»   » ಅಣ್ಣಾವ್ರ ಹುಟ್ಟುಹಬ್ಬಕ್ಕಿಲ್ಲ ಶಿವಣ್ಣನ 'ಬಾದ್ ಷ'..!?

ಅಣ್ಣಾವ್ರ ಹುಟ್ಟುಹಬ್ಬಕ್ಕಿಲ್ಲ ಶಿವಣ್ಣನ 'ಬಾದ್ ಷ'..!?

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಣ್ಣಾವ್ರ ಮಕ್ಕಳ ಹೊಸ ಸಿನಿಮಾಗಳು ಸೆಟ್ಟೇರುತ್ತಿರುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಶಿವರಾಜ್ ಕುಮಾರ್ ಅಭಿನಯದ 'ಬಾದ್ ಷ' ಮುಹೂರ್ತ, ಪುನೀತ್ ರಾಜ್ ಕುಮಾರ್ ನಟನೆಯ 'ರಾಜಕುಮಾರ' ಮತ್ತು 3G ಸ್ಟಾರ್ ವಿನಯ್ ಎರಡನೇ ಸಿನಿಮಾದ ಟೈಟಲ್ ಲಾಂಚ್ ಏಪ್ರಿಲ್ 24 ರಂದೇ ಆಗಲಿದೆ ಅಂತ ಜಗಜ್ಜಾಹೀರಾಗಿತ್ತು.

'ರಾಜಕುಮಾರ' ಮತ್ತು ವಿನಯ್ ರಾಜ್ ಕುಮಾರ್ ಚಿತ್ರದ ಶೀರ್ಷಿಕೆ ಅನಾವರಣ ಅಪ್ಪಾಜಿ ಹುಟ್ಟುಹಬ್ಬದಂದೇ ಆಗುವುದು ಖಚಿತ. ಆದ್ರೆ, 'ಬಾದ್ ಷ' ಮುಹೂರ್ತ ನೆರವೇರುವುದು ಮಾತ್ರ ಅನುಮಾನ. ಹೀಗಂತ ನಾವು ಹೇಳುತ್ತಿಲ್ಲ. ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಖುದ್ದು ಆರ್.ಚಂದ್ರು ಹೇಳಿದರು. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]


Shivarajkumar starrer 'Baadshah' muhoortha doubt on April 24th

ನಿರ್ದೇಶಕ ಆರ್.ಚಂದ್ರು ಸದ್ಯಕ್ಕೆ 'ಮಳೆ' ಮತ್ತು 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿದ್ದಾರೆ. ಎರಡೂ ಚಿತ್ರಗಳು ರಿಲೀಸ್ ಆಗುವವರೆಗೂ, ಹೊಸ ಪ್ರಾಜೆಕ್ಟ್ ಗೆ ಕೈಹಾಕುವುದು ಕಷ್ಟ ಅಂತಾರೆ ಆರ್.ಚಂದ್ರು. [ಡಾ.ರಾಜ್ ಹುಟ್ಟುಹಬ್ಬ ; ಎಲ್ಲೆಲ್ಲಿ ಏನೇನು ವಿಶೇಷ..?]


''ಮಳೆ' ಸಿನಿಮಾ ಮೇ ನಲ್ಲಿ ರಿಲೀಸ್ ಆಗಲಿದೆ. ಇನ್ನೂ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರಕ್ಕೆ ಫೈನಲ್ ಟಚ್ ಕೊಡುತ್ತಿದ್ದೇನೆ. ಎರಡು ಸಿನಿಮಾ ರಿಲೀಸ್ ಆದ್ಮೇಲೆ, 'ಬಾದ್ ಷ' ಮುಹೂರ್ತ ಮಾಡುತ್ತೇನೆ. ಏಪ್ರಿಲ್ 24 ರಂದು ಮುಹೂರ್ತ ಕಷ್ಟ. ಆದ್ರೆ, ಸಣ್ಣದಾಗಿ ಪೂಜೆ ಮಾಡಿ ಸಾಂಗ್ ರೆಕಾರ್ಡಿಂಗ್ ಮಾಡಬಹುದು. ಇನ್ನೂ ನಿರ್ಧಾರ ಮಾಡಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಆರ್.ಚಂದ್ರು ತಿಳಿಸಿದರು.


Shivarajkumar starrer 'Baadshah' muhoortha doubt on April 24th

ಅಲ್ಲಿಗೆ, 'ಬಾದ್ ಷ'ಗೆ ಮುಹೂರ್ತ ಭಾಗ್ಯ ಸದ್ಯಕ್ಕಿಲ್ಲ. ಹಾಗ್ನೋಡಿದ್ರೆ, ಏಪ್ರಿಲ್ 1 ರಂದೇ 'ಬಾದ್ ಷ' ಮುಹೂರ್ತ ನೆರವೇರಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಅದು ಆಗ್ಲಿಲ್ಲ. ಇನ್ನೂ ಶಿವಣ್ಣ ಕೂಡ ಈಗ 'ಶಿವಲಿಂಗು' ಮತ್ತು 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. [ಶಿವಣ್ಣ ಮಹತ್ವಾಕಾಂಕ್ಷಿ 'ಬಾದ್ ಷಾ'ಗೆ ಬಾಹುಬಲಿ ತಂಡ]


ಈ ಎರಡು ಚಿತ್ರಗಳು ಮುಗಿದ ಬಳಿಕ 'ಶ್ರೀಕಂಠ' ಅಂತಿದ್ದಾರೆ ಸೆಂಚುರಿ ಸ್ಟಾರ್. ಅಲ್ಲಿಗೆ, 'ಬಾದ್ ಷ' ಇಬ್ಬರಿಗೂ ಲಾಂಗ್ ಟರ್ಮ್ ಪ್ರಾಜೆಕ್ಟ್ ಲೆಕ್ಕ. (ಫಿಲ್ಮಿಬೀಟ್ ಕನ್ನಡ)

English summary
Earlier it was reported that, Shivarajkumar starrer 'Baadshah' muhoortha is scheduled on April 24th on the occasion of Dr.Rajkumar's Birthday. But now, Director R.Chandru has decided to Launch 'Baadshah' after the release of 'Male' and 'Krishnamma Kalipindi Iddarini'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada