»   » ಹೆಚ್ಎಸ್ಆರ್ ಲೇಔಟ್ ನಲ್ಲಿ ಶಿವ ರೋಡ್ ಶೋ

ಹೆಚ್ಎಸ್ಆರ್ ಲೇಔಟ್ ನಲ್ಲಿ ಶಿವ ರೋಡ್ ಶೋ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಶಿವ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ಚಿತ್ರತಂಡ ಮಂಗಳವಾರ (ಆ.28) ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಲ್ಲಿ ರೋಡ್ ಶೋ ನಡೆಸಿತು. ಪರಭಾಷಾ ಚಿತ್ರಗಳ ಪ್ರಭಾವದ ನಡುವೆಯೂ ಕನ್ನಡ ಚಿತ್ರವನ್ನು ಕೈಹಿಡಿದು ಮುನ್ನಡೆಸುತ್ತಿರುವ ಬಗ್ಗೆ ಶಿವಣ್ಣ ಆಭಾರಿಯಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದರು.

"ನಿಮ್ಮಂತಹ ಅಭಿಮಾನಿಗಳಿಂದ ಕನ್ನಡದ ಕಲಾವಿದರು ಅನ್ನ ತಿನ್ನುತ್ತಿದ್ದಾರೆ. ನಿಮ್ಮ ಈ ಸಹಕಾರಕ್ಕೆ ಅನಂತ ಧನ್ಯವಾದಳು ಎಂದ ಅವರು, ನಿಮ್ಮಗಳ ಅಭಿಮಾನಕ್ಕೆ ಚಿರಋಣಿಯಾಗಿರುವುದಾಗಿ" ಹೇಳಿದರು. ಹೆಚ್ಎಸ್ಆರ್ ಲೇಔಟ್ ನ ಅಗರದಲ್ಲಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ತಿರುಮಲ ಚಿತ್ರಮಂದಿರ ಈ ರೋಡ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ತೆರೆದ ವಾಹನದಲ್ಲಿ ಶಿವಣ್ಣ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಅವರಿಗೆ ತಿರುಮಲ ಚಿತ್ರಮಂದಿರದ ಮಾಲೀಕ ಶಂಕರ ರೆಡ್ಡಿ, ಅಗರದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳಾದ ರಂಗನಾಥ್ ಯಾದವ್, ಹೆಚ್ಎಸ್ಆರ್ ಲೇಔಟ್ ನ ಸಮಾಜ ಸೇವಕ ನರಸಿಂಹಮೂರ್ತಿ ಮುಂತಾದವರು ಸಾಥ್ ನೀಡಿದರು.

ಎನ್ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣನಿಗೆ ಗ್ಲಾಮರ್ ಗರ್ಲ್ ರಾಗಿಣಿ ದ್ವಿವೇದಿ ಜೋಡಿ. ಕೆಪಿ ಶ್ರೀಕಾಂತ್ ನಿರ್ಮಾಣದ ಬಹುನಿರೀಕ್ಷೆಯ ಈ ಚಿತ್ರಕ್ಕೆ ಶಿವಣ್ಣರಿಗೆ ಮೊದಲ ಬಾರಿ ರಾಗಿಣಿ ನಾಯಕಿಯಾಗಿದ್ದಾರೆ. 'ಮೈಲಾರಿ' ನಂತರ ಶಿವಣ್ಣರ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ವಿಶೇಷ ಗ್ರಾಫಿಕ್ಸ್ ಮೂಲಕ ಚಿತ್ರವು ತಾಂತ್ರಿಕವಾಗಿ ತುಂಬಾ ಅದ್ದೂರಿಯಾಗಿದ್ದು ಚಿತ್ರದ ಹೈಲೈಟ್.

ತೆಲುಗು ಚಿತ್ರಗಳ ಪ್ರಭಾವ ಅತಿಯಾಗಿರುವ ಬಳ್ಳಾರಿ, ಹೊಸಪೇಟೆಯಲ್ಲೂ 'ಶಿವ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹತ್ತು ವರ್ಷಗಳ ಗ್ಯಾಪ್ ಬಳಿಕ ಓಂ ಪ್ರಕಾಶ್ ರಾವ್ ಡೈರೆಕ್ಷನ್ ನಲ್ಲಿ ಶಿವಣ್ಣ ಅಭಿನಯಿಸಿರುವ ಚಿತ್ರವಿದು. ಜೋಗಯ್ಯ ನಂತರ ಶಿವಣ್ಣ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಬಂದಿದ್ದ ಜೋಗಯ್ಯ ಕೂಡ 'ಫ್ಲಾಪ್'. ಹೀಗಾಗಿ ಶಿವ ಚಿತ್ರ ಶಿವಣ್ಣ ಅಭಿಮಾನಿಗಳ ಪಾಲಿಗೆ ಸಖತ್ ಇಷ್ಟವಾಗಿದೆ. ಶಿವ ಚಿತ್ರವಿಮರ್ಶೆ ಓದಿ. (ನಮ್ಮ ವರದಿಗಾರನಿಂದ)

English summary
Kannada actor Shivarajkumar's road show held at HSR layout in Bangalore receives good response from audience. Meanwhile Shivanna's 101st film Shiva collection would come nearing to Rs. 4 crores it is estimated by trade pundits in opening weekend.
Please Wait while comments are loading...