೂ ಚಿತ್ರ ರೀ ರಿಲೀಸ್ ಆದ್ರೆ, ಜನ ಮುಗಿ ಬಿದ್ದು ಚಿತ್ರಮಂದಿರಕ್ಕೆ ಬರುತ್ತಾರೆ. ಬೇರೇ ಯಾವುದೇ ಚಿತ್ರ ಬಿಡುಗಡೆಯಾಗಿದ್ದರೂ, 'ಓಂ' ಚಿತ್ರಕ್ಕೆ ಹೌಸ್ ಫುಲ್ ಬೋರ್ಡ್ ಬೀಳುವುದು ಪಕ್ಕಾ. ಇಷ್ಟೊಂದು ಕ್ರೇಜ್ ಇರುವ 'ಓಂ' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಇದೆ. ಆದರೂ ಇಂದಿಗೂ ಸಿನಿಮಾದ ಪ್ರಸಾರ ಹಕ್ಕುಗಳು ಸೇಲ್ ಆಗಿಲ್ಲ.

  ಎಲ್ಲಾ ಚಿತ್ರಮಂದಿರಗಳಲ್ಲೂ ಪರ್ಮನೆಂಟ್ ಕಾಪಿ ಇದೆ

  ಚಿತ್ರಮಂದಿರಗಳಲ್ಲಿ ಲಾಭ ಕಡಿಮೆ ಆದಾಗ, ವಿತರಕರು ಕೊಂಚ ಕಷ್ಟದಲ್ಲಿದ್ದಾಗ, ಅವರೆಲ್ಲರಿಗೂ ಆಪತ್ಭಾಂಧವ ಈ 'ಓಂ' ಸಿನಿಮಾ. ಹೀಗಾಗಿ, ಬೆಂಗಳೂರಿನ ಬಹುತೇಕ ದೊಡ್ಡ ಥಿಯೇಟರ್ ಗಳಲ್ಲಿ 'ಓಂ' ಚಿತ್ರದ ಓರಿಜಿನಲ್ ಕಾಪಿ ಇದೆ. ಹಳೇ ಕಾಪಿಗೆ ಇದೀಗ ಡಿ.ಟಿ.ಎಸ್ ಟಚ್ ಕೊಟ್ಟು ಅಚ್ಚ ಹೊಸ ಕಾಪಿಯ 'ಓಂ' ಸಿನಿಮಾ ಮಾರ್ಚ್ ಮೊದಲ ವಾರದಲ್ಲಿ ಮರು ಬಿಡುಗಡೆಯಾಗುತ್ತಿದೆ. [ಡಿಟಿಎಸ್ ನಲ್ಲಿ ಶಿವಣ್ಣ ಮಚ್ಚು ಹಿಡಿದ ಮೊದಲ ಚಿತ್ರ ಓಂ]

  English summary
  Hat-trick Hero Shivarajkumar's Blockbuster movie Om is all set to hit the screens in March with 5.1 surround sound effect. With the remastered print, it would be interesting to see how well the movie does in theaters.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more